ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bollywood Actress: ಬೋ ವಿನ್ಯಾಸದ ಸ್ಕರ್ಟ್‌ನಲ್ಲಿ ಮಿಂಚಿದ ಬಾಲಿವುಡ್‌ ನಟಿಯರು

ಪ್ರತಿ ಸೀಸನ್‌ನಲ್ಲಿ ಒಂದೊಂದು ವಿನ್ಯಾಸದ ಡ್ರೆಸ್‌ ಟ್ರೆಂಡಿಂಗ್‌ನಲ್ಲಿರುತ್ತವೆ. ಅದರಲ್ಲೂ ಸಿನಿಮಾ ನಟ- ನಟಿಯರು ಆಯ್ಕೆ ಮಾಡುವ ಸ್ಟೈಲಿಶ್‌ ಡ್ರೆಸ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಬಾಲಿವುಡ್‌ನ ಹಲವು ನಟಿಯರು ಮಿನಿ ಸ್ಕರ್ಟ್ ಬೋ (Bow) ಡಿಸೈಸ್‌ನ ಉಡುಪು ಧರಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

actresses Bow Dresses
1/6

ಸಾರಾ ಅಲಿ ಖಾನ್

ಸಿನಿಮಾ ಅಲ್ಲದೆ ನಟಿ ಸಾರಾ ಅಲಿ ಖಾನ್ ಆಗಾಗ ವೈಯಕ್ತಿಕ ವಿಚಾರವಾಗಿಯೂ ಸುದ್ದಿಗೆ ಗ್ರಾಸವಾಗುತ್ತಾರೆ. ಫ್ಯಾಷನ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ʼಝರಾ ಹಟ್‌ಕೆ ಝರಾ ಬಚ್ಕೆ' ಚಿತ್ರದ ಮ್ಯೂಸಿಕ್ ಬಿಡುಗಡೆ ಸಂದರ್ಭದಲ್ಲಿ ನೀಲಿ ಬಣ್ಣದ ಮಿನಿ ಡ್ರೆಸ್‌ನಲ್ಲಿ ಗಮನ ಸೆಳೆದಿದ್ದರು. ಈ ಡ್ರೆಸ್ ಗೆ ಹಿಂಬದಿಯಲ್ಲಿ ಬೋ (Bow) ಸ್ಟೈಲ್‌ನ ಅಲಂಕಾರವಿತ್ತು.

2/6

ಜಾಹ್ನವಿ ಕಪೂರ್

ಜಾಹ್ನವಿ ಕಪೂರ್​ ಅವರಿಗೆ ಫೋಟೊ ಕ್ಲಿಕ್ಕಿಸುವ ಕ್ರೇಜ್​ ಹೆಚ್ಚು. ಆಗಾಗ ಅವರು ಫೋಟೊ ಶೂಟ್​ ಮಾಡಿಸಿ ಕಲರ್​​ಫುಲ್​ ಫೋಟೊಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆ ಮಿನಿ ಬೋ ಡ್ರೆಸ್‌ನಲ್ಲಿ ಜಾಹ್ನವಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಭಾಗದಲ್ಲಿ ಇರುವ ಬೋ ಡಿಸೈನ್ ನಟಿಯ ಲುಕ್ ಗೆ ಸಖತ್ ಹೊಂದಿಕೆಯಾಗುವಂತೆ ಮಾಡಿದೆ.

3/6

ಭೂಮಿ ಪೆಡ್ನೇಕರ್

ʼದಿ ರಾಯಲ್ಸ್ʼ ನಟಿ ಭೂಮಿ ಬ್ರೌನ್ ಬಣ್ಣದ ಗೌನ್ ಧರಿಸಿ ಗಮನ ಸೆಳೆದಿದ್ದರು. ಈ ಡ್ರೆಸ್‌ನ ಹಿಂಬದಿಯಲ್ಲಿ ಬೋ ಡಿಸೈನ್ ಅಲಂಕಾರವಿತ್ತು. ಸಿಂಪಲ್ ಮೇಕಪ್ ಹಾಗೂ ಸ್ಟಡ್ ಇಯರಿಂಗ್‌ ಧರಿಸಿದ್ದ ಇವರ ಲುಕ್ ವಿಭಿನ್ನವಾಗಿತ್ತು.

4/6

ನಿತಾಂಶಿ ಗೋಯಲ್

ʼಲಾಪತಾ ಲೇಡೀಸ್’ ಸಿನಿಮಾ‌ ಮೂಲಕ ಖ್ಯಾತಿ ಪಡೆದ ನಟಿ ನಿತಾಂಶಿ ಗೋಯಲ್ ಕಾನ್ಸ್ ಚಿತ್ರೋತ್ಸವದಲ್ಲಿ ಪಿಂಕ್ ಮಿನಿ ಡ್ರೆಸ್ ಧರಿಸಿದ್ದರು. ಈ ಡ್ರೆಸ್‌ನ ಹಿಂಬದಿಯ ಬಟರ್‌ಫ್ಲೈ ಶೈಲಿಯ ಬೋ ಡಿಸೈನ್ ನೆಟ್ಟಿಗರ ಗಮನ ಸೆಳೆಯಿತು.

5/6

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಶೋಲ್ಡರ್ ಲೆಸ್ ಗೌನ್ ಧರಿಸಿದ್ದು ಈ ಫೋಟೊದಲ್ಲಿ ಆಕರ್ಷಕವಾಗಿ ಕಂಡಿದ್ದಾರೆ. ಈ ಡ್ರೆಸ್‌ಗೆ ಹಿಂಬದಿಯಲ್ಲಿ‌ ಬೋ ಡಿಸೈನ್ ಇದ್ದು, ಇವರ ಲುಕ್‌ಗೆ ಮತ್ತಷ್ಟು ವಿಶಿಷ್ಟತೆ ನೀಡಿದೆ.

6/6

ಮಲೈಕಾ ಅರೋರಾ

ಮಲೈಕಾ ಬ್ಲ್ಯಾಕ್ ಸೀಕ್ವಿನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ‌. ಈ ಡ್ರೆಸ್‌ನ ನೆಕ್ ಡಿಸೈನ್ ಮತ್ತು ಬೋ ಲುಕ್‌ ಡಿಸೈನ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು.