Anchor Anushree: ತಾಳಿ ಕಟ್ಟುವ ವೇಳೆಯಲ್ಲಿ ಭಾವುಕರಾದ ಅನುಶ್ರೀ ; ಮದುವೆ ಫೋಟೋಗಳು ಇಲ್ಲಿವೆ ನೋಡಿ
ಸ್ಯಾಂಡಲ್‌ವುಡ್‌ನ ಆ್ಯಂಕರ್ ಅನುಶ್ರೀ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನಗಳ ಗೆಳೆಯ ಕೊಡಗು ಮೂಲದ ರೋಷನ್ ಜೊತೆಗೆ ಅನುಶ್ರೀ ಮದುವೆ ನೆರವೇರಿದೆ. 10: 56 ನಿಮಿಷಕ್ಕೆ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ರೋಷನ್.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಇಂದು ಉದ್ಯಮಿ ರೋಷನ್ ಅವರ ಕೈಹಿಡಿದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತನಾಡದ ಅನುಶ್ರೀ ಈಗ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದರು.
ಅನುಶ್ರೀ ಅವರ ಮದುವೆ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆಯುತ್ತಿದೆ. ಇಷ್ಟು ದಿನ ಅಭಿಮಾನಿಗಳು ಅನುಶ್ರೀಗೆ ಮಾದುವೆ ಯಾವಾಗ? ಎಂದು ಪ್ರಶ್ನಿಸಿಸುತ್ತಿದ್ದರು. ಇದೀಗ ಅವರು ಕೊಡಗು ಮೂಲದ ರೋಷನ್ ಜೊತೆ ಸಪ್ತಪದಿ ತುಳಿದಿದ್ದಾರೆ.
ವಿವಾಹ ಕಾರ್ಯಕ್ರಮಕ್ಕೆ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದಾರೆ.
ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.
ನಿನ್ನೆ ಗಣೇಶ ಚತುರ್ಥಿ ದಿನದಂದು ಇವರರಿಬ್ಬರ ಹಳದಿ ಶಾಸ್ತ್ರ ನೆರವೇರಿತ್ತು. ಇಂದು ವಿವಾಹ ಕಾರ್ಯಕ್ರಮ ನೆರವೇರಿದೆ. ರೋಷನ್ ಅವರು ತಾಳಿ ಕಟ್ಟುವ ಸಂದರ್ಭದಲ್ಲಿ ಅನುಶ್ರೀ ಭಾವುಕರಾಗಿದ್ದಾರೆ.
ಈವರೆಗೆ ಅನುಶ್ರೀ ಅವರು ತಮ್ಮ ಮದುವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಮ್ಯಾರೇಜ್. ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ರಿಲೀಸ್ ಟೈಂನಲ್ಲಿ ಇವರಿಬ್ಬರು ಭೇಟಿಯಾಗಿದ್ದರು.
ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ದಾಂಪತ್ಯ ಜೀವನಕ್ಕೆ ಅನುಶ್ರೀ ಹಾಗೂ ರೋಷನ್ ಕಾಲಿಟ್ಟಿದ್ದಾರೆ. ಅನುಶ್ರೀ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾದ್ದರಿಂದ ಅವರ ಪತಿಯಾಗುವವರಿಗೂ ಅಭಿಮಾನಿಯಾಗಿರಬೇಕೆಂದು ಆಸೆ ಪಟ್ಟಿದ್ದರು. ರೋಷನ್ ಕೂಡ ಅಪ್ಪು ಅಭಿಮಾನಿಯಂತೆ.
ತಮ್ಮ ನೆಚ್ಚಿನ ನಿರೂಪಕಿಯ ಮದುವೆಗೆಂದ ಬಂದಿದ್ದ ಅಭಿಮಾನಿಗಳಿಗೆ ಮಾತ್ರ ಭಾರೀ ನಿರಾಸೆಯಾಗಿದೆ. ಮದುವೆಗೆ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಸ್ಟುಡಿಯೋ ಒಳಗೆ ಬಿಟ್ಟಿಲ್ಲ ಎಂದು ಅನುಶ್ರೀ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದೇನೆ ಇದ್ದರೂ ಹಲವರು ದೂರದಿಂದಲೇ ಶುಭ ಹಾರೈಸಿ ತೆರಳಿದ್ದಾರೆ.