ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Fashion 2025: ದೀಪಾವಳಿ ಸೀಸನ್‌ನಲ್ಲಿ ಟ್ರೆಂಡಿಯಾದ ಗ್ರ್ಯಾಂಡ್ ಫ್ಯಾಷನ್‌ವೇರ್ಸ್

Deepavali Fashion 2025: ದೀಪಾವಳಿಗೆ ಮಿನುಗುವ ಮಿಂಚುವ ಗ್ರ್ಯಾಂಡ್ ಟ್ರೆಡಿಷನಲ್ ಫ್ಯಾಷನ್‌ವೇರ್ಸ್ ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನರ್‌ವೇರ್‌ಗಳು ಟ್ರೆಂಡ್‌ನಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ವಿಭಿನ್ನ ಡಿಸೈನರ್ ಸ್ಟುಡಿಯೋನ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಅಶ್ವಿನಿ ವಿವರಿಸಿದ್ದಾರೆ.

ಚಿತ್ರಕೃಪೆ: ವಿಭಿನ್ನ ಡಿಸೈನರ್ ಸ್ಟುಡಿಯೋ
1/5

ದೀಪಾವಳಿಗೆ ಗ್ರ್ಯಾಂಡ್ ಲುಕ್‌ ನೀಡುವ ವೈವಿಧ್ಯಮಯ ಮಿನುಗುವ ಮಿಂಚುವ ಫೆಸ್ಟೀವ್ ಕಲೆಕ್ಷನ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಟ್ರೆಡಿಷನಲ್ ಹಾಗೂ ದೇಸಿ ಲುಕ್‌ ನೀಡುವ ಗ್ರ್ಯಾಂಡ್ ಫ್ಯಾಷನ್‌ವೇರ್‌ಗಳದ್ದೇ ಕಾರುಬಾರು!

ದೀಪಾವಳಿಗೆ ಗ್ರ್ಯಾಂಡ್ ಸೀರೆಗಳು

ದೀಪಾವಳಿ ಸಡಗರ ಸಂಭ್ರಮಕ್ಕೆ ಈ ಗ್ರ್ಯಾಂಡ್ ಲುಕ್ ನೀಡುವ ಬಗೆಬಗೆಯ ಬಾರ್ಡರ್, ಪ್ರಿಂಟೆಡ್ ರೇಷ್ಮೆ ಸೀರೆಗಳು, ಮಿನುಗುವ ಡಿಸೈನರ್ ಸೀರೆಗಳು ಸೇರಿದಂತೆ ಹೆವ್ವಿ ವರ್ಕ್‌ನವು ಬಿಡುಗಡೆಗೊಂಡಿವೆ.

2/5

ಟು ಇನ್ ವನ್ ಡಿಸೈನರ್ ಬ್ಲೌಸ್‌ಗಳು

ಹಬ್ಬದ ಸೀಸನ್ನಲ್ಲಿ ಹೆವ್ವಿ ಡಿಸೈನರ್ ಬ್ಲೌಸ್‌ಗಳು ಮಹಿಳೆಯರ ಮನ ಗೆದ್ದಿವೆ. ಸೀರೆ ಮಾತ್ರವಲ್ಲ, ಲೆಹೆಂಗಾ ಅಥವಾ ಸ್ಕರ್ಟ್ ಜತೆಗೂ ಧರಿಸಬಹುದಾದ ಡಿಸೈನ್‌ನಲ್ಲಿ ಪ್ರಚಲಿತದಲ್ಲಿವೆ. ಹಾಗಾಗಿ ಇವನ್ನು ಟು ಇನ್ ವನ್ ಬ್ಲೌಸ್‌ಗಳು ಎನ್ನಲಾಗುತ್ತದೆ ಎನ್ನುತ್ತಾರೆ ಡಿಸೈನರ್.

3/5

ಅತ್ಯಾಕರ್ಷಕ ಹಾಫ್ ಸೀರೆ/ಲೆಹೆಂಗಾ

ಟೀನೇಜ್ ಹುಡುಗಿಯರ ಚಾಯ್ಸ್‌ನಲ್ಲಿ ಇದೀಗ ಹೆವ್ವಿ ಡಿಸೈನ್‌ನ ಹಾಫ್ ಸೀರೆ ಹಾಗೂ ಲೆಹೆಂಗಾಗಳು ಸೇರಿಕೊಂಡಿವೆ. ಅದರಲ್ಲೂ ಬಾಲಿವುಡ್ ಸ್ಟೈಲ್‌ಗೆ ಸಾಥ್ ನೀಡುವಂತವು ಚಾಲ್ತಿಯಲ್ಲಿವೆ. ಗೋಲ್ಡನ್ ಹಾಗೂ ಸಿಲ್ವರ್ ಶೇಡ್‌ನ ಹೆವ್ವಿ ಡಿಸೈನ್‌ನವು ಹೆಚ್ಚು ಬೇಡಿಕೆಯಲ್ಲಿವೆ. ಸ್ಲಿಮ್ ಆಗಿರುವವರಿಗಂತೂ ಇದು ಹೇಳಿ ಮಾಡಿಸಿದ ಫೆಸ್ಟೀವ್‌ ಸೀಸನ್ ಸ್ಟೈಲ್‌ ಸ್ಟೇಟ್‌ಮೆಂಟ್! ಎಂಬುದು ಡಿಸೈನರ್ ಅಭಿಪ್ರಾಯ.

4/5

ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್ಸ್

ಹುಡುಗಿಯರಿಗೆ ಇಷ್ಟವಾಗುವಂತಹ ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್‌ಗಳು ಕೂಡ ಈ ದೀಪಾವಳಿಯ ರಂಗು ಹೆಚ್ಚಿಸಲು ಸಜ್ಜಾಗಿವೆ. ಪಲ್ಹಾಜೋ, ಸೆಲ್ವಾರ್, ಕೋ ಆರ್ಡ್ ಸೆಟ್, ಶರಾರ, ಗರಾರ ಹೀಗೆ ನಾನಾ ಬಗೆಯವು ಟೀನೇಜ್ ಹಾಗೂ ಚಿಕ್ಕ ಹೆಣ್ಣು ಮಕ್ಕಳಿಗೂ ಬಂದಿವೆ ಎನ್ನುತ್ತಾರೆ ಡಿಸೈನರ್ ಅಶ್ವಿನಿ.

5/5

ದೀಪಾವಳಿಯ ಫೆಸ್ಟೀವ್‌ವೇರ್ ಆಯ್ಕೆಗೆ 5 ಟಿಪ್ಸ್

  • ಹಬ್ಬದ ನಂತರವೂ ಧರಿಸಬಹುದಾದ ಡಿಸೈನರ್‌ವೇರ್ಸ್ ಖರೀದಿಸಿ.
  • ಆದಷ್ಟೂ ಸೀಸನ್ ಟ್ರೆಂಡ್‌ನಲ್ಲಿ ಇರುವಂತವನ್ನು ಆಯ್ಕೆ ಮಾಡಿ.
  • ಮತ್ತೊಮ್ಮೆ ಧರಿಸುವಂತಹ ಡಿಸೈನ್‌ನವನ್ನು ಚೂಸ್ ಮಾಡಿ.
  • ಸುಲಭವಾಗಿ ನಿರ್ವಹಿಸಬಹುದಾದ ಡಿಸೈನರ್‌ವೇರ್ಸ್ ಖರೀದಿಸಿ.
  • ಮಕ್ಕಳಿಗೆ ಆದಷ್ಟೂ ಕಂಫರ್ಟಬಲ್ ಇರುವಂತಹ ಡಿಸೈನ್‌ದನ್ನು ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author