ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Fashion 2025: ದೀಪಾವಳಿ ಸೀಸನ್‌ಗೆ ಕಾಲಿಟ್ಟ ಜಗಮಗಿಸುವ ಪಾದರಕ್ಷೆಗಳಿವು

Grand footwears: ಈ ಬಾರಿಯ ದೀಪಾವಳಿ ಸೀಸನ್‌ನಲ್ಲಿ ಮ್ಯಾಚಿಂಗ್ ಪಾದರಕ್ಷೆಗಳಿಗಿಂತ ಮಿನುಗುವ ಲೇಡಿಸ್ ಫುಟ್‌ವೇರ್‌ಗಳು ಟ್ರೆಂಡಿಯಾಗಿವೆ. ಎಥ್ನಿಕ್ ಡಿಸೈನರ್‌ವೇರ್ ಜತೆಗೆ ಧರಿಸಿದಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವಂತವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಡಿಸೈನ್‌ನವು ಬಂದಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ದೀಪಾವಳಿ ಫೆಸ್ಟೀವ್ ಸೀಸನ್‌ನಲ್ಲಿ ಜಗಮಗಿಸುವ ಪಾದರಕ್ಷೆಗಳು ಟ್ರೆಂಡಿಯಾಗಿವೆ. ಹೌದು, ಎಥ್ನಿಕ್ ಡಿಸೈನರ್‌ವೇರ್ ಜತೆಗೆ ಧರಿಸಿದಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವಂತವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

2/5

ಟ್ರೆಂಡ್‌ನಲ್ಲಿರುವ ಗ್ರ್ಯಾಂಡ್ ಪಾದರಕ್ಷೆಗಳು

ಸಿಕ್ವೀನ್ಸ್, ಕ್ರಿಸ್ಟಲ್ಸ್, ಗೋಲ್ಡನ್, ಸಿಲ್ವರ್ ವರ್ಣದ ಪಾದರಕ್ಷೆಗಳು ಈ ಹಬ್ಬದ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಹುಡುಗಿಯರು, ಸ್ನೇಹಿತೆಯರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲಾ ವಯಸ್ಸಿನವರು ಈ ಗ್ರ್ಯಾಂಡ್ ಪಾದರಕ್ಷೆಗಳನ್ನು ಧರಿಸುತ್ತಿದ್ದಾರೆ. ರೇಷ್ಮೆ ಸೀರೆ, ಲೆಹೆಂಗಾ ಹಾಗೂ ಗ್ರ್ಯಾಂಡ್ ಔಟ್‌ಫಿಟ್‌ಗೆ ಮ್ಯಾಚ್ ಆಗುವ ಡಿಸೈನ್‌ನವನ್ನು ಖರೀದಿಸುತ್ತಿದ್ದಾರೆ. ಪರಿಣಾಮ, ಇವುಗಳ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಫುಟ್‌ವೇರ್ ಮಾರಾಟಗಾರರು.

3/5

ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿರುವ ವಿನ್ಯಾಸಗಳು

ಹಬ್ಬದ ಸಮಯದಲ್ಲಿ, ಸಾಂಪ್ರದಾಯಿಕ ಪೂಜೆ ಹಾಗೂ ಕಾರ್ಯಕ್ರಮಗಳನ್ನು ಹೊರತುಪಡಿಸಿದಲ್ಲಿ, ಇತರೇ ಸಮಯದಲ್ಲಿ ಧರಿಸಿ ಓಡಾಡಬಹುದಾದಂತಹ ಫೆಸ್ಟೀವ್ ಕಲೆಕ್ಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಬಂಗಾರ ವರ್ಣದ ಪಾದರಕ್ಷೆಗಳು ಬಂದಿವೆ. ಸ್ಯಾಂಡಲ್ ಶೈಲಿಯವು, ಆಫ್ ಶೂನಂತವು, ವಿ ಶೇಪ್, ಕ್ರಿಸ್ಟಲ್‌ನಿಂದ ಪ್ಯಾಚ್ ವರ್ಕ್ ಮಾಡಿದಂತವು, ಹ್ಯಾಂಡ್‌ವರ್ಕ್ ಚಪ್ಪಲಿಗಳು, ಹೈ ಹೀಲ್ಸ್‌ನ ಕಟ್ಟುವ ಚಪ್ಪಲಿ, ಮಿರ ಮಿರ ಮಿನುಗುವ ಬೀಡ್ಸ್ ಸ್ಯಾಂಡಲ್ಸ್, ಎಥ್ನಿಕ್ ಗೌನ್ ಜತೆ ಧರಿಸಬಹುದಾದ ಹೀಲ್ಸ್ ಆಫ್ ಶೂಗಳು, ಕಲಾತ್ಮಕ ಚಿತ್ತಾರ ಹಾಗೂ ಬಂಗಾರದ ವರ್ಣದ ಎಂಬ್ರಾಯ್ಡರಿ ಇರುವಂತಹ ಫುಟ್‌ವೇರ್ಸ್ ಸೇರಿದಂತೆ ಸಾಕಷ್ಟು ಬಗೆಯವು ನಾನಾ ಬ್ರಾಂಡ್‌ಗಳಲ್ಲಿ ಬಂದಿವೆ.

4/5

ಹಬ್ಬದ ಎಥ್ನಿಕ್ ಲುಕ್‌ಗೆ ಮ್ಯಾಚಿಂಗ್

ಜಗಮಗಿಸುವ ಗೋಲ್ಡನ್ ವರ್ಕ್ ಹಾಗೂ ಬಣ್ಣದ ಪಾದರಕ್ಷೆಗಳು ಯಾವುದೇ ಬಗೆಯ ಎಥ್ನಿಕ್ ಲುಕ್ ನೀಡುವ ಔಟ್‌ಫಿಟ್ ಹಾಗೂ ರೇಷ್ಮೆ ಸೀರೆಗಳಿಗೆ ಮ್ಯಾಚ್ ಆಗುತ್ತವೆ. ನೋಡಲು ರಾಯಲ್ ಲುಕ್ ನೀಡುತ್ತವೆ. ಎಲ್ಲಾ ಬಗೆಯ ಗ್ರ್ಯಾಂಡ್ ಉಡುಪುಗಳಿಗೂ ಧರಿಸಬಹುದು. ನೋಡಲು ಅತ್ಯಾಕರ್ಷಕವಾಗಿಯೂ ಕಾಣುತ್ತವೆ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

5/5

ಜಗಮಗಿಸುವ ಪಾದರಕ್ಷೆಗಳ ಪ್ರಿಯರ ಗಮನಕ್ಕೆ

  • ಹಬ್ಬ ಮಾತ್ರವಲ್ಲ, ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸಬಹುದು.
  • ಕಂಫರ್ಟಬಲ್ ಸೈಝನದ್ದನ್ನು ಧರಿಸಿ.
  • ಧರಿಸಿದ ನಂತರ ಕವರ್‌ನಲ್ಲಿ ಅಥವಾ ಪ್ರತ್ಯೇಕವಾಗಿ ಇರಿಸಿ.
  • ಎಂಬ್ರಾಯ್ಡರಿ ಸೂಕ್ಮವಾಗಿರುವಂತಹ ಪಾದರಕ್ಷೆಗಳನ್ನು ಔಟ್‌ಫಿಟ್‌ನಂತೆಯೆ ಸಂರಕ್ಷಿಸಿಡಬೇಕು. ಇಲ್ಲವಾದಲ್ಲಿ ಹರಿದು ಹೋಗಬಹುದು.

ಶೀಲಾ ಸಿ ಶೆಟ್ಟಿ

View all posts by this author