Deepavali Fashion 2025: ದೀಪಾವಳಿ ಸಂಭ್ರಮಕ್ಕೆ ಬಂತು ಮಿಂಚುವ ಮಿರರ್ ಡಿಸೈನರ್‌ವೇರ್ಸ್
Mirror Designerwear for Deepavali: ಈ ಬಾರಿಯ ದೀಪಾವಳಿಗೆ ವಿನೂತನ ಡಿಸೈನ್‌ನ ಎಥ್ನಿಕ್ ವಿನ್ಯಾಸದ ಮಿರರ್ ಡಿಸೈನರ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಬೇಡಿಕೆ ಪಡೆದುಕೊಂಡಿವೆ. ಎಂಬುದರ ಬಗ್ಗೆ ಇಲ್ಲಿದೆ ವರದಿ.
ದೀಪಾವಳಿಗೆ ಮಿರರ್ ಉಡುಪುಗಳು
ದೀಪಾವಳಿ ಸಂಭ್ರಮಕ್ಕೆ ಮಿನುಗುವ ಮಿರರ್ ಡಿಸೈನರ್‌ವೇರ್ಸ್ ಆಗಮಿಸಿವೆ. ಮಿರರ್ ಡಿಸೈನ್‌ನಲ್ಲೂ ನಾನಾ ಬಗೆಯಿವೆ. ಮೈಕ್ರೊ ಮಿರರ್, ಮೆಗಾ ಮಿರರ್, ಕಾಸಿನಗಲದ ಮಿರರ್, ಫೈಬರ್, ಪ್ಲಾಸ್ಟಿಕ್ ಟ್ರಾನ್ಸಪರೆಂಟ್ ಮಿರರ್ಸ್ ಸೇರಿದಂತೆ ನಾನಾ ಮಿರರ್ ವಿನ್ಯಾಸಗಳು ಡಿಸೈನರ್‌ಗಳೊಂದಿಗೆ ಜತೆಯಾಗಿವೆ. ಇನ್ನು, ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್ ಇಷ್ಟಪಡುವವರಿಗೂ ಜಂಪ್ ಸೂಟ್, ಕ್ರಾಪ್ ಟಾಪ್-ಸ್ಕರ್ಟ್ ಮೇಲೂ ಕಾಣಿಸಿಕೊಂಡಿವೆ. ಇನ್ನುಳಿದಂತೆ ಗಾಗ್ರಾ, ಕಮೀಝ್, ಅನಾರ್ಕಲಿ, ಕಟ್ ಔಟ್ ಗೌನ್ಸ್, ತ್ರೀ ಪೀಸ್ ಲೆಹೆಂಗಾ ಸೇರಿದಂತೆ ನಾನಾ ಗ್ರ್ಯಾಂಡ್ ಲುಕ್ ನೀಡುವ ಡಿಸೈನರ್‌ವೇರ್‌ಗಳೊಂದಿಗೆ ಜತೆಯಾಗಿವೆ.
ಸೆಲೆಬ್ರೆಟಿಗಳ ಮಿರರ್ ಡಿಸೈನರ್‌ವೇರ್ಸ್
ಬಾಲಿವುಡ್ ಸಿನಿಮಾಗಳಲ್ಲಿ ಈ ವಿನ್ಯಾಸದ ಉಡುಪುಗಳು ಸಾಮಾನ್ಯವಾಗಿ ಕಾಣಬಹುದು. ಕೇವಲ ಲೆಹೆಂಗಾಗೆ ಸೀಮಿತವಾಗಿದ್ದ ಈ ಕಾನ್ಸೆಪ್ಟ್ ಬರಬರುತ್ತಾ ಇಂಡೋ-ವೆಸ್ಟರ್ನ್ ಔಟ್‌ಫೀಟ್‌ಗಳಲ್ಲೂ ಕಾಣಿಸಿಕೊಳ್ಳತೊಡಗಿತು. ಕಾಲಕಳೆದಂತೆ ಈ ಮಿರರ್ ಡಿಸೈನ್‌ನ ಉಡುಪುಗಳು ಉತ್ತರ-ದಕ್ಷಿಣ ಎಂಬ ಭೇದ-ಭಾವವಿಲ್ಲದೇ ಎಲ್ಲಾ ಪ್ರಾಂತ್ಯದಲ್ಲೂ ಬಿಡುಗಡೆಗೊಂಡು, ಇದೀಗ ಎಲ್ಲೆಡೆ ಟ್ರೆಂಡಿಯಾಗಿದೆ ಎನ್ನುತ್ತಾರೆ ಡಿಸೈನರ್ ದಿವ್ಯಾ.
ಬದಲಾದ ವಿನ್ಯಾಸದಲ್ಲಿ ಮಿರರ್ ಡಿಸೈನರ್‌ವೇರ್
ಈ ಜನರೇಷನ್‌ನ ಅಭಿಲಾಷೆಗೆ ತಕ್ಕಂತೆ ನಾನಾ ವಿನ್ಯಾಸದ ಮಿರರ್ ಡಿಸೈನರ್‌ವೇರ್‌ಗಳು ಬಂದಿವೆ. ಎಥ್ನಿಕ್ ಕೋಟ್, ಜಾಕೆಟ್‌ನಲ್ಲೂ ಇವು ಕಾಣಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ಸ್.
ಕಲಾತ್ಮಕ ಬಂಜಾರ ಡಿಸೈನ್
ಮೂಲತಃ ಬಂಜಾರ ಹಾಗೂ ರಾಜಸ್ಥಾನದ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಬಹುದಾಗಿದ್ದ ಈ ಮಿರರ್ ವರ್ಕ್‌ನಲ್ಲಿ ಒರಿಜಿನಲ್ ಕನ್ನಡಿ ತುಣುಕುಗಳನ್ನು ಬಳಸಲಾಗುತ್ತದೆ. ಇದು ಹೆಚ್ಚು ಭಾರವಾಗಿರುವುದರಿಂದ ಇದೀಗ ಮೈಕಾ ಹೆಸರಿನ ಮೆಟೀರಿಯಲ್ನಲ್ಲಿ ಮಿರರ್‌ಗಳನ್ನು ಉಡುಪುಗಳಲ್ಲಿ ಬಳಸಲಾಗುತ್ತಿದೆ ಎನ್ನುತ್ತಾರೆ ಡಿಸೈನರ್ಸ್
ಗ್ರ್ಯಾಂಡ್ ಮಿರರ್ ಡಿಸೈನರ್‌ವೇರ್ ಧರಿಸುವವರಿಗೆ ಟಿಪ್ಸ್
- ಪ್ಲಂಪಿಯಾಗಿರುವವರಿಗೆ ಬಿಗ್ ಮಿರರ್ಸ್ ಡಿಸೈನ್ ನಾಟ್ ಓಕೆ.
- ಶೇಡ್ಸ್‌ಗೆ ತಕ್ಕ ಡಿಸೈನ್ ಇರಲಿ.
- ಲೈಟ್ವೇಟ್ ಡಿಸೈನರ್‌ವೇರ್ ಖರೀದಿಸಿ.
- ಕಾಂಟ್ರಸ್ಟ್ ಮ್ಯಾಚಿಂಗ್ ಬೆಸ್ಟ್.
- ಕಂಟೆಪರರಿ ವಿನ್ಯಾಸದ್ದನ್ನು ಆಯ್ಕೆ ಮಾಡಿ.
- ಸಂದರ್ಭಕ್ಕೆ ತಕ್ಕ ಡಿಸೈನ್ ಇರಲಿ.
- ಸ್ಕಿನ್ ಟೋನ್‌ಗೆ ತಕ್ಕ ಬಣ್ಣ ಆಯ್ಕೆ ಮಾಡುವುದು ಉತ್ತಮ.