ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fashion Show: ಡಿಸೈನರ್ಸ್ ಕ್ರಿಯೇಟಿವಿಟಿಗೆ ಸಾಕ್ಷಿಯಾದ ಸಿಇಎಸ್ ಕಾಲೇಜಿನ ಫ್ಯಾಷನ್ ಶೋ!

Fashion News: ಉದ್ಯಾನನಗರಿಯ ಯಲಹಂಕದಲ್ಲಿರುವ ಸಿಇಎಸ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಆಶ್ರಯದಲ್ಲಿ ನಡೆದ ಡಿಸೈನರ್ಸ್ ಅವಾರ್ಡ್ ಸೀಸನ್-4 ಕಾರ್ಯಕ್ರಮವು ಮುಂಬರುವ ಭಾವಿ ಡಿಸೈನರ್‌ಗಳ ಕ್ರಿಯೆಟಿವಿಟಿಗೆ ಸಾಕ್ಷಿಯಾಗಿತ್ತು. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಸಿಇಎಸ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಫ್ಯಾಷನ್ ಶೋ ಚಿತ್ರಗಳು.
1/5

ಸಿಇಎಸ್ ಫ್ಯಾಷನ್ ರ‍್ಯಾಂಪ್ ಶೋನಲ್ಲಿ ಕ್ಯಾಟ್ ವಾಕ್ ಮಾಡಿದ ಮಾಡೆಲ್‌ಗಳ ಪ್ರತಿಯೊಂದು ಡಿಸೈನರ್‌ವೇರ್‌ಗಳು ಅತ್ಯದ್ಭುತವಾಗಿದ್ದವು. ಅಂದಹಾಗೆ, ಉದ್ಯಾನನಗರಿಯ ಯಲಹಂಕದಲ್ಲಿರುವ ಸಿಇಎಸ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಡಿಸೈನರ್ಸ್ ಅವಾರ್ಡ್ ಸೀಸನ್-4 ಕಾರ್ಯಕ್ರಮವು ಮುಂಬರುವ ಭಾವಿ ಡಿಸೈನರ್‌ಗಳ ಕ್ರಿಯೆಟಿವಿಟಿಗೆ ಸಾಕ್ಷಿಯಾಗಿತ್ತು. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

2/5

ಥೀಮ್‌ಗೆ ತಕ್ಕಂತೆ ಡಿಸೈನರ್‌ವೇರ್‌ಗಳ ಅನಾವರಣ

ನಾನಾ ಥೀಮ್ ಹಾಗೂ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಂಡ ಭಾವಿ ಡಿಸೈನರ್‌ಗಳು ತಮ್ಮ ಕ್ರಿಯೇಟಿವಿಟಿಗೆ ತಕ್ಕಂತೆ ಊಹೆಗೂ ಮೀರಿದ ವೇರಬಲ್ ಹಾಗೂ ನಾನಾ ವೇರಬಲ್ ಡಿಸೈನರ್‌ವೇರ್‌ಗಳನ್ನು ಸೃಷ್ಠಿಸಿ, ಮಾಡೆಲ್‌ಗಳ ಮೂಲಕ ಅನಾವರಣಗೊಳಿಸಿದರು. ಅವುಗಳಲ್ಲಿ ಓಷನ್, ವೆಡ್ಡಿಂಗ್, ಈಜಿಪ್ಟ್ , ಬ್ಲ್ಯಾಕ್ ಪ್ಯಾಂತರ್ ಕಾನ್ಸೆಪ್ಟ್‌ಗಳು ನೋಡುಗರ ಮನ ಸೆಳೆದವು.

3/5

ಮೈಸೂರ್ ಸಿಲ್ಕ್ ಸೀರೆಗಳ ರ‍್ಯಾಂಪ್ ವಾಕ್

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೈಸೂರು ಸಿಲ್ಕ್ ಉಟ್ಟ ಮಾಡೆಲ್‌ಗಳು ಇಂಡೋ-ವೆಸ್ಟರ್ನ್ ಕಾನ್ಸೆಪ್ಟ್‌ನಲ್ಲಿ ನಯಾ ಲುಕ್‌ನಲ್ಲಿ ಮೈಸೂರು ಸಿಲ್ಕ್ ಸೀರೆ ಉಟ್ಟು ರ‍್ಯಾಂಪ್ ವಾಕ್ ಮಾಡಿ, ಫ್ಯಾಷನ್ ಪ್ರಿಯರ ಮನ ಸೆಳೆದರು. ಈ ಜನರೇಷನ್‌ನವರಿಗೂ ಇಷ್ಟವಾಗುವಂತಹ ವಿನ್ಯಾಸದ ಸೀರೆ ಬ್ಲೌಸ್‌ಗಳಲ್ಲಿ ಕಾಣಿಸಿಕೊಂಡು, ಹೊಸ ಕಾನ್ಸೆಪ್ಟ್ ಸೀರೆ ಲುಕ್‌ಗೆ ನಾಂದಿ ಹಾಡಿದರು.

4/5

ವಿಜೇತ ಡಿಸೈನರ್‌ಗಳ ಪಟ್ಟಿ

ಈ ಫ್ಯಾಷನ್ ಪ್ರದರ್ಶನದಲ್ಲಿ ತಮ್ಮೇ ಆದ ಡಿಸೈನರ್‌ವೇರ್‌ಗಳನ್ನು ಡಿಸೈನ್ ಮಾಡಿದವರಲ್ಲಿ, ಓಷನ್ ಥೀಮ್‌ನವರು ಬೆಸ್ಟ್ ಡಿಸೈನರ್ ಅವಾರ್ಡ್ ಪಡೆದು ವಿಜೇತರಾದರು.

5/5

ಕಾರ್ಯಕ್ರಮದ ಹೈಲೈಟ್ಸ್

ಅರ್ಧ ದಿನಕ್ಕೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಷನ್ ರ‍್ಯಾಂಪ್ ಶೋಗಳ ಮಧ್ಯೆ ಮಧ್ಯೆ ಇತರೇ ನೃತ್ಯ ಕಾರ್ಯಕ್ರಮಗಳು ನಡೆದವು. ಫ್ಯಾಷನ್ ಶೋನ ಜ್ಯೂರಿ ಪ್ಯಾನೆಲ್‌ನಲ್ಲಿ ಮಿಸ್ ಇಂಡಿಯಾ ಕಾಸ್ಮೊಪಾಲಿಟನ್ 2029 ಐಶ್ವರ್ಯಾ, ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ 2019 ಶ್ವೇತಾ ನಿರಂಜನ್, ಫ್ಯಾಷನ್ ಡಿಸೈನರ್ ರೋಮಿತಾ ಸೇರಿದಂತೆ ಈ ಕ್ಷೇತ್ರದ ಸಾಕಷ್ಟು ಮಂದಿ ಭಾಗವಹಿಸಿದ್ದರು. ಕಾರ್ಯ್ರಕಮದಲ್ಲಿ ಅತಿಥಿಗಳಾಗಿ ಮಿಸ್ ತಾಜ್ ಯೂನಿವರ್ಸ್ ಸಂಗೀತಾ ಹೊಳ್ಳ, ನಟ ಭಾರ್ಗವ್, ಫ್ಯಾಷನ್ ಜರ್ನಲಿಸ್ಟ್/ಲೇಖಕಿ ಶೀಲಾ ಸಿ. ಶೆಟ್ಟಿ ಸೇರಿದಂತೆ ಕ್ಷೇತ್ರದ ನಾನಾ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.

ಶೀಲಾ ಸಿ ಶೆಟ್ಟಿ

View all posts by this author