Footwear Fashion 2025: ಮರಳಿದ ಹಾಫ್ ಶೂಸ್ ಫ್ಯಾಷನ್; ಟ್ರೆಂಡಿ ಕಲರ್ಸ್, ಶೇಡ್ಸ್
Half Shoes Fashion: ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ಹಾಫ್ ಶೂಗಳನ್ನು ಧರಿಸುವ ಫ್ಯಾಷನ್ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ರಾಯಲ್ ಬ್ಲ್ಯೂ, ಸೀಸನ್ ಆರೆಂಜ್, ಶೈನಿಂಗ್ ವೈಟ್, ಗೋಲ್ಡನ್, ಸಿಲ್ವರ್ ಹೀಗೆ ಲೆಕ್ಕಕ್ಕಿಲ್ಲದಷ್ಟು ವರ್ಣದಲ್ಲಿ, ಶೆಡ್ಸ್‌ನಲ್ಲಿ ಹಾಫ್ ಶೂಗಳು ಫ್ಯಾಷನ್ ಪ್ರಿಯರ ಪಾದವನ್ನು ಅಲಂಕರಿಸತೊಡಗಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಊಹೆಗೂ ಮೀರಿದ ಬಣ್ಣಬಣ್ಣದ ಹಾಫ್ ಶೂಗಳು ಇಂದು ಹುಡುಗಿಯರ ಮನಸೆಳೆದಿವೆ.
ರಾಯಲ್ ಬ್ಲ್ಯೂ, ಸೀಸನ್ ಆರೆಂಜ್, ಶೈನಿಂಗ್ ವೈಟ್, ಗೋಲ್ಡನ್, ಸಿಲ್ವರ್ ಹೀಗೆ ಲೆಕ್ಕಕ್ಕಿಲ್ಲದಷ್ಟು ವರ್ಣದಲ್ಲಿ, ಶೆಡ್ಸ್‌ನಲ್ಲಿ ಹಾಫ್ ಶೂಗಳು ಫ್ಯಾಷನ್ ಪ್ರಿಯರ ಪಾದವನ್ನು ಅಲಂಕರಿಸತೊಡಗಿವೆ. ಹೌದು. ಇದಕ್ಕೆ ಪೂರಕ ಎಂಬಂತೆ, ಈ ಸೀಸನ್‌ನ ಫ್ಯಾಷನ್‌ಗೆ ಮ್ಯಾಚ್ ಆಗುವಂತೆ ಫುಟ್‌ವೇರ್ ಇಂಡಸ್ಟ್ರೀಯು ಲೆಕ್ಕವಿಲ್ಲದಷ್ಟು ಡಿಸೈನ್‌ನ ಹಾಫ್ ಶೂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಹಾಫ್ ಶೂಗಳ ಬಗೆಬಗೆಯ ವಿನ್ಯಾಸಗಳು
ಹೀಲ್ಡ್ಸ್ ರಹಿತ, ಸಹಿತ, ವೆಡ್ಜೆಸ್ ಶೈಲಿ, ಗ್ಲಾಡಿಯೇಟರ್ಸ್, ಫ್ಲಿಫ್ ಫ್ಲಾಪ್ ಡಿಸೈನ್, ಬೋ ವಿನ್ಯಾಸ, ಕ್ರಿಸ್ಟಲ್ ಸ್ಟೋನ್ ವಿನ್ಯಾಸ ಸೇರಿದಂತೆ ನಾನಾ ಶೈಲಿಯವು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಫುಟ್‌ವೇರ್ ಶಾಪ್‌ಗಳ ಶೋಕೇಸ್‌ಗಳಲ್ಲಿ ರಾರಾಜಿಸುತ್ತಿವೆ.
ಫ್ಯಾಷನ್‌ಗೆ ಮರಳಿದ ಹಾಫ್ ಶೂಗಳು
ಡಿಸೈನರ್ ನಾಜಿಯಾ ಹೇಳುವಂತೆ, ದಶಕಗಳ ಹಿಂದೆ ಫ್ಲ್ಯಾಟ್ ಹಾಫ್ ಶೂಗಳು ಸಖತ್ ಟ್ರೆಂಡ್‌ನಲ್ಲಿದ್ದವು. ಸುಮಾರು ನಾಲ್ಕೈದು ವರ್ಷಗಳವರೆಗೆ ಇವುಗಳ ಕ್ರೇಜ್ ಕಡಿಮೆಯಾಗಿರಲೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಇಂದಿಗೂ ಕೆಲವು ಮಹಿಳೆಯರು ಹಳೆ ಫ್ಯಾಷನ್‌ನಲ್ಲಿದ್ದ ಹಾಫ್ ಶೂಗಳನ್ನು ಇಂದಿಗೂ ಧರಿಸುತ್ತಾರೆ.
ಟ್ರೆಂಡಿ ಕಲರ್ಸ್- ಶೇಡ್ಸ್
ಮೆಟಾಲಿಕ್ ಶೇಡ್ಸ್, ಶ್ವೇತವರ್ಣ, ರೇಡಿಯಂ ಬಣ್ಣ, ಹಾಟ್ ಪಿಂಕ್, ಎಲೆಕ್ಟ್ರಿಕ್ ಬ್ಲೂಕಲರ್ ಮತ್ತು ಶೇಡ್‌ಗಳು ಟೀನೇಜ್‌ನವರನ್ನು ಸೆಳೆದಿವೆ. ಇನ್ನು, ಸ್ಟ್ರಾಪ್ ಅಥವಾ ಕಟ್ಟುವ ಬಾರ್‌ಗಳಿರುವಂತವು ಪಾರ್ಟಿ ಪ್ರಿಯರನ್ನು ಆವರಿಸಿಕೊಂಡಿವೆ. ಸಿಂಪಲ್ ಶೈಲಿಯವು ವರ್ಕಿಂಗ್ ವುಮೆನ್ ಕೆಟಗರಿಯನ್ನು ಆಕರ್ಷಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಾಫ್ ಶೂ ಸ್ಟೈಲಿಂಗ್
- ಶೂಗಳ ಬಣ್ಣದ ಆಯ್ಕೆಗೆ ಪ್ರಾಮುಖ್ಯತೆ ನೀಡಿ.
- ವಿಂಟರ್ ಸೀಸನ್‌ಗೆ ಇವು ಬೆಸ್ಟ್.
- ಹೆಚ್ಚು ಹೀಲ್ಸ್ ಇರುವಂತವು ವೆಸ್ಟರ್ನ್ ಉಡುಪುಗಳಿಗೆ ಬೆಸ್ಟ್ ಅಪ್ಷನ್.
- ಬ್ರ್ಯಾಂಡೆಡ್ ಹಾಫ್ ಶೂಗಳು ಹೆಚ್ಚು ಬಾಳಿಕೆ ಬರುತ್ತವೆ.
- ಕಾಮನ್ ಕಲರ್‌ನವು ಎಲ್ಲಾ ಔಟ್‌ಫಿಟ್‌ಗಳಿಗೂ ಧರಿಸಬಹುದು.
- ಪೆನ್ಸಿಲ್ ಹೀಲ್ಸ್‌ನವನ್ನು ಹೆಚ್ಚು ಹೊತ್ತು ಧರಿಸಲಾಗುವುದಿಲ್ಲ ಎಂಬುದು ನೆನಪಿರಲಿ.