ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jacqueline Fernandez: 'ದಮ್ ದಮ್’ ಮ್ಯೂಸಿಕ್ ವಿಡಿಯೊದಲ್ಲಿ ಜಾಕ್ವೆಲಿನ್‌ ಫರ್ನಾಂಡೀಸ್‌ ಮಸ್ತ್ ಡ್ಯಾನ್ಸ್

ಕಿಚ್ಚ ಸುದೀಪ್‌ ಜತೆ ʼವಿಕ್ರಾಂತ್‌ ರೋಣʼ ಚಿತ್ರದಲ್ಲಿ ʼರಾ...ರಾ...ರುಕ್ಕಮ್ಮʼ ಹಾಡಿಗೆ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಸದ್ಯ ಬ್ಯುಸಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ನಟನೆ ಜತೆಗೆ ಡ್ಯಾನ್ಸ್‌ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಇದೀಗ ಟಿ ಸಿರೀಸ್ ತನ್ನ ಹೊಸ ಮ್ಯೂಸಿಕ್ ವಿಡಿಯೊ ʼದಮ್ ದಮ್ʼ ಬಿಡುಗಡೆ ಮಾಡಿದ್ದು, ಇದರಲ್ಲಿ ಜಾಕ್ವೆಲಿನ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಲ್ಬಂನ ಹಲವು ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Jacqueline Fernandez
1/6

ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಡ್ಯಾನ್ಸ್‌ನಲ್ಲಿಯೂ ತೊಡಗಿಸಿಕೊಂಡಿರುವ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ 'ದಮ್ ದಮ್’ ಮ್ಯೂಸಿಕ್ ವಿಡಿಯೊದಲ್ಲಿ ವಿಭಿನ್ನವಾಗಿ ಮಿಂಚಿದ್ದಾರೆ. ಜಾಕ್ವೆಲಿನ್ ಈ ದೃಶ್ಯದ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

2/6

ಜಾಕ್ವೆಲಿನ್‌ ಫರ್ನಾಂಡೀಸ್‌ ತಮ್ಮ 'ದಮ್ ದಮ್' ಮ್ಯೂಸಿಕ್ ವಿಡಿಯೊದಲ್ಲಿ ತಾವು ಮಸ್ತ್ ಡ್ಯಾನ್ಸರ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

3/6

ಶಜಿಯಾ ಮತ್ತು ಪಿಯೂಷ್ ನೃತ್ಯ ಸಂಯೋಜನೆ ಮಾಡಿರುವ ಈ ವಿಡಿಯೊದಲ್ಲಿ ಜಾಕ್ವೆಲಿನ್ ಅವರ ಕಾಸ್ಟ್ಯೂಮ್​​ಗಳು ಡಿಫರೆಂಟ್ ಆಗಿವೆ. ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯದ ಉಡುಗೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

4/6

ಗೋಲ್ಡ್ ‌ ಬ್ಲೌಸ್ ಮತ್ತು ರೇಷ್ಮೆ ಸೀರೆಯ ನೃತ್ಯದ ಉಡುಗೆ ಧರಿಸಿ ಆಕರ್ಷಕವಾಗಿ ಕಂಡಿದ್ದಾರೆ. ಇದಕ್ಕೆ ಹೊಂದಿಕೊಳ್ಳುವ ಲೇಯರ್ಡ್ ನೆಕ್ಲೇಸ್, ಬಳೆ, ಕಿವಿಯೋಲೆಯಂತಹ ಗ್ರ್ಯಾಂಡ್ ಆಭರಣ ಧರಿಸಿದ್ದಾರೆ. ಜ್ವಾಕೆಲಿನ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

5/6

'ದಮ್ ದಮ್’ ಹಾಡಿಗೆ ಜಾಕ್ವೆಲಿನ್ ಅಭಿಮಾನಿಗಳು ರೀಲ್ಸ್ ಮಾಡ್ತಿದ್ದಾರೆ. ಟಿ-ಸೀರೀಸ್ ಬಿಡುಗಡೆ ಮಾಡಿರುವ ಈ ಮ್ಯೂಸಿಕ್ ವಿಡಿಯೊದ ಹಾಡಿಗೆ ಅಸೀಸ್ ಕೌರ್, ಸಾಗರ್, ಫೈಜ್ ಮತ್ತು ಹನ್ನಿ ಧ್ವನಿ ನೀಡಿದ್ದಾರೆ. ಹಾಡಿನ ಸಾಹಿತ್ಯವನ್ನು ಜಾನಿ ರಚಿಸಿದ್ದಾರೆ.

6/6

ಜಾಕ್ವೆಲಿನ್ 'ಮರ್ಡರ್ 2', 'ಹೌಸ್‌ಫುಲ್ 2', 'ರೇಸ್ 2', ಮತ್ತು 'ಕಿಕ್'ನಂತಹ ಬಾಲಿವುಡ್‌ ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದಾರೆ.