ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jewel Trend 2025: ಊಹೆಗೂ ಮೀರಿದ ವಿನ್ಯಾಸಗಳಲ್ಲಿ ಬಂತು ಕಾಕ್ಟೈಲ್ ಫಿಂಗರ್‌ ರಿಂಗ್ಸ್

Jewel Trend 2025: ಊಹೆಗೂ ಮೀರಿದ ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಾಕ್ಟೈಲ್ ಫಿಂಗರ್‌ ರಿಂಗ್‌ಗಳು ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಪಾಪುಲರ್ ಆಗಿವೆ? ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಎಲ್ಲದರ ಬಗ್ಗೆ ಜ್ಯುವೆಲ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ವಿನೂತನ ವಿನ್ಯಾಸದಲ್ಲಿ ಊಹೆಗೂ ಮೀರಿದ ಡಿಸೈನ್‌ಗಳಲ್ಲಿ ಕಾಕ್ಟೈಲ್ ಫಿಂಗರ್ ರಿಂಗ್‌ಗಳು ಫ್ಯಾಷನ್ ಜ್ಯುವೆಲರಿ ಲೋಕಕ್ಕೆ ಕಾಲಿಟ್ಟಿವೆ. ಯುವತಿಯರ, ಮಾನಿನಿಯರ ಕೈ ಬೆರಳುಗಳನ್ನು ಅಲಂಕರಿಸುತ್ತಿವೆ.

ಏನಿದು ಕಾಕ್ಟೈಲ್ ಫಿಂಗರ್ ರಿಂಗ್?

ಸಿಂಪಲ್ ಆಗಿ ಹೇಳಬೇಕೆಂದರೆ, ಚಿತ್ರ-ವಿಚಿತ್ರ ವಿನ್ಯಾಸಗಳನ್ನು ಹೊಂದಿದ ದೊಡ್ಡ ಸೈಝಿನ ಮೆಟಲ್‌ನ ಕೈ ಉಂಗುರಗಳಿವು. ಉದಾಹರಣೆಗೆ., ಕ್ರಿಸ್ಟಲ್ ಇಲ್ಲವೇ ಚಿಕ್ಕ ಅಥವಾ ದೊಡ್ಡ ಹರಳುಗಳಿಂದ ಕೂಡಿದ ಹೂಬಳ್ಳಿ ವಿನ್ಯಾಸ, ಸರಿಸೃಪಗಳ ಇಲ್ಲವೇ ಪ್ರಾಣಿ, ಪಕ್ಷಿಗಳ ವಿನ್ಯಾಸ, ಅಂದಾಜಿಗೆ ಸಿಗದಂತಹ ಊಹೆಗೂ ಮೀರಿದಂತಹ ಕಾನ್ಸೆಪ್ಟ್ ಈ ಕಾಕ್ಟೈಲ್ರಿಂಗ್ ಡಿಸೈನ್‌ನಲ್ಲಿ ಕಾಣಬಹುದು. ಇವು ಇತ್ತೀಚೆಗೆ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೇ, ಸ್ತ್ರೀಯರ ಬೆರಳನ್ನು ಆವರಿಸಿಕೊಂಡಿದ್ದು, ಫ್ಯಾಷನ್ ಜ್ಯುವೆಲರಿ ಲೋಕದಲ್ಲಿ ಸದ್ಯಕ್ಕೆ ಹಂಗಾಮ ಎಬ್ಬಿಸಿವೆ.

2/5

ಕಾಕ್ಟೈಲ್ ಫಿಂಗರ್ ರಿಂಗ್ ಕಥೆ

ಜ್ಯುವೆಲ್ ಸ್ಟೈಲಿಸ್ಟ್ ರಾಕಿ ಹೇಳುವಂತೆ, ಸರಿ ಸುಮಾರು 1920 ರ ಆಸುಪಾಸಿನಲ್ಲಿ ಅಮೆರಿಕ ಹಾಗೂ ಲಂಡನ್‌ನಲ್ಲಿ ಇವು ಹೆಚ್ಚು ಟ್ರೆಂಡ್‌ನಲ್ಲಿದ್ದವು. ಪಾರ್ಟಿ, ಸಮಾರಂಭಗಳಿಗೆ ಹೋಗುವ ಶ್ರೀಮಂತ ಮಹಿಳೆಯರು ಪ್ರತಿಷ್ಠೆಯ ಸಂಕೇತವಾಗಿ ಇದನ್ನು ಧರಿಸುತ್ತಿದ್ದರು. ಇನ್ನು ನಮ್ಮಲ್ಲೂ ರಾಯಲ್ ಕುಟುಂಬದವರು ಇವುಗಳನ್ನು ಎಥ್ನಿಕ್ ಉಡುಗೆಗೆ ಹೊಂದವಂತಹ ಡಿಸೈನ್‌ನಲ್ಲಿ ಮಾಡಿಸಿ, ಧರಿಸುತ್ತಿದ್ದರು. ಕಾಲಬದಲಾದಂತೆ, ಇದೀಗ ಇವು ಸಾಮಾನ್ಯ ಮೆಟಲ್‌ನಲ್ಲಿ ಕೈಗೆಟಕುವ ಬೆಲೆಯಲ್ಲಿ ದೊರೆಯಲಾರಂಭಿಸಿದವು. ಪರಿಣಾಮ, ಬೇಡಿಕೆ ಹೆಚ್ಚಾಗಲು ಕಾರಣವಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

3/5

ಟ್ರೆಂಡಿಯಾದ ಕಾಕ್ಟೈಲ್ ಫಿಂಗರ್ ರಿಂಗ್

ಡಿಸೈನರ್ ರಾಶಿ ಪ್ರಕಾರ, ಮೊದಲೆಲ್ಲಾ ಚಿನ್ನದ ಉಂಗುರ ಧರಿಸುವುದು ಫ್ಯಾಷನ್ಆಗಿತ್ತು. ಆದರೆ, ಇದೀಗ ಕಾಲ ಕಳೆದಂತೆ, ಫಂಕಿ ಉಂಗುರಗಳು ಸಾಕಷ್ಟು ಜನಪ್ರಿಯಗೊಂಡವು. ಇವುಗಳಲ್ಲೆ ಡಿಫರೆಂಟ್ ಆಗಿ ಬಿಡುಗಡೆಗೊಂಡ ಕಾಕ್ಟೈಲ್ ಉಂಗುರಗಳು ಯುವತಿಯರ ಮನಸೆಳೆದವು. ಲೇಡಿಸ್ ಫೇವರೇಟ್ ಆಕ್ಸೆಸ್ಸರೀಸ್‌ಗಳಲ್ಲಿ ಒಂದಾದವು. ಸಾವಿರಾರು ವಿನ್ಯಾಸಗಳಲ್ಲಿ ಲಭ್ಯವಿರುವ ಇವನ್ನು ಯಾವುದೇ ಉಡುಪಿನೊಂದಿಗೂ ಧರಿಸಬಹುದು. ಇದು ಇವುಗಳ ವಿಶೇಷತೆ ಎನ್ನುತ್ತಾರೆ.

4/5

ಎಲ್ಲೆಲ್ಲಿ ಲಭ್ಯ

ಗೋಲ್ಡ್ ಕೋಟೆಡ್, ವೈಟ್ ಮತ್ತು ಬ್ಲಾಕ್ ಮೆಟಲ್ ಹಾಗೂ ಸಿಲ್ವರ್‌ನಲ್ಲಿ ದೊರೆಯುವ ಇವು ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್, ಮಲ್ಲೇಶ್ವರ 18 ಕ್ರಾಸ್, ಜಯನಗರ 4 ನೇ ಬ್ಲಾಕ್‌ನಲ್ಲಿನ ಆಕ್ಸೆಸರೀಸ್ ಶಾಪ್‌ಗಳಲ್ಲಿ ಸುಲಭವಾಗಿ ಸಿಗುತ್ತವೆ. ಸುಮಾರು 50 ರೂ. ಗಳಿಂದ ಆರಂಭವಾಗುವ ಈ ಉಂಗುರಗಳು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.

5/5

ಕಾಕ್ಟೇಲ್ ಫಿಂಗರ್ ರಿಂಗ್ ಪ್ರೇಮಿಗಳಿಗೆ ಸಿಂಪಲ್ ಟಿಪ್ಸ್

  • ಉಡುಪಿಗೆ ಮ್ಯಾಚ್ ಮಾಡದೆಯೂ ಧರಿಸಬಹುದು.
  • ಬೆರಳಿಗೆ ಒಂದು ರಿಂಗ್ ಧರಿಸಿದರೆ ಸಾಕು, ಆಕರ್ಷಕವಾಗಿ ಕಾಣುತ್ತವೆ.
  • ಫ್ಲೋರಲ್ ಡಿಸೈನ್‌ವು ಫಂಕಿ ಲುಕ್‌ ನೀಡುತ್ತವೆ.
  • ಹರಳುಗಳಿರುವಂತವು ಎಥ್ನಿಕ್ ಉಡುಪಿಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.

ಶೀಲಾ ಸಿ ಶೆಟ್ಟಿ

View all posts by this author