Kiccha Sudeep Birthday: ಬರ್ತ್‌ಡೇ ಬಾಯ್ ಕಿಚ್ಚ ಸುದೀಪ್ ಕುರಿತ ಆಸಕ್ತಿಕರ ವಿಚಾರ ಇಲ್ಲಿದೆ!
Kiccha Sudeep: ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ದೇಶ ವಿದೇಶಗಳಲ್ಲಿ ದೊಡ್ಡ ಮಟ್ಟಿ ಗಿನ ಅಭಿಮಾನಿ ಬಳಗವಿದೆ. ರನ್ನ, ರಂಗ ಎಸೆಸೆಲ್ಸಿ, ಮುಸ್ಸಂಜೆ ಮಾತು, ಈಗ ಸೇರಿದಂತೆ ಬಹುಭಾಷೆಯ ಸಿನಿಮಾದಲ್ಲಿಯೂ ಸುದೀಪ್ ಅಭಿನಯಿಸುವ ಮೂಲಕ ಬಹಳ ಖ್ಯಾತಿ ಪಡೆದಿದ್ದಾರೆ. ಇಂದು 52ನೇ ಹುಟ್ಟುಹಬ್ಬದ ಸಂಭ್ರಮ. ಈ ನಿಟ್ಟಿನಲ್ಲಿ ಅವರ ಕೆಲವು ಅಪರೂಪದ ಸಂಗತಿಗಳ ಬಗ್ಗೆ ನೀವು ಕೂಡ ತಿಳಿಯಲೇಬೇಕು.
ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಕಿರುತೆರೆಯಲ್ಲಿಯೇ ಬಹುದೊಡ್ಡ ಹೆಸರನ್ನು ನಟ ಕಿಚ್ಚ ಸುದೀಪ್ ಅವರು ಮಾಡಿದ್ದಾರೆ. ಸಿನಿಮಾ ಹಾಗೂ ಇತರ ಜನಪರ ಕಾರ್ಯಕ್ರಮದ ಮೂಲಕ ಮನೆಮಾತಾದ ನಟ ಕಿಚ್ಚ ಸುದೀಪ್ ಅವರು ಇಂದು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಸಂಜೀವ್ ಮಂಜಪ್ಪ ಹಾಗೂ ತಾಯಿ ಸರೋಜಾ ಅವರ ಮಗನಾಗಿ 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಸುದೀಪ್ ಅವರು ಜನಿಸಿದರು. ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೊದಲಿಂದಲೂ ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಸೇರಿಕೊಂಡು ತರಬೇತಿ ಪಡೆದು ಖಾಸಗಿ ವಾಹಿನಿಯೊಂದರಲ್ಲಿ ಪ್ರೇಮದ ಕಾದಂಬರಿ ಧಾರವಾಹಿ ಮೂಲಕ ಕಿರುತೆರೆಯ ಧಾರವಾಹಿಯಿಂದ ನಟನೆಯನ್ನು ಆರಂಭಿಸಿದ್ದಾರೆ.
1997ರಲ್ಲಿ 'ತಾಯವ್ವ' ಹೆಸರಿನ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಇವರು ಪಾದಾರ್ಪಣೆ ಮಾಡಿದರು. ಆದರೆ ಈ ಸಿನಿಮಾ ಅವರಿಗೆ ಯಶಸ್ಸು ನೀಡಲಿಲ್ಲ. ಬಳಿಕ 1999ರಲ್ಲಿ ಪ್ರತ್ಯಾರ್ಥ ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದರು ಇದು ಕೂಡ ಅವರ ನಟನೆಗೆ ಬೇಕಾದ ಮಟ್ಟಿಗೆ ದೊಡ್ಡ ಪಾತ್ರವು ಆಗಿರಲಿಲ್ಲ. ಬಳಿಕ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನ ದಲ್ಲಿ ಸ್ಪರ್ಶ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದರು. ಈ ಸಿನಿಮಾ ಸಾಧಾರಣ ಯಶಸ್ಸು ನೀಡಿದೆ. 2001ರಲ್ಲಿ ತೆರೆಕಂಡ ಹುಚ್ಚ ಸಿನಿಮಾದಲ್ಲಿ ಕಿಚ್ಚ ಎಂಬ ಪಾತ್ರವನ್ನು ಸುದೀಪ್ ಅಭಿನಯಿಸಿದ್ದರು. ಇದು ಅವರಿಗೆ ಬಿಗ್ ಸಕಸ್ಸ್ ನೀಡಿದ್ದ ಸಿನಿಮಾ ಎನ್ನಬಹುದು. ಈ ಸಿನಿಮಾ ಸೂಪರ್ ಹಿಟ್ ಆಗಿ ಇವರು ಕಿಚ್ಚ ಎಂದೇ ಫೇಮಸ್ ಆದರು.
ನಂದಿ, ಕಿಚ್ಚ, ಸ್ವಾತಿ ಮುತ್ತು, ಮೈ ಆಟೋಗ್ರಾಫ್, ನಂ. 3 ಶಾಂತಿ ನಿವಾಸ, ಮುಸ್ಸಂಜೆ ಮಾತು, ಮದಕರಿ ನಾಯಕ, ವಿಷ್ಣುವರ್ಧನ, ಕೆಂಪೇಗೌಡ, ಮಾಣಿಕ್ಯ, ರನ್ನ, ಹೆಬ್ಬುಲಿ, ಪೈಲ್ವಾನ್, ದಿ ವಿಲನ್ ಸೇರಿದಂತೆ ಅನೇಕ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಸುದೀಪ್ ಕನ್ನಡ ಮಾತ್ರವಲ್ಲದೆ, ಪರಭಾಷಾ ಚಿತ್ರಗಳಲ್ಲಿಯೂ ಕೂಡ ಮಿಂಚಿದ್ದಾರೆ. ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಫೂಂಕ್', ತೆಲುಗಿನ ರಾಜಮೌಳಿ ನಿರ್ದೇಶನದ 'ಈಗ', 'ಬಾಹುಬಲಿ' ಹಾಗೂ ತಮಿಳಿನ 'ಪುಲಿ' ಚಿತ್ರಗಳಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಅವರ ಅಭಿನಯದ ಮ್ಯಾಕ್ಸ್ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಆದ ಬಳಿಕ ಅವರು ಇದೀಗ ಮಾರ್ಕ್ ಸಿನಿಮಾದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ನಟ ಸುದೀಪ್ ಅವರು ರಿಯಾಲಿಟಿ ಶೋ ನಿಂದಲು ಖ್ಯಾತಿ ಪಡೆದಿದ್ದಾರೆ. ಸುವರ್ಣ ವಾಹಿನಿಯಲ್ಲಿ ತೆರೆಕಂಡ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಪು ರಿಯಾಲಿಟಿ ಶೋನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸಕ್ರಿಯರಾದರು. ಅದರಂತೆ ಕೆಲವು ರಿಯಾ ಲಿಟಿ ಶೋ ನಲ್ಲಿ ಗೆಸ್ಟ್ ಆಗಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಮೈ ಆಟೋಗ್ರಾಪ್ ಸಿನಿಮಾದ ಮೂಲಕ ಸುದೀಪ್ ಅವರು ಕಿಚ್ಚ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಈ ಬ್ಯಾನರ್ ಅಡಿಯಲ್ಲಿ 73 ಶಾಂತಿ ನಿವಾಸ, ಮಾಣಿಕ್ಯ, ಜಿಗರಥಂಡ, ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ತೆರೆ ಮೇಲೆ ತಂದರು. ಇದರ ಜೊತೆಗೆ ಜೀ ಕನ್ನಡದಲ್ಲಿ ವಾರಸ್ದಾರ ಎಂಬ ಧಾರವಾಹಿ ಕೂಡ ಅವರು ನಿರ್ಮಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರಿಗೆ ಅಡುಗೆ ಮಾಡುವುದು ಎಂದರೆ ಬಹಳ ಇಷ್ಟ. ಬಿಗ್ ಬಾಸ್ ಹಾಗೂ ಪ್ಯಾಟೆ ಹುಡುಗಿರ್ ಹಳ್ಳಿ ಲೈಫು ರಿಯಾಲಿಟಿ ಶೋನ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ನೀಡಿದ್ದಾಗ ಅವರೆ ಕುಕ್ಕಿಂಗ್ ಎಂದರೆ ಅಚ್ಚು ಮೆಚ್ಚು ಎಂದು ಹೇಳಿಕೊಂಡಿದ್ದರು.
ಹಾಡು ಹೇಳುವುದನ್ನು ಇಷ್ಟ ಪಡುವ ಇವರು ತಮ್ಮ ಅನೇಕ ಸಿನಿಮಾಕ್ಕೆ ಹಾಡನ್ನು ಸಹ ಹಾಡಿದ್ದಾರೆ. ಬಹಳ ಇದರ ಜೊತೆಗೆ ಕ್ರಿಕೆಟ್ ಎಂದರೂ ಕೂಡ ಇವರಿಗೆ ಬಹಳ ಇಷ್ಟ. ಕಾಲೇಜು ದಿನಗಳಿಂದಲೇ ಇವರಿಗೆ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇತ್ತು. ಹೀಗಾಗಿ ಅಂಡರ್ 17 ಕ್ರಿಕೆಟ್‌ನಲ್ಲಿ ಕೂಡ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರು. ಸದ್ಯ ಅವರು ಕ್ರಿಕೆಟ್ (CCL)ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸುದೀಪ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಒಂದು ನಂದಿ ಪ್ರಶಸ್ತಿ, ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 'ಈಗ' ಚಿತ್ರಕ್ಕಾಗಿ ಸೈಮಾ, ಸಿನಿಮಾ ಅವಾರ್ಡ್ಸ್ ಹಾಗೂ ಟೊರಂಟೋ ಫಿಲ್ಮ್‌ಫೆಸ್ಟಿವಲ್ ಪ್ರಶಸ್ತಿಗಳು ಸೇರಿವೆ. ಪೈಲ್ವಾನ್' ಚಿತ್ರಕ್ಕಾಗಿ 2019ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.