ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Fashion 2025: ಸೀಸನ್‌ಗೆ ಎಂಟ್ರಿ ನೀಡಿದ 2025 ಮಾನ್ಸೂನ್ ಫ್ಯಾಷನ್

Monsoon Fashion 2025: ಮಾನ್ಸೂನ್ ಫ್ಯಾಷನ್ ಈಗಾಗಲೇ ಸೀಸನ್‌ಗೆ ಎಂಟ್ರಿ ನೀಡಿದೆ. ಎಂದಿನಂತೆ ನಾನಾ ಬಗೆಯ ವೈವಿಧ್ಯಮಯ ಮಾನ್ಸೂನ್ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಟ್ರೆಂಡಿ ಲುಕ್‌ ಜತೆಗೆ ಮಳೆಯಿಂದ ರಕ್ಷಿಸಲ್ಪಡುವ ಔಟ್‌ಫಿಟ್‌ಗಳು, ವಾಟರ್ ಪ್ರೂಫ್‌ವೇರ್‌ಗಳು ಸೇರಿದಂತೆ ನಾನಾ ಬಗೆಯವು ಲಗ್ಗೆ ಇಟ್ಟಿವೆ. ಮಳೆಗಾಲಕ್ಕೆ ಹೊಂದುವಂತಹ ವಿನೂತನ ವಿನ್ಯಾಸ, ಕಲರ್‌ಫುಲ್ ಶೇಡ್ಸ್ ಡಿಸೈನರ್‌ವೇರ್ಸ್ ಹಾಗೂ ಲೈಟ್‌ವೇಟ್ ಆಕ್ಸೆಸರೀಸ್‌ಗಳೊಂದಿಗೆ ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಮಾನ್ಸೂನ್ ಫ್ಯಾಷನ್ ಲಗ್ಗೆ ಇಟ್ಟಿದೆ. ಹೌದು, ಟ್ರೆಂಡಿ ಲುಕ್‌ ಜತೆಗೆ ಮಳೆಯಿಂದ ರಕ್ಷಿಸಲ್ಪಡುವ ಔಟ್‌ಫಿಟ್‌ಗಳು, ವಾಟರ್ ಪ್ರೂಫ್‌ವೇರ್‌ಗಳು ಸೇರಿದಂತೆ ನಾನಾ ಬಗೆಯವು ಲಗ್ಗೆ ಇಟ್ಟಿವೆ. ಮಳೆಗಾಲಕ್ಕೆ ಹೊಂದುವಂತಹ ವಿನೂತನ ವಿನ್ಯಾಸ, ಕಲರ್‌ಫುಲ್ ಶೇಡ್ಸ್ ಡಿಸೈನರ್‌ವೇರ್ಸ್ ಹಾಗೂ ಲೈಟ್‌ವೇಟ್ ಆಕ್ಸೆಸರೀಸ್‌ಗಳೊಂದಿಗೆ ಎಂಟ್ರಿ ನೀಡಿವೆ. ಪಾಸ್ಟೆಲ್‌ಶೇಡ್ಸ್, ಇಂಗ್ಲೀಷ್‌ ಕಲರ್ಸ್‌ನಲ್ಲಿ ಪ್ಲೇಲಿಸ್ಟ್ ಸೂಟ್, ಶಾರ್ಟ್ ಡ್ರೆಸ್, ಸ್ಟ್ರೆಚಬಲ್ ಫ್ರಾಕ್ಸ್, ಹೈವೇಸ್ಟ್ ಪ್ಯಾಂಟ್, ಎ ಲೈನ್ ಡಿಸೈನರ್‌ವೇರ್, ಸ್ಕೆಟರ್‌ ಡ್ರೆಸ್‌ ಸೇರಿದಂತೆ ಲೇಯರ್‌ ಲುಕ್ ನೀಡುವಂತಹ ಕ್ಯಾಶುವಲ್ಸ್, ಕೇಪ್ರೀಸ್, ಹಿಮ್ಮಡಿಯಿಂದ ಮೇಲೆ ಕೂರುವ ಲೆಗ್ಗಿಂಗ್ಸ್, ಶಾರ್ಟ್ ಸ್ಲಿಟ್ ಕುರ್ತಾದಂತಹ ಎಥ್ನಿಕ್ ಡ್ರೆಸ್, ಪಾರದರ್ಶಕ ರೇನ್‌ ಕೋಟ್ಸ್, ಜಂಕ್ ಮಿನಿಮಲ್ ಆಕ್ಸೆಸರೀಸ್, ರಬ್ಬರ್, ವಾಟರ್‌ಫ್ರೂಫ್ ಸ್ನೀಕರ್ಸ್, ಫ್ಲಿಪ್ಫ್ಲಾಪ್‌ಗಳು ಈ ಬಾರಿಯ ಮಾನ್ಸೂನ್‌ ಫ್ಯಾಷನ್‌ನಲ್ಲಿ ಹೊಸ ವಿನ್ಯಾಸಗಳಲ್ಲಿ ಎಂಟ್ರಿ ನೀಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.

2/5

ಲಾಂಗ್ ಡ್ರೆಸ್‌ಗಳಿಗೆ ಕೋಕ್

ಔಟ್‌ಡೋರ್‌ನಲ್ಲಿ ಧರಿಸುವ ಮಾರುದ್ದದ ಗೌನ್‌ ಹಾಗೂ ಲಾಂಗ್ ಲೆಹೆಂಗಾ, ಸ್ಕರ್ಟ್‌ಗಳಿಗೆ ಅಲ್ಪ ವಿರಾಮ ದೊರಕಿದೆ. ಅವುಗಳ ಜಾಗದಲ್ಲಿ ಶಾರ್ಟ್ ಜಂಪ್ಸೂಟ್ಸ್, ಎ ಲೈನ್, ಕ್ರಿಸ್ಕ್ರಾಸ್ಟಾಪ್ಸ್, ಸ್ವಿಂಗ್, ಚೈನಾ ಕಾಲರ್ ನೆಕ್ಲೈನ್ಸ್ ಇರುವ ಲೈಟ್‌ವೇಟ್ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ. ಕಟ್ಸ್ ಆ್ಯಂಡ್ ಸಿಲ್ಲೊಟ್ಸ್, ವೈಬ್ರೆಂಟ್ ಬೋಹೋ ಟಾಪ್ಸ್, ಸ್ಟ್ರೈಫ್ಸ್‌ಶರ್ಟ್, ಆ್ಯಂಕೆಲ್ ಲೆಂಥ್ ಸ್ಲಿಟ್ಪ್ಯಾಂಟ್ಸ್, ಶಾರ್ಟ್ ಹೆಮ್‌ಲೈನ್ಸ್‌ನವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.

3/5

ಕಾಲೇಜು ಹುಡುಗಿಯರ ಚಾಯ್ಸ್

ಎಂದಿನಂತೆ ಸಮ್ಮರ್‌ ಹಾಗೂ ಸ್ಪ್ರಿಂಗ್‌ ಸೀಸನ್‌ನಲ್ಲಿದ್ದ ಫ್ಲೋರಲ್‌ ಪ್ರಿಂಟ್‌ ಹೊಸ ರೂಪದೊಂದಿಗೆ ಮುಂದುವರೆದಿದೆ. ಪ್ಲೇನ್‌ ಫ್ಯಾಬ್ರಿಕ್‌ಗಳಲ್ಲೂ ಡ್ರೆಸ್‌ಗಳು ಬಂದಿವೆ. ಲೈಟ್‌ವೇಟ್ ಲೇಯರ್‌ಲುಕ್ ಆಗಮಿಸಿದೆ. ಇನ್ನು ಕಾಲೇಜು ಹುಡುಗಿಯರಿಗೆ ಪ್ರಿಯವಾಗುವಂತಹ ರೈನ್‌ಬೋ ಶೇಡ್ಸ್, ಕಾಂಪ್ಲೀಕೇಟೆಡ್ ಡಿಸೈನ್‌ ಡ್ರೆಸ್, ಸ್ಟ್ರಾಪ್, ಫ್ರಿಲ್ ಕ್ಯಾಶುವಲ್ ಟಾಪ್ ಬಲೂನ್ ಸ್ಲೀವ್ ಫ್ರಾಕ್, ನಿಯಾನ್ ಡಂಗ್ರೀಸ್‌ಗಳು ಟ್ರೆಂಡಿಯಾಗಿವೆ.

4/5

ವಾಟರ್‌ಫ್ರೂಪ್‌ ಪೂಟ್‌ವೇರ್

ಪ್ರತಿಬಾರಿಯಂತೆ ಈ ಬಾರಿಯೂ ಮಳೆಗಾಲ ಬಂದಾಕ್ಷಣಾ ನಾನಾ ಬಗೆಯ ವಾಟರ್‌ಫ್ರೂಫ್ ಆಕ್ಸೆಸರೀಸ್‌ಗಳು ಹಾಗೂ ಫುಟ್‌ವೇರ್‌ಗಳು ಚಾಲ್ತಿಗೆ ಬಂದಿವೆ. ಭಾರವಿಲ್ಲದ ಜಂಕ್ ಹಾಗೂ ಫಂಕಿ ಚೋಕರ್ಸ್, ಲೇಸ್, ಥ್ರೆಡ್ ನೆಕ್ಪೀಸ್‌ಗಳು, ಉದ್ದುದ್ದದ ಲೈಟ್‌ವೇಟ್ ಕಿವಿಯ ಹ್ಯಾಂಗಿಂಗ್ಸ್ ಪ್ರಚಲಿತದಲ್ಲಿವೆ.

5/5

ಲೇಯರ್‌ಲುಕ್‌ ನೀರ್ಲುಡುವ ಜಾಕೆಟ್ಸ್

ಇವುಗಳಲ್ಲಿ ಎರಡು ವರ್ಷಗಳ ಹಿಂದೆ ಟ್ರೆಂಡ್‌ನಲ್ಲಿದ್ದ ವೆರೈಟಿ ಡಿಸೈನ್‌ನ ವಿಂಡ್‌ ಟ್ರಾನ್ಸಪರೆಂಟ್ ಚೀಟರ್ಸ್, ಕಲರ್‌ಫುಲ್‌ ಜಾಕೆಟ್ಸ್, ಹೂಡಿ ಕೋಟ್, ಟ್ರಾನ್ಸಪರೆಂಟ್ ಮಾನೋಕ್ರೋಮ್ ಟ್ರೆಂಚ್‌ ಕೋಟ್‌ಗಳು ಯುವತಿಯರ ಮನ ಸೆಳೆದಿವೆ.

ಶೀಲಾ ಸಿ ಶೆಟ್ಟಿ

View all posts by this author