ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Onam Fashion 2025: ಫೆಸ್ಟೀವ್ ಸೀಸನ್ ಟ್ರೆಂಡ್‌ಗೆ ಸೇರಿದ ಓಣಂ ಡಿಸೈನರ್‌ವೇರ್ಸ್

Onam Fashion 2025: ಓಣಂ ಸಂಭ್ರಮಕ್ಕೆ ಸೀರೆ ಉಡಲು ಕಷ್ಟ ಎನ್ನುವ ಮಾನಿನಿಯರಿಗೆಂದೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ರೆಡಿಮೇಡ್ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಬಂದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಎಂಬುದರ ಬಗ್ಗೆ ಡಿಸೈನರ್ಸ್ ಸಿಂಪಲ್ಲಾಗಿ ವಿವರಿಸಿದ್ದಾರೆ.

ಚಿತ್ರಗಳು: ಪಿಕ್ಸೆಲ್
1/5

ಓಣಂ ಫೆಸ್ಟಿವ್ ಸೀಸನ್‌ನಲ್ಲಿ ನಾನಾ ಶೈಲಿಯ ಡಿಸೈನರ್‌ವೇರ್‌ಗಳು ಲಗ್ಗೆ ಇಟ್ಟಿವೆ. ಮಾನಿನಿಯರನ್ನು ಸಿಂಗರಿಸುತ್ತಿವೆ.

2/5

ರೆಡಿಮೇಡ್ ಓಣಂ ಎಥ್ನಿಕ್‌ವೇರ್ಸ್

ಹಬ್ಬದಂದು ಸೀರೆ ಬೇಡ! ಉಡಲು ಸಮಯವಿಲ್ಲ ಎನ್ನುವ ಮಾನಿನಿಯರಿಗೆಂದೇ ನಾನಾ ಬಗೆಯ ಓಣಂ ಡಿಸೈನರ್‌ವೇರ್‌ಗಳೆಂದೇ ಹೆಸರು ಪಡೆದ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಆಗಮಿಸಿವೆ. ಸಮಯದ ಅಭಾವವಿರುವವರು ಯಾರೂ ಬೇಕಾದರೂ ಓಣಂ ಲುಕ್ ಪಡೆಯಬಹುದಾದಂತಹ ಈ ಉಡುಪುಗಳು ಸದ್ಯ ಟ್ರೆಂಡ್ ಲಿಸ್ಟ್‌ಗೆ ಸೇರಿವೆ. ಅತಿ ಸುಲಭವಾಗಿ ಹಬ್ಬದ ಲುಕ್ ನೀಡುವಂತಹ ಈ ಡಿಸೈನರ್‌ವೇರ್‌ಗಳು ಸದ್ಯ ಹುಡುಗಿಯರ ಮನ ಗೆದ್ದಿವೆ ಎನ್ನುತ್ತಾರೆ ಕೇರಳ ಮೂಲದ ಡಿಸೈನರ್‌ಗಳಾದ ರಮಣ್ ಹಾಗೂ ಜೆನ್.

3/5

ಫೆಸ್ಟೀವ್ ಲುಕ್ ನೀಡುವ ಓಣಂ ಡ್ರೆಸ್

ಹಿಂದಿನ ಕಾಲದಂತೆ ಹಬ್ಬದ ಸೀಸನ್‌ನಲ್ಲಿ ಓಣಂ ಸೀರೆಯೇ ಉಡಬೇಕೆಂಬ ಡ್ರೆಸ್‌ಕೋಡ್ ಈ ಹಬ್ಬದಲ್ಲಿಲ್ಲ. ಬದಲಿಗೆ ಓಣಂನ ಫೆಸ್ಟಿವ್ ಲುಕ್‌ನಲ್ಲಿ ಕಾಣಿಸಿಕೊಂಡರೇ ಸಾಕು! ಈ ಜನರೇಷನ್‌ನ ಹುಡುಗಿಯರು ಹಾಗೂ ಮಕ್ಕಳು ಈ ಹಬ್ಬಕ್ಕೆ ಮ್ಯಾಚ್ ಆಗುವಂತಹ ಡಿಸೈನರ್‌ವೇರ್ ಧರಿಸಿದರೇ ಸಾಕು! ಎಂಬ ಮನೋಭಾವ ಮನೆಯ ಹಿರಿಯರಲ್ಲಿ ಮೂಡಿರುವುದು, ಈ ಉಡುಗೆಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ಟ್ರೆಂಡ್‌ನಲ್ಲಿರುವ ಓಣಂ ಉಡುಪುಗಳು

ಈ ಸೀಸನ್‌ನಲ್ಲಿ ಉದ್ದನೆಯ ಎಥ್ನಿಕ್ ಗೌನ್, ಬಾರ್ಡರ್ ಗೌನ್, ಓಣಂ ಡ್ರೆಸ್‌ಗಳಲ್ಲಿ ಲಾಂಗ್ ಲಂಗ, ಹಾಫ್ ವೈಟ್, ಕ್ರೀಮ್ ಬಣ್ಣದ ಗೋಲ್ಡನ್ ಬಾರ್ಡರ್‌ನ ಲಂಗ-ದಾವಣಿ, ಲೆಹೆಂಗಾ ಶೈಲಿಯ ಉಡುಗೆ, ತ್ರೀ ಪೀಸ್ ಓಣಂ ಔಟ್‌ಫಿಟ್ಸ್, ಅನಾರ್ಕಲಿ ಶೈಲಿಯ ಲಾಂಗ್ ಬಾರ್ಡರ್ ಲಂಗ, ಗೋಲ್ಡನ್ ಹಾಗೂ ಸಿಲ್ವರ್ ಝರಿಯ ಉದ್ದ-ಲಂಗ ಸೇರಿದಂತೆ ನಾನಾ ಬಗೆಯವು ಈ ಫೆಸ್ಟಿವ್ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ.

5/5

ಹೆಣ್ಣು ಮಕ್ಕಳಿಗೂ ಓಣಂ ಡ್ರೆಸ್

ಯುವತಿಯರನ್ನು ಮಾತ್ರವಲ್ಲ, ಚಿಕ್ಕ ಹೆಣ್ಣು ಮಕ್ಕಳನ್ನು ಕೂಡ ಈ ಓಣಂ ಡ್ರೆಸ್‌ಗಳು ಸವಾರಿ ಮಾಡತೊಡಗಿವೆ. ಎಲ್ಲರಿಗೂ ಪ್ರಿಯವಾಗಿವೆ ಎನ್ನುತ್ತಾರೆ ಡಿಸೈನರ್ ರಾಧಿಕಾ ವಾರಿಯರ್.

ಶೀಲಾ ಸಿ ಶೆಟ್ಟಿ

View all posts by this author