Samantha: ಸಮಂತಾ ರುತ್ ಹೊಸ ಫೋಟೋಶೂಟ್ ಗೆ ಫ್ಯಾನ್ಸ್ ಫುಲ್ ಫಿದಾ!
Samantha Ruth photoshoot: ದಕ್ಷಿಣದ ಟಾಪ್ ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾ ಅಲ್ಲದೆ ವೈಯಕ್ತಿಕ ಜೀವನಿಂದಲೂ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಈಗ ಅವರು ತಮ್ಮ ಗ್ಲಾಮರ್ ಲುಕ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಗ್ರಾಜಿಯಾ ಫ್ಯಾಷನ್ ಮ್ಯಾಗಜೀನ್‌ನ ಆಗಸ್ಟ್-ಸೆಪ್ಟೆಂಬರ್ 2025 ಸಂಚಿಕೆಯ ಮುಖಪುಟಕ್ಕೆ ಸಮಂತಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದ್ಭುತ ಚಿನ್ನಾಭರಣ ಧರಿಸಿರುವ ಅವರ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗ್ರಾಜಿಯಾ ಫ್ಯಾಷನ್ ಮ್ಯಾಗಜೀನ್‌ನ ಆಗಸ್ಟ್-ಸೆಪ್ಟೆಂಬರ್ 2025 ಸಂಚಿಕೆಯ ಮುಖಪುಟಕ್ಕೆ ಸಮಂತಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋದಲ್ಲಿ ನಟಿ ಸಮಂತಾ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಬಹಳ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ
ಚಿನ್ನಾಭರಣ ಧರಿಸಿರುವ ಅವರ ಬ್ಯೂಟಿ ಲುಕ್ ಮತ್ತಷ್ಟು ಆಕರ್ಷಕವಾಗಿದ್ದು ಅವರ ಮಿನುಗುತ್ತಿರುವ ಲುಕ್ ಎಲ್ಲರ ಕಣ್ಣು ಸೆಳೆಯುವಂತಿದೆ. ಅಭಿಮಾನಿಗಳು "ಅದ್ಭುತ ಲುಕ್ "ಗ್ಲಾಮ್ ಕ್ವೀನ್" ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿನಯ ಮತ್ತು ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿರುವ ಸಮಂತಾ ತನ್ನ ವಿಭಿನ್ನ ಪಾತ್ರ ಗಳಿಂದಲೇ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿ ಕೊಳ್ಳು ವುದರಲ್ಲಿ ಸಮಂತಾ ಸದಾ ಮುಂಚೂಣಿಯಲ್ಲಿದ್ದಾರೆ. ಈ ವರ್ಷ ಅವರು ಮೊದಲ ಬಾರಿಗೆ ಸುಭಂ ಎಂಬ ಚಿತ್ರವನ್ನು ನಿರ್ಮಿಸಿ ಪ್ರೊಡ್ಯೂಸರ್ ಆಗಿಯೂ ಪಾದಾರ್ಪಣೆ ಮಾಡಿದ್ದಾರೆ.
ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಸಮಂತಾ, “ನಿಮ್ಮ ಬಳಿ ನೂರು ಸಮಸ್ಯೆಗಳಿರಬಹುದು, ಆದರೆ ಆರೋಗ್ಯದ ಸಮಸ್ಯೆ ಬಂದಾಗ ಒಂದೇ ಸಮಸ್ಯೆ ಉಳಿಯುತ್ತದೆ..ಅದು ಆರೋಗ್ಯವೇ” ಎಂದು ಹೃದಯಸ್ಪರ್ಶಿ ಮಾತುಗಳನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ಯಶೋದ" ,"ಶಾಕುಂತಲಂ" , "ಖುಷಿ" ಇತ್ಯಾದಿ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿರುವ ಸಮಂತಾ ಈ ಫೋಟೋಶೂಟ್ ಅವರ ಗ್ಲಾಮರ್ ಮಾತ್ರವಲ್ಲ, ಅವರ ಆತ್ಮವಿಶ್ವಾಸ ಮತ್ತು ಶ್ರಮವನ್ನು ಪ್ರತಿ ಬಿಂಬಿಸುತ್ತಿದೆ.