Saree Blouse Fashion 2025: ಓಣಂ ಸೀರೆಗೆ ವೈವಿಧ್ಯಮಯ ಡಿಸೈನರ್ ಬ್ಲೌಸ್ ಮ್ಯಾಚಿಂಗ್
Onam 2025: ಕೇರಳದ ಓಣಂ ಹಬ್ಬದಂದು ಉಡುವ ವಿಶೇಷ ಸೀರೆಗೆ ಕಾಂಟ್ರಾಸ್ಟ್ ವರ್ಣದ ನಾನಾ ಬಗೆಯ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದು ಇದೀಗ ಟ್ರೆಂಡಿಯಾಗಿದೆ. ಯಾವ್ಯಾವ ಬ್ಲೌಸ್‌ಗಳನ್ನು ಹೇಗೆಲ್ಲಾ ಮ್ಯಾಚ್ ಮಾಡಬಹುದು? ಇಲ್ಲಿದೆ ಡಿಟೇಲ್ಸ್.
ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವ ಟ್ರಂಡ್
ಓಣಂ ಹಬ್ಬದಂದು ಉಡುವ ವಿಶೇಷವಾದ ಶ್ವೇತ ವರ್ಣದ ಇಲ್ಲವೇ ಐವರಿ ವರ್ಣದ ಕೇರಳ ಸೀರೆಗಳಿಗೆ ಅಥವಾ ಸಿಲ್ಕ್ ಮಿಕ್ಸ್ ಕಾಟನ್ ಸೀರೆಗಳಿಗೆ ಕಾಂಟ್ರಸ್ಟ್ ಶೇಡ್‌ನ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದು ಇದೀಗ ಈ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಯಾವ್ಯಾವ ಬಗೆಯವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಡೀಸೆಂಟ್ ಲುಕ್ ನೀಡುವ ಮಾನೋಕ್ರೊಮ್ ಶೇಡ್ ಬ್ಲೌಸ್
ಆಯಾ ಸೀರೆಯ ಬಣ್ಣದ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡುವುದನ್ನು ಮಾನೋಕ್ರೋಮ್ ಬ್ಲೌಸ್ ಮ್ಯಾಚ್ ಎನ್ನಬಹುದು. ಇಲ್ಲವೇ ಸೀರೆಯೊಂದಿಗೆ ದೊರೆಯುವ ಸೇಮ್ ಕಲರ್‌ನ ಬ್ಲೌಸನ್ನು ಮತ್ತಷ್ಟು ಡಿಸೈನ್ ಮಾಡಿಸಿ, ಮ್ಯಾಚಿಂಗ್ ಮಾಡುವುದು ಈ ಕಾನ್ಸೆಪ್ಟ್‌ನಲ್ಲಿ ಸೇರುತ್ತದೆ. ಇದು ಡೀಸೆಂಟ್ ಲುಕ್ ನೀಡುತ್ತದೆ.
ಹೈಲೈಟ್ ಮಾಡುವ ಕಾಂಟ್ರಾಸ್ಟ್ ಶೇಡ್‌ನ ಬ್ಲೌಸ್: ಸೀರೆಗೆ ತದ್ವಿರುದ್ಧವಾಗಿ ಮಾಡುವ ಬ್ಲೌಸ್ ಮ್ಯಾಚಿಂಗ್ ಇದಾಗಿದ್ದು, ಇತ್ತೀಚೆಗೆ ಇದು ಸಾಮಾನ್ಯವಾಗಿದೆ. ಇದರಿಂದ ಡಿಫರೆಂಟ್ ಲುಕ್ ಪಡೆಯಬಹುದು. ಕಳೆದ ಬಾರಿ ಧರಿಸಿದ್ಧ ಸೀರೆಯನ್ನು ಮತ್ತೊಮ್ಮೆ ಧರಿಸುವಾಗ ಈ ರೀತಿ ಕಾಂಟ್ರಾಸ್ಟ್ ಬ್ಲೌಸ್ ಧರಿಸಿ ಡಿಫರೆಂಟ್ ಲುಕ್ ನೀಡಬಹುದು. ಆಗ ಸೀರೆ ಹಳತೆನಿಸುವುದಿಲ್ಲ. ಇನ್ನು ಗ್ರ್ಯಾಂಡ್ ಲುಕ್ ಬೇಕಿದ್ದಲ್ಲಿ ಕೂಡ ಈ ಕಾನ್ಸೆಪ್ಟ್ ಅಳವಡಿಸಿಕೊಳ್ಳಬಹುದು.
ವೈವಿಧ್ಯಮಯ ಡಿಸೈನರ್ ಬ್ಲೌಸ್
ಕೇರಳದ ಸೀರೆಗಳಿಗೆ ಇದೀಗ ಸೆಲೆಬ್ರಿಟಿಗಳು ಗ್ರ್ಯಾಂಡ್ ಲುಕ್ ನೀಡಲು ಡಿಸೈನರ್ ಬ್ಲೌಸ್‌ಗಳನ್ನು ಧರಿಸಲು ಆರಂಭಿಸಿದ್ದಾರೆ. ಇದು ಸೆಲೆಬ್ರಿಟಿ ಲುಕ್ ನೀಡುತ್ತದೆ. ಹ್ಯಾಂಡ್‌ಮೇಡ್ ವರ್ಕ್ ಇಲ್ಲವೇ ಗೋಲ್ಡನ್ ವರ್ಕ್‌ನ ಬ್ಲೌಸ್‌ಗಳನ್ನು ಸೀರೆಗೆ ಧರಿಸಬಹುದು. ಸಾಮಾನ್ಯ ಮಹಿಳೆ ಕೂಡ ಡಿಸೈನರ್ ಬ್ಲೌಸ್‌ಗಳಲ್ಲಿ ಸೆಲೆಬ್ರೆಟಿ ಲುಕ್ ಪಡೆಯಬಹುದು.
ಸಾದಾ ಬಾರ್ಡರ್ ಸೀರೆಗಳಿಗೆ ಪ್ರಿಂಟೆಡ್ ಬ್ಲೌಸ್
ಸೀರೆಗಳಿಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಕಾಣುವ ಪ್ರಿಂಟೆಡ್ ಬ್ಲೌಸ್‌ಗಳನ್ನು ಇತ್ತೀಚೆಗೆ ಸಾದಾ ಬಾರ್ಡರ್ ಸೀರೆಗಳಿಗೆ ಧರಿಸಲಾಗುತ್ತಿದೆ. ಇದು ಟ್ರೆಂಡಿಯಾಗಿದೆ ಕೂಡ. ಉದಾಹರಣೆಗೆ, ಪೆನ್ ಕಲಾಂಕಾರಿ ಬ್ಲೌಸ್, ಇಲ್ಲವೇ ಚೆಕ್ಸ್ ಅಥವಾ ಜಾಮೆಟ್ರಿಕಲ್ ಡಿಸೈನ್ ಪ್ರಿಂಟ್ ಇರುವಂತವನ್ನು ಈ ಸೀರೆಗೆ ಧರಿಸಬಹುದು. ನೋಡಲು ಇವು ವಿಭಿನ್ನ ಲುಕ್ ನೀಡುತ್ತವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.
ಓಣಂ ಸೀರೆಗಳಿಗೆ ಬ್ಲೌಸ್ ಮ್ಯಾಚ್ ಮಾಡುವವರೇ ಗಮನಿಸಿ
- ಬ್ಲೌಸ್‌ನ ನೆಕ್‌ಲೈನ್ ಸೂಟ್ ಆಗಬೇಕು.
- ಸೀರೆ ಹಳತಾದಲ್ಲಿ ಡಿಸೈನರ್ ಬ್ಲೌಸ್ ಆಯ್ಕೆ ಮಾಡಿ.
- ಬ್ಲೌಸ್‌ನ ಸ್ಲೀವ್ ಡಿಸೈನ್ ಕೂಡ ಹೊಸ ಲುಕ್ ನೀಡುತ್ತದೆ.
- ಹಬ್ಬದ ಸಂಭ್ರಮಕ್ಕೆ ಸೂಟ್ ಆಗುವಂತಿರಲಿ.