ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವೈಬ್ರೆಂಟ್‌ ಪಿಂಕ್‌ ಔಟ್‌ಫಿಟ್‌ನಲ್ಲಿ ನಟಿ ಮುಗ್ದಾ ಪೂಲ್‌ ಸೈಡ್‌ ಲುಕ್‌

Star Fashion 2025: ವೈಬ್ರೆಂಟ್‌ ಪಿಂಕ್‌ ಶೇಡ್‌ನ ಸ್ಕೂಬಾ ಮೆಟಿರಿಯಲ್‌ನ ಫ್ಲವರ್‌ ವಿನ್ಯಾಸದ ಬಾಡಿಕಾನ್‌ ಗೌನ್‌ನಲ್ಲಿ ಪೂಲ್‌ ಸೈಡ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಮುಗ್ದಾ ಗೋಡ್ಸೆಯ ಔಟ್‌ಫಿಟ್‌ ಸದ್ಯ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಈ ಔಟ್‌ಫಿಟ್‌ ಕುರಿತಂತೆ ಖುದ್ದು ಡಿಸೈನರ್‌ ಲಕ್ಷ್ಮಿ ಕೃಷ್ಣ ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.

ಚಿತ್ರಗಳು: ಲಕ್ಷ್ಮಿಕೃಷ್ಣ ಡಿಸೈನರ್‌ವೇರ್‌ನಲ್ಲಿ ಬಾಲಿವುಡ್‌ ನಟಿ ಮುಗ್ದಾ ಗೋಡ್ಸೆ.
1/5

ಬಾಲಿವುಡ್‌ ನಟಿ ಮುಗ್ದಾ ಗೋಡ್ಸೆಯ ವೈಬ್ರೆಂಟ್‌ ಪಿಂಕ್‌ ಶೇಡ್‌ನ ಬಾಡಿಕಾನ್‌ ಗೌನ್‌ ಸದ್ಯ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

2/5

ಪ್ರಯೋಗಾತ್ಮಕ ಔಟ್‌ಫಿಟ್‌

ಮುಗ್ದಾರ ಪ್ರಯೋಗಾತ್ಮಕ ಈ ಪೂಲ್‌ ಸೈಡ್‌ ಸ್ಟೈಲ್‌ ಸ್ಟೇಟ್‌ಮೆಂಟ್‌, ಫ್ಯಾಷನ್‌ ವಿಮರ್ಶಕರನ್ನೂ ಆಕರ್ಷಿಸಿದೆ. ಮುಗ್ದಾರ ಈ ಹೊಸ ಥೀಮ್‌ ಫ್ಯಾಷನ್‌ಲೋಕದಲ್ಲಿ ಪ್ರಯೋಗಾತ್ಮಕ ವೇರ್‌ ಪ್ರಿಯರಿಗೆ ಮುನ್ನೆಡೆಯಲು ಪ್ರೋತ್ಸಾಹಿಸಿದೆ.

3/5

ಮಾಡೆಲ್‌ ಕಮ್‌ ನಟಿ ಮುಗ್ದಾ ಫ್ಯಾಷನ್‌

ಎಲ್ಲರಿಗೂ ಗೊತ್ತಿರುವಂತೆ ಮುಗ್ದಾ ಮಾಡೆಲ್‌ ಹಾಗೂ ಬಾಲಿವುಡ್‌ ನಟಿ. ಕೇವಲ ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲ, ಸೌತ್‌ ಇಂಡಿಯನ್‌ ಸಿನಿಮಾಗಳಲ್ಲೂ ಕಾಣಿಸಿಕೊಂಡು ಹೆಸರು ಮಾಡಿರುವಾಕೆ. ಅಷ್ಟೇಕೆ? ಸಾಕಷ್ಟು ಫ್ಯಾಷನ್‌ವೀಕ್‌ಗಳಲ್ಲಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿ ತಮ್ಮ ಛಾಪನ್ನು ಮೂಡಿಸಿರುವಾಕೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಫೋಟೋಗಳ ಮೂಲಕ ಅನಾವರಣಗೊಳಿಸುತ್ತಿರುತ್ತಾರೆ.

4/5

ಲಕ್ಷ್ಮಿಕೃಷ್ಣ ಡಿಸೈನರ್‌ವೇರ್‌ನಲ್ಲಿ ಮುಗ್ದಾ

ಅಂದಹಾಗೆ, ಮುಗ್ದಾರ ಈ ಡಿಸೈನರ್‌ವೇರನ್ನು ಡಿಸೈನ್‌ ಹಾಗೂ ಸ್ಟೈಲಿಂಗ್‌ ಮಾಡಿರುವುದು ಕನ್ನಡದ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಅವರು ಮುಗ್ದಾ ಅವರ ಅಭಿಲಾಷೆಯಂತೆ ಔಟ್‌ಫಿಟ್‌ ಡಿಸೈನ್‌ ಮಾಡಿದ್ದಾರೆ. ಸೈ ಎನಿಸಿಕೊಂಡಿದ್ದಾರೆ.

5/5

ಕಂಪ್ಲೀಟ್‌ ಡಿಫರೆಂಟ್‌ ಕಾನ್ಸೆಪ್ಟ್

ಎಲ್ಲರೂ ಪೂಲ್‌ನಲ್ಲಿ ಶಾರ್ಟ್ ಡ್ರೆಸ್‌ ಅಥವಾ ಸ್ವಿಮ್‌ ಸೂಟ್‌ ಹಾಕಿಕೊಂಡು ಶೂಟ್‌ ಮಾಡಿಸುತ್ತಾರೆ. ಆದರೆ, ಮುಗ್ದಾ ಅವರಿಗೆ ಕೊಂಚ ಡಿಫರೆಂಟ್‌ ಆಗಿ ಕಾಣಿಸಬೇಕಿತ್ತು. ಹೊಸತನ ಬೇಕಿತ್ತು. ಹಾಗಾಗಿ ನಾವು ಅವರ ಅಭಿಲಾಷೆಯಂತೆ ಸ್ಕೂಬಾ ಮೆಟಿರಿಯಲ್‌ನಲ್ಲಿ ಬಾಡಿಕಾನ್‌ ಗೌನ್‌ ಸಿದ್ಧಪಡಿಸಿದೆವು. ಇದು ಅವರನ್ನು ಸಖತ್ತಾಗಿ ಬಿಂಬಿಸಿತು. ವಿಭಿನ್ನ ಲುಕ್‌ ನೀಡಿತು ಎಂದು ವಿಶ್ವವಾಣಿ ನ್ಯೂಸ್‌ಗೆ ಡಿಸೈನರ್‌ ಲಕ್ಷ್ಮಿ ಕೃಷ್ಣ ಹೇಳಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author