ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಟ್ರೆಂಡ್‌ಗೆ ಮರಳಿದ ನಟಿ ಪ್ರಿಯಾಮಣಿ ಧರಿಸಿದ ಅನಾರ್ಕಲಿ ಕುರ್ತಾ ಸೂಟ್‌

Star Fashion 2025: ನಟಿ ಪ್ರಿಯಾಮಣಿ ಧರಿಸಿದ್ದ ಪರ್ಪಲ್ ಅನಾರ್ಕಲಿ ಕುರ್ತಾ ಸೂಟ್‌ ಮರಳಿ ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ತ್ರೀ ಪೀಸ್‌ ಸೂಟ್‌ ಸದ್ಯ ಮಾನಿನಿಯರನ್ನು ಸವಾರಿ ಮಾಡಲು ನಾನಾ ಬ್ರಾಂಡ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಚಿತ್ರಗಳು: ಪ್ರಿಯಾಮಣಿ, ಬಹುಭಾಷಾ ನಟಿ., ಫೋಟೋಗ್ರಾಫಿ: ಅರೊನ್‌ ಒಬೆದ್‌
1/5

ನಟಿ ಪ್ರಿಯಾಮಣಿ ಧರಿಸಿರುವ ಅನಾರ್ಕಲಿ ಕುರ್ತಾ ಸೂಟ್‌ ಮರಳಿ ಟ್ರೆಂಡಿಯಾಗಿದೆ. ಹೌದು, ಎವರ್‌ಗ್ರೀನ್‌ ಲಿಸ್ಟ್‌ನಲ್ಲಿರುವ ಈ ಎಥ್ನಿಕ್‌ ಸ್ಟೈಲ್‌ನ ಕುರ್ತಾ ಸೂಟ್‌ ಇದೀಗ ಮತ್ತೊಮ್ಮೆ ಪ್ರಿಯಾಮಣಿಯವರ ಮೂಲಕ ಟ್ರೆಂಡ್‌ಗೆ ವಾಪಸ್‌ ಆಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ತ್ರೀ ಪೀಸ್‌ ಸೂಟ್‌ ಸದ್ಯ ಮಾನಿನಿಯರನ್ನು ಸವಾರಿ ಮಾಡಲು ನಾನಾ ಬ್ರಾಂಡ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

2/5

ಪ್ರಿಯಾಮಣಿ ಧರಿಸಿದ್ದ ಅನಾರ್ಕಲಿ ಕುರ್ತಾ ಸೂಟ್‌

ಅಂದಹಾಗೆ, ಬಹುಭಾಷಾ ತಾರೆ ಪ್ರಿಯಾಮಣಿ ತಮ್ಮ ಗುಡ್‌ ವೈಫ್‌ ಸಿನಿಮಾ ಇವೆಂಟ್‌ನಲ್ಲಿ ಧರಿಸಿರುವ ಸ್ವರೂಪ ಲೆಬೆಲ್‌ನ ಈ ಡಿಸೈನರ್‌ವೇರ್‌ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿತ್ತು.

3/5

ಅಂದಹಾಗೆ, ಫ್ಯಾಷನ್‌ ವಿಮರ್ಶಕರು ಹೇಳುವಂತೆ, ಈ ಅನಾರ್ಕಲಿ ಡಿಸೈನ್‌ನ ಲಾಂಗ್‌ ಕುರ್ತಾ ಸೂಟ್‌ ಹೊಸ ಶೈಲಿಯ ಡಿಸೈನರ್‌ವೇರ್‌ ಏನಲ್ಲ! ಇದು ಹಳೆಯ ಡಿಸೈನೇ! ಆದರೆ, ಕೆಲಕಾಲ ಈ ವಿನ್ಯಾಸದ ಎಥ್ನಿಕ್‌ವೇರ್‌ಗಳು ಸೈಡಿಗೆ ಸರಿದಿದ್ದವು. ಅದರಲ್ಲೂ ಡಾರ್ಕ್‌ ಶೇಡ್‌ನವು ಕೊಂಚ ಸೀಸನ್‌ನಿಂದ ಆಚೆ ಇದ್ದವು. ಇದೀಗ ಈ ಮಾನ್ಸೂನ್‌ನಲ್ಲಿ ಡಾರ್ಕ್‌ ಶೇಡ್‌ನಲ್ಲಿ ಡಿಸೈನರ್‌ಗಳಿಂದ ಡಿಸೈನ್‌ಗೊಂಡು ಹೊರಬಿದ್ದಿವೆ, ಇದಕ್ಕೆ ಪೂರಕ ಎಂಬಂತೆ, ಪ್ರಿಯಾಮಣಿ ಕೂಡ ಇವೆಂಟ್‌ನಲ್ಲಿ ಈ ಶೈಲಿಯ ಡಿಸೈನರ್‌ವೇರ್‌ ಧರಿಸಿ, ಆಕರ್ಷಕವಾಗಿ ಕಾಣಿಸಿಕೊಂಡದ್ದು, ಮತ್ತೊಮ್ಮೆ ಈ ವಿನ್ಯಾಸದ ಅನಾರ್ಕಾಲಿ ಕುರ್ತಾ ಸೂಟ್‌ಗಳು ಮತ್ತೊಮ್ಮೆ ಟ್ರೆಂಡಿಯಾಗಲು ಕಾರಣವಾಗಿವೆ ಎನ್ನುತ್ತಾರೆ.

4/5

ಮಾನ್ಸೂನ್‌ಗೆ ತಕ್ಕ ಡಾರ್ಕ್‌ ಶೇಡ್‌ ಡಿಸೈನರ್‌ವೇರ್‌

ನೋಡಲು ಎ ಲೈನ್‌ ಕಟ್‌ ಹೊಂದಿರುವಂತಹ ಈ ಅನಾರ್ಕಲಿ ಕುರ್ತಾ ಸೂಟ್‌ಗಳು ಸಾದಾ ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿದ್ದು, ನೆಕ್‌ಲೈನ್‌ ಹಾಗೂ ಸ್ಲೀವ್‌ಗಳು ಮಾತ್ರ ಬಾರ್ಡರ್‌ ಡಿಸೈನ್‌ ಹೊಂದಿವೆ. ಇನ್ನು ಇದಕ್ಕೆ ಮ್ಯಾಚ್‌ ಮಾಡಿರುವ ದುಪಟ್ಟಾ ಮಾತ್ರ ಮೊಟಿಫ್‌ ಜತೆಗೆ ಬಾರ್ಡರ್‌ ಹೊಂದಿದ್ದು ಶೀರ್‌ ವಿನ್ಯಾಸದ್ದಾಗಿದೆ. ಇದು ಇಡೀ ಡಿಸೈನರ್‌ವೇರ್‌ನ ಕಳೆ ಹೆಚ್ಚಿಸಿದೆ. ಪ್ರಿಯಾ ಮಣಿ ಆಕರ್ಷಕವಾಗಿ ಕಾಣಿಸುವಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಅನಾರ್ಕಲಿ ಕುರ್ತಾ ಸೂಟ್‌ನಲ್ಲಿ ಪ್ರಿಯಾಮಣಿಯಂತೆ ಕಾಣಿಸಲು ಟಿಪ್ಸ್

  • ಆದಷ್ಟೂ ಸಾದಾ ವಿನ್ಯಾಸದ ಫ್ಯಾಬ್ರಿಕ್‌ ಚೂಸ್‌ ಮಾಡಿ.
  • ದುಪಟ್ಟಾ ಡಿಸೈನರ್‌ದ್ದಾಗಿರಲಿ.
  • ಮಾನೋಕ್ರೋಮ್‌ ಲುಕ್‌ಗಾಗಿ ಎಲ್ಲವೂ ಒಂದೇ ವರ್ಣದ್ದಾಗಿಲಿ.
  • ನಿಮಗೆ ಅಗತ್ಯವಿರುವಂತೆ ಮೇಕಪ್‌ ಮಾಡಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author