ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ನಟಿ ಶ್ರೀಲೀಲಾ ರೆಡಿ ರೆಡ್‌ ಸೀರೆ ಲುಕ್‌ಗೆ ಫ್ಯಾನ್ಸ್ ಫಿದಾ

Star Saree Fashion 2025: ರೆಡಿ ರೆಡ್‌ ಹಾಟ್‌ ಲುಕ್‌ನ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಲೀಲಾ ಅವರ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಈ ಲುಕ್‌ ಹೇಗಿದೆ? ಸ್ಟೈಲಿಂಗ್‌ ವಿಶೇಷತೆಯೇನು? ಅವರಂತೆ ಕಾಣಿಸಲು ಹುಡುಗಿಯರು ಮಾಡಬೇಕಾದ್ದೇನು? ಈ ಕುರಿತಂತೆ ಫ್ಯಾಷನಿಸ್ಟಾಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಗಳು: ಶ್ರೀಲೀಲಾ
1/5

ಸೀರೆ ಪ್ರಿಯರನ್ನು ಆಕರ್ಷಿಸಿದ ಶ್ರೀಲೀಲಾ

ರೆಡ್‌ ಹಾಟ್‌ ಸೀರೆ ಲುಕ್‌ನಲ್ಲಿ ಶ್ರೀಲೀಲಾ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಹೌದು, ರೆಡ್‌ ಹಾಟ್‌ ಲುಕ್‌ನ ರೆಡಿಮೇಡ್‌ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಲೀಲಾ ಲುಕ್‌ಗೆ ಸದ್ಯ ಸೋಶಿಯಲ್‌ ಮೀಡಿಯಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಈ ಲುಕ್‌ ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಸೀರೆ ಪ್ರಿಯ ಹುಡುಗಿಯರನ್ನು ಆಕರ್ಷಿಸಿದೆ.

2/5

ಶ್ರೀಲೀಲಾ ರೆಡಿ ರೆಡ್‌ ಸೀರೆ

ಅಂದಹಾಗೆ ಶ್ರೀಲೀಲಾ ಕಾಣಿಸಿಕೊಂಡಿರುವ ರೆಡ್‌ ಸೀರೆ ಅವರನ್ನು ಗ್ಲಾಮರಸ್‌ ಆಗಿ ಬಿಂಬಿಸಿರುವುದಂತೂ ಸತ್ಯ. ಅವರು ಈ ಸೀರೆಯನ್ನು ಉಟ್ಟಿಲ್ಲ! ಬದಲಿಗೆ ಧರಿಸಿದ್ದಾರೆ ಹಾಗೆನ್ನುತ್ತಾರೆ ಫ್ಯಾಷನಿಸ್ಟಾಗಳು. ಯಾಕೆಂದರೆ ಇದು ರೆಡಿಮೇಡ್‌ ಸೀರೆ. ಸುತ್ತಿಕೊಂಡು ನೆರಿಗೆಗಳನ್ನು ಹಿಡಿಯುವಂತಿಲ್ಲ. ಎಲ್ಲವೂ ಮೊದಲೇ ಡಿಸೈನ್‌ ಆಗಿ ರೆಡಿ ಮಾಡಿರಲಾಗಿರುತ್ತದೆ. ಅದನ್ನು ಧರಿಸಿದಾರಾಯಿತು ಅಷ್ಟೇ ಎನ್ನುತ್ತಾರೆ.

3/5

ಶ್ರೀಲೀಲಾ ಸೀರೆಯ ಹಾಲ್ಟರ್‌ ನೆಕ್‌ ಬ್ಲೌಸ್‌

ಈ ಸೀರೆಗೆ ಧರಿಸಿರುವ ಡಿಸೈನರ್‌ ಹಾಲ್ಟರ್‌ ನೆಕ್‌ ಬ್ಲೌಸ್‌ ಸೀರೆಯನ್ನು ಮತ್ತಷ್ಟು ಗ್ಲಾಮರಸ್‌ ಆಗಿ ಬಿಂಬಿಸಿದೆ. ನೋಡಲು ಬಿಂದಾಸ್‌ ಲುಕ್‌ ನೀಡಿದೆ. ಜತೆಗೆ ಮಾನೋಕ್ರೋಮ್‌ ಕ್ರಾಪ್‌ ಟಾಪ್‌ ಡಿಸೈನ್‌ನಂತಿರುವ ಶೀರ್‌ ಡಿಸೈನ್‌ನ ಈ ಹಾಲ್ಟರ್‌ ನೆಕ್‌ ಡಿಸೈನರ್‌ ಬ್ಲೌಸ್‌ ರೆಡ್‌ ಸೀರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ವಿದ್ಯಾ.

4/5

ರೆಡ್‌ ರೆಡಿಮೇಡ್‌ ಸೀರೆಯ ಸೊಬಗು

ಇನ್ನು ರೆಡ್‌ ರೆಡಿಮೇಡ್‌ ಸೀರೆಯ ಸೊಬಗು ಹೆಚ್ಚಲು ಪ್ರಮುಖ ಕಾರಣ ಶ್ರೀಲೀಲಾ ಅವರ ಸಿಂಪಲ್‌ ಸ್ಟೈಲಿಂಗ್‌. ಹೌದು, ಒಳ್ಳೆಯ ಪೋಸ್‌ ಹೊರತುಪಡಿಸಿದಲ್ಲಿ, ಅವರು ಯಾವ ಆಕ್ಸೆಸರೀಸ್ ಕೂಡ ಧರಿಸಿಲ್ಲ. ಆದರೂ ಅವರ ಲುಕ್‌ ನೋಡಲು ಆಕರ್ಷಕವಾಗಿದೆ. ಅವರ ಅಟಿಟ್ಯೂಡ್‌, ಕಂಪ್ಲೀಟ್‌ ಸೀರೆಯನ್ನು ಹೈಲೈಟ್‌ ಮಾಡಿದೆ. ಇದು ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ ಎನ್ನುತ್ತಾರೆ ವಿದ್ಯಾ.

5/5

ಶ್ರೀಲೀಲಾ ಸೀರೆ ಲುಕ್‌ಗೆ 3 ಟಿಪ್ಸ್

  • ಸೀರೆಯ ಆಯ್ಕೆ ಸೂಕ್ತವಾಗಿರಬೇಕು.
  • ಮಿನಿಮಲ್‌ ಆಕ್ಸೆಸರೀಸ್‌ ಸೀರೆಯನ್ನು ಹೈಲೈಟ್‌ ಮಾಡುತ್ತದೆ.
  • ಸೀರೆಯ ಸ್ಟೈಲಿಂಗ್‌ಗೆ ಸಿಂಪಲ್‌ ಮೇಕೋವರ್‌ ಬೆಸ್ಟ್.

ಶೀಲಾ ಸಿ ಶೆಟ್ಟಿ

View all posts by this author