ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯ ದುಬಾರಿ ಸ್ಯಾಟಿನ್‌ ಸೀರೆ

Star Saree Fashion 2025: ಕೆಡಿ ಸಿನಿಮಾದ ಟೀಮ್‌ ಪ್ರಮೋಷನ್‌ ಇವೆಂಟ್‌ನಲ್ಲಿ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಉಟ್ಟಿದ್ದ ದುಬಾರಿ ಸ್ಯಾಟಿನ್‌ ಸೀರೆ ಸದ್ಯ ಸುದ್ದಿಯಲ್ಲಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಸೀರೆ? ವಿಶೇಷತೆಯೇನು? ಬೆಲೆ ಎಷ್ಟಿರಬಹುದು? ಈ ಎಲ್ಲದರ ಕುರಿತಂತೆ ಇಲ್ಲಿದೆ ವಿವರ.

ಚಿತ್ರಗಳು: ಶಿಲ್ಪಾ ಶೆಟ್ಟಿ, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯ ದುಬಾರಿ ಸ್ಯಾಟಿನ್‌ ಸೀರೆ ಸದ್ಯ ಸುದ್ದಿಯಲ್ಲಿದೆ. ಹೌದು, ಈ ವಿಶೇಷ ಸ್ಯಾಟಿನ್‌ ಸೀರೆಯ ಅಂದಾಜು ಬೆಲೆ ಸರಿ ಸುಮಾರು 57 ಸಾವಿರ ರೂ.ಗಳೆಂದು ಸೀರೆಯ ಆನ್‌ಲೈನ್‌ ಶಾಪಿಂಗ್‌ ಪೋರ್ಟಲ್‌ ಹೇಳಿಕೊಂಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

2/5

ಶಿಲ್ಪಾ ಶೆಟ್ಟಿಯ ವೈಬ್ರೆಂಟ್‌ ಸೀರೆ

ಹೌದು, ಮುಂಬಯಿಯಲ್ಲಿ ನಡೆದ ಕೆಡಿ ಸಿನಿಮಾದ ಪ್ರಮೋಷನ್‌ ಇವೆಂಟ್‌ನಲ್ಲಿ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಉಟ್ಟಿದ್ದ, ದುಬಾರಿ ಬೆಲೆಯ ವೈಬ್ರೆಂಟ್‌ ಪಿಂಕ್‌ ಶೇಡ್‌ನ ಹ್ಯಾಂಡ್‌ ಪ್ರಿಂಟೆಡ್‌ ಸ್ಯಾಟಿನ್‌ ಸೀರೆ ಇಡೀ ಪ್ರೋಗ್ರಾಂನಲ್ಲಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಿತ್ತು. ಎದ್ದು ಕಾಣುವಂತಹ ಪಿಂಕ್‌ ವೈಬ್ರೆಂಟ್‌ ಕಲರ್‌ ಇದಕ್ಕೆ ಪ್ರಮುಖ ಇದು ಕಾರಣವಾಗಿತ್ತು.

3/5

ಶಿಲ್ಪಾ ಶೆಟ್ಟಿಯ ಸ್ಯಾಟಿನ್‌ ಪಿಂಕ್‌ ಸೀರೆಯ ವಿಶೇಷತೆ

ಶಿಲ್ಪಾ ಶೆಟ್ಟಿಯ ಈ ಸೀರೆ ಪಿಂಕ್‌ ಆಗಿದ್ದರೂ ಅದರ ಮೇಲೆ ಅಲ್ಲಲ್ಲಿ ಬ್ಲ್ಯೂ ಪ್ರಿಂಟ್ಸ್‌ನ ಬ್ರಶ್ ಸ್ಟ್ರೋಕ್‌ನಂತಹ ಪ್ರಿಂಟ್‌ ಡಿಸೈನ್‌ ಕಾಣಬಹುದಾಗಿತ್ತು. ಆಕಾಂಕ್ಷಾ ಗಾರ್ಜಿಯಾ ಲೆಬೆಲ್‌ನ ಪೆರ್ನಿಯಾಸ್‌ ಪಾಪ್‌ ಅಪ್‌ ಶಾಪ್‌ನ ಎಕ್ಸ್‌ಕ್ಲೂಸೀವ್‌ ಸೀರೆ ಇದಾಗಿದ್ದು, ಈ ಸೀರೆಯ ವಿಶೇಷತೆಯೆಂದರೆ ಕೈಗಳಿಂದ ವಿನ್ಯಾಸಗೊಳಿಸಲಾಗಿದೆ. ಅಂದರೆ ಹ್ಯಾಂಡ್‌ ಮೇಡ್‌ ಪ್ರಿಂಟ್ಸ್ ಇದಾಗಿದೆ. ಹಾಗಾಗಿ ಇದು ತೀರಾ ದುಬಾರಿಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಶಿಲ್ಪಾ ಶೆಟ್ಟಿ ಮೇಕೋವರ್‌ ಡಿಟೇಲ್ಸ್

ಇನ್ನು, ಈ ಸೀರೆಗೆ ಶಿಲ್ಪಾ ಶೆಟ್ಟಿ, ಹೈ ನೆಕ್‌ನ ಸ್ಲಿವ್‌ಲೆಸ್‌ ವಿನ್ಯಾಸದ ಕಸ್ಟಮೈಸ್ಡ್ ಬ್ಲೌಸ್‌ ಧರಿಸಿದ್ದಾರೆ. ಸಿಲ್ವರ್‌ ಸ್ಟ್ರೀಕ್‌ ಸ್ಟೋರ್‌ನ ಜ್ಯುವೆಲರಿ ಮ್ಯಾಚ್‌ ಮಾಡಿದ್ದಾರೆ. ಸುಕೃತಿ ಗ್ರೋವರ್‌, ಜೈಸ್ವಾಲ್‌ ಹಾಗೂ ವಾಣಿ ಗುಪ್ತಾ ಸ್ಟೈಲಿಂಗ್‌ ಮಾಡಿದ್ದಾರೆ. ಒಟ್ಟಾರೆ ಶಿಲ್ಪಾ ಶೆಟ್ಟಿಯ ಈ ಸೀರೆಯ ಲುಕ್‌ ವೈಬ್ರೆಂಟ್‌ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಕೆಡಿ ಸಿನಿಮಾದ ಟೀಮ್‌ ಪ್ರಮೋಷನ್‌ ಇವೆಂಟ್‌ನಲ್ಲಿ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಉಟ್ಟಿದ್ದ ದುಬಾರಿ ಸ್ಯಾಟಿನ್‌ ಸೀರೆ ಸದ್ಯ ಸುದ್ದಿಯಲ್ಲಿದೆ.

ಶೀಲಾ ಸಿ ಶೆಟ್ಟಿ

View all posts by this author