ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasuki Vaibhav: ತಾಯಂದಿರ ದಿನ ಗುಡ್​ನ್ಯೂಸ್​ ಹಂಚಿಕೊಂಡ ಗಾಯಕ​ ವಾಸುಕಿ ವೈಭವ್

ಬಿಗ್ ಬಾಸ್ ಮಾಜಿ ಸ್ಪರ್ಧಿ, ಗಾಯಕ ವಾಸುಕಿ ವೈಭವ್ ಅವರು ತಾಯಂದಿರ ದಿನವೇ ಶುಭ ಸುದ್ದಿ ಹಂಚಿ ಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಸುದ್ದಿ ಹಂಚಿ ಕೊಂಡಿದ್ದಾರೆ.

1/5

ವಾಸುಕಿ ವೈಭವ್ ಪತ್ನಿ ಬೃಂದಾ ವಿಕ್ರಮ್ ಗರ್ಭಿಣಿ ಆಗಿದ್ದು ಪತ್ನಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಅಪ್ಪ-ಅಮ್ಮ ಆಗಲಿದ್ದೇವೆ ಅನ್ನುವ ಖುಷಿಯ ವಿಚಾರ ಶೇರ್ ಮಾಡಿದ್ದಾರೆ.ʼ2023ರ ನವೆಂಬರ್‌ನಲ್ಲಿ ಬೃಂದಾ ವಿಕ್ರಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಾಸುಕಿ ವೈಭವ್ ಈಗ ತಂದೆಯಾಗುತ್ತಿದ್ದಾರೆ. ಈ ವಿಚಾರವನ್ನು ವಿಶ್ವ ಅಮ್ಮಂದಿರ ದಿನವೇ ಹಂಚಿಕೊಂಡಿದ್ದಾರೆ.

2/5

ಪತ್ನಿ ಬೃಂದಾ ಅವರ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ವಾಸುಕಿ ವೈಭವ್, "ಎಲ್ಲಾ ಸುಂದರ ಮಹಿ ಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಅಸ್ತಿತ್ವದಲ್ಲಿ ಇಲ್ಲ, ಈ ತಾಯಂದಿರ ದಿನ ‌ ನನಗೆ ಮತ್ತಷ್ಟು ವಿಶೇಷವಾಗಿದೆ. ಈ ವಿಶೇಷಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಅಂತ ಬರೆದು ಕೊಂಡಿದ್ದಾರೆ..

3/5

ಫೋಟೋದಲ್ಲಿ ವಾಸುಕಿ ವೈಭವ್ ಅವರ ಪತ್ನಿ ಬೃಂದಾ ವಿಕ್ರಮ್ ಅವರ ಬೇಬಿ ಬಂಪ್​ ಲುಕ್​ ಅನ್ನು ರಿವೀಲ್​ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಸರಳವಾಗಿ ಸೀಮಂತ ಮಾಡಿರುವ ಪೋಟೋ ಹಂಚಿಕೊಂಡಿದ್ದಾರೆ.

4/5

ವಾಸುಕಿ ವೈಭವ್ ಅವರು ಹಂಚಿಕೊಂಡಿರುವ ಪೋಸ್ಟ್‌ಗೆ ಅವರ ಅಭಿಮಾನಿಗಳು ಲೈಕ್ ಕಮೆಂಟ್ ಮಾಡಿ ಶುಭಶಯಗಳ ಸುರಿ ಮಳೆ ಗೈದಿದ್ದಾರೆ. ಬೃಂದಾ ವಿಕ್ರಮ್ ಮತ್ತು ವಾಸುಕಿ ವೈಭವ್ ಅವರು ಸ್ನೇಹಿತರಾಗಿದ್ದು ಪ್ರೀತಿಸಿ ಮದುವೆ ಯಾಗಿದ್ದರು. ಹಿರಿಯರ ಒಪ್ಪಿಗೆ ಮೇರೆಗೆ 2023ರ ನವೆಂಬರ್‌ನಲ್ಲಿ ಮದುವೆ ಆಗಿತ್ತು.ಇವರಿಬ್ಬರು ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.   

5/5

ರಾಮಾ ರಾಮ ರೇʼ, ʼಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡುʼ, ʼಬಡವ ರಾಸ್ಕಲ್‌ʼ ಸೇರಿದಂತೆ ಕೆಲ ಖ್ಯಾತ ಸಿನಿಮಾಗಳಿಗೆ ನಟ ವಾಸುಕಿ ವೈಭವ್‌ ಅವರು ಸಂಗೀತ ಸಂಯೋಜನೆ ಮಾಡಿದ್ದರು.ವಾಸುಕಿ ವೈಭವ್ ಪತ್ನಿ ಬೃಂದಾ ಅವರು ಮೂಲತಃ ರಂಗಭೂಮಿ ಕಲಾವಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.