ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding Jewel Fashion 2025: ಮದುಮಗಳ ಅಲಂಕಾರಕ್ಕೆ ಲೇಯರ್ ಮಾಟಿ ಸಾಥ್

ನಾನಾ ಬಗೆಯ ಬಂಗಾರದ ಹಾಗೂ ಬಂಗಾರೇತರ ಲೇಯರ್‌ ಮಾಟಿಗಳು ಇಂದು ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಎರಡಕ್ಕಿಂತ ಹೆಚ್ಚು ಲೇಯರ್ ಹೊಂದಿರುವ ಮಲ್ಟಿ ಲೇಯರ್ ಮಾಟಿಗಳು ಇಂದು ಜ್ಯುವೆಲರಿ ಲೋಕದಲ್ಲಿ ಪ್ರಚಲಿತದಲ್ಲಿವೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಬ್ರೈಡಲ್ ಲುಕ್‌ಗೆ ಸಾಥ್

ಲೇಯರ್ ಕಿವಿಯ ಮಾಟಿಗಳು ಇಂದು ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಹೌದು, ಎರಡಕ್ಕಿಂತ ಹೆಚ್ಚು ಲೇಯರ್ ಹೊಂದಿರುವ ಮಲ್ಟಿ ಲೇಯರ್ ಮಾಟಿಗಳು ಜ್ಯುವೆಲರಿ ಲೋಕದಲ್ಲಿ ಪ್ರಚಲಿತದಲ್ಲಿವೆ. ಟ್ರೆಡಿಷನಲ್ ಲುಕ್ ನೀಡುವ ಇವು ಈ ವೆಡ್ಡಿಂಗ್ ಸೀಸನ್‌ನಲ್ಲಿ ಬ್ರೈಡಲ್ ಸೆಟ್‌ನಲ್ಲಿ ಮಾತ್ರವಲ್ಲ, ಮದುವೆಗಳಲ್ಲಿ ಭಾಗವಹಿಸುವ ಯುವತಿಯರಿಗೂ ಪ್ರಿಯವಾಗತೊಡಗಿವೆ. ಮದುಮಗಳ ಜುವೆಲರಿ ಸೆಟ್‌ನಲ್ಲಿ ಇದೀಗ ಟ್ರೆಂಡಿಯಾಗಿರುವ ಈ ಲೇಯರ್ ಮಾಟಿಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಎಥ್ನಿಕ್ ಲುಕ್ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದೀಕ್ಷಾ.

2/5

ಪರ್ಲ್ ಲೇಯರ್ ಮಾಟಿ

ಸಾಲು ಸಾಲಾಗಿರುವ ಮುತ್ತಿನ ಎಳೆಗಳಿರುವ ಈ ಪರ್ಲ್ ಮಾಟಿಯು ಇಂದು ಅತಿ ಹೆಚ್ಚು ಮಹಿಳೆಯರನ್ನು ಸೆಳೆದಿದೆ. ಇದು ಇಡೀ ಕೇಶರಾಶಿಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಗೋಲ್ಡ್ ಲೈನ್ ಜತೆಗೆ ಪರ್ಲ್ ಲೈನ್ ಇರುವಂತಹ ಈ ಮಾಟಿಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ.

3/5

ಬಂಗಾರ ವರ್ಸಸ್ ಗೋಲ್ಡ್ ಪ್ಲೇಟೆಡ್

ಬಂಗಾರದ ಆ್ಯಂಟಿಕ್ ಡಿಸೈನ್‌ನ ಮಾಟಿಗಳಲ್ಲಿ ಲೈಟ್‌ವೇಟ್‌ನವಕ್ಕೆ ಹೆಚ್ಚು ಆದ್ಯತೆ. ನೋಡಲು ಭಾರಿ ಡಿಸೈನ್‌ನಲ್ಲಿಇವು ಇದ್ದರೂ ಹೆಚ್ಚು ತೂಕವಿರುವುದಿಲ್ಲ. ಐದು ಲೇಯರ್‌ನ ಮಾಟಿಗಳು ಲಭ್ಯ. ಇನ್ನು ಗೋಲ್ಡ್ ಕವರ್ಡ್ ಲೇಯರ್ ಮಾಟಿಗಳು ಕೂಡ ಅತಿ ಹೆಚ್ಚಾಗಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಇವನ್ನು ಯಾವುದೇ ಟ್ರೆಡಿಷನಲ್ ಔಟ್‌ಫಿಟ್‌ಗೆ ಮ್ಯಾಚ್ ಮಾಡಬಹುದು.

4/5

ಲೇಯರ್ ಜುಮ್ಕಾ ಮಾಟಿ

ಲೇಯರ್ ಜುಮ್ಕಾ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಮೊದಲಿಗೆ ತಲೆಕೂದಲನ್ನು ಬಾಚಿಕೊಳ್ಳಿ. ನಿಮಗೆ ಬೇಕಾದ ಎತ್ತರ ಹಾಗೂ ಅಗಲವಾಗಿ ಹೇರ್‌ಬನ್ ಹಾಕಿ. ಬೇಕಿದ್ದಲ್ಲಿ ಜಡೆ ಹೆಣೆದು ಬನ್ ಹಾಕಿಕೊಳ್ಳಬಹುದು. ಎಲ್ಲವೂ ಮುಗಿದ ನಂತರ ಈ ಹೇರ್‌ಬನ್‌ಗೆ ಚಿಕ್ಕ ಯು ಶೇಪ್ ಹೇರ್‌ಪಿನ್‌ನಿಂದ ಸುತ್ತಲು ಜುಮ್ಕಾ ಮಾಟಿಯ ಚೈನ್ ಸಿಕ್ಕಿಸಿ. ಒಂದಕ್ಕೊಂದು ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

5/5

ಲೇಯರ್ ಮಾಟಿ ಪ್ರಿಯರಿಗೆ ಟಿಪ್ಸ್

  • ಮಲ್ಟಿ ಲೇಯರ್ ಮಾಟಿಯ ಫಿನಿಶಿಂಗ್ ಚೆನ್ನಾಗಿರಬೇಕು.
  • ಕೆಲವು ಮಾಟಿಗಳು ಬಹಳ ಭಾರವಾಗಿರುತ್ತವೆ. ಅವುಗಳನ್ನು ಧರಿಸದಿದ್ದರೆ ಉತ್ತಮ.
  • ಆದಷ್ಟೂ ಲೈಟ್‌ವೇಟ್ ಮಾಟಿ ಕೊಳ್ಳಿ.
  • ಕ್ಯಾಶುಯಲ್‌ಗೆ ನಾಟ್ ಓಕೆ. ಎಥ್ನಿಕ್ ಲುಕ್‌ಗೆ ಮ್ಯಾಚ್ ಆಗುತ್ತವೆ.
  • ಗ್ರ್ಯಾಂಡ್ ಸಮಾರಂಭಕ್ಕೆ ಹೇಳಿ ಮಾಡಿಸಿದಂತಿರುತ್ತವೆ.
  • ಟ್ರೆಡಿಷನಲ್ ಔಟ್‌ಫಿಟ್‌ ಜತೆಗೆ ಬ್ರೈಡಲ್ ಹೇರ್‌ಸ್ಟೈಲ್‌ಗೆ ಬೆಸ್ಟ್.
  • ಮೊದಲು ಹೇರ್‌ಸ್ಟೈಲ್ ಮಾಡಿ ನಂತರ ಇದನ್ನು ಹಾಕಿಕೊಳ್ಳುವುದು ಉತ್ತಮ.

ಶೀಲಾ ಸಿ ಶೆಟ್ಟಿ

View all posts by this author