ತಿರುವನಂತಪುರಂ: ಕೇರಳವನ್ನು ಶವಗಳಿಂದ ಆಯ್ಕೆಯಾದವರು ಆಳುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ಸುರೇಶ್ ಗೋಪಿ(Union Minister Suresh Gopi) ಮತ್ತೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಇಡುಕ್ಕಿ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶದ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಗೋಪಿ, ಕಾಂಗ್ರೆಸ್ ಮತ್ತು ಎಡಪಂಥೀಯರು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಆ ಮೂಲಕ ಕೇರಳದ ಮತದಾರರ ಪಟ್ಟಿಯಲ್ಲಿ ಮೃತ ವ್ಯಕ್ತಿಗಳ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಗೋಪಿ ಪರೋಕ್ಷವಾಗಿ ಹೇಳಿದ್ದಾರೆ.
ಇದೇ ವೇಳೆ ಅವರು ತ್ರಿಶೂರ್ ಪೂರಂ ಬಗ್ಗೆ ಉಲ್ಲೇಖಿಸಿದ ಸುರೇಶ್ ಗೋಪಿ, ಧಾರ್ಮಿಕ ಕಾರ್ಯಕ್ರಮ ತ್ರಿಶೂರ್ ಪೂರಂಗೂ ಸರ್ಕಾರ ಅಡ್ಡಿಪಡಿಸಿದೆ. ಮತದಾರರ ಪಟ್ಟಿಯಲ್ಲೂ ಅಕ್ರಮ ಎಸಗಿದ್ದಾರೆ. ಚುನಾವಣೆ ಗೆಲ್ಲಲು ಶವಗಳನ್ನು ಮತ ಚಲಾಯಿಸುವಂತೆ ಮಾಡಿದವರೇ ಕೇರಳವನ್ನು ಇಷ್ಟು ದಿನ ಆಳುತ್ತಿದ್ದಾರೆ. 25 ವರ್ಷಗಳ ಹಿಂದೆ ಹೂಳಲಾದ ಶವಗಳನ್ನು ಮತ ಚಲಾಯಿಸುವಂತೆ ಮಾಡಲಾಯಿತು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Suresh Kumar: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ನೇತ್ರ, ದೇಹದಾನ
ತ್ರಿಶೂರ್‌ನಲ್ಲಿ ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಗೋಪಿ, ಬಿಜೆಪಿ ಪ್ರಾಬಲ್ಯವಿರುವ ತಿರುವನಂತಪುರಂ ಅಥವಾ ಪಾಲಕ್ಕಾಡ್‌ನಿಂದ ನಾನು ಗೆದ್ದಿಲ್ಲ. ತ್ರಿಶೂರ್‌ನಿಂದ ಗೆಲ್ಲಲು ಸಾಧ್ಯವಾಯಿತು. ಭವಿಷ್ಯದಲ್ಲಿಯೂ ಬಿಜೆಪಿಗೆ ಆ ರೀತಿಯ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಇದು ಸಾಧ್ಯವಾಗಿದ್ದು ದೇವರು ನನ್ನೊಂದಿಗಿದ್ದ ಕಾರಣ ನಾನು ನಂಬುತ್ತೇನೆ ಎಂದು ಅವರು ಹೇಳಿದರು,
ಕೇರಳದ ರಾಜಕೀಯ ವಲಯದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ. ವಿಧಾನಸಭೆಯಲ್ಲಿ ನಾವು ಅಧಿಕಾರಕ್ಕ ಬರದಿದ್ದರೂ ಸಹ ವಿಧಾನಸಭೆಯಲ್ಲಿ ನಾವು ಬಲಿಷ್ಠರಾಗಿದ್ದೇವೆ. ಅಧಿಕಾರ ರಚನೆಯಲ್ಲಿ ಹೊಸ ಶಕ್ತಿಯ ಉದಯವಾಗಬೇಕು. ಇದು ಜನರನ್ನು ರಕ್ಷಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.