ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಹೀಗೆ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಹಸ್ತ ನಕ್ಷತ್ರ ಇದ್ದು, ಈ ದಿನ ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಈ ದಿನ ಬಹಳಷ್ಟು ಯಶಸ್ಸನ್ನು ಕಾಣಲಿದ್ದೀರಿ. ಸಾಮಾಜಿಕ ವ್ಯವಹಾರ, ಕೆಲಸ ಕಾರ್ಯದಲ್ಲಿ ಆತ್ಮವಿಶ್ವಾಸ ಕೂಡ ಚೆನ್ನಾಗಿರಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರು ಕ್ರಿಯೇಟಿವಿಟಿ, ಕ್ರಿಯಾತ್ಮಕ ಕೌಶಲ್ಯಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತೀರಿ. ಆದರೆ ಕೆಲವೊಂದು ವಿಚಾರಗಳಲ್ಲಿ ನಿಮ್ಮ ಪ್ರೀತಿಪಾತ್ರರಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಪ್ರೇಮ, ಪ್ರೀತಿ ದಾಂಪತ್ಯದ ವಿಚಾರದಲ್ಲಿಯೂ ಸ್ವಲ್ಪ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ವ್ಯವಹಾರದಲ್ಲಿ ಇರುವವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುನ್ನೆಚ್ಚರಿಕೆಯಿಂದ ಮಾಡುವ ನಿರ್ಧಾರದಿಂದ ನಿಮಗೆ ಯಾವುದೇ ತೊಂದರೆಗಳು ಆಗುವುದಿಲ್ಲ.
ಕಟಕ ರಾಶಿ: ಕಟಕ ರಾಶಿಯವರಿಗೆ ಇದು ಉತ್ತಮ ದಿನ. ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು, ಬಂಧು ಬಾಂಧವರಿಂದ ಸಹಕಾರ ಪ್ರಾಪ್ತಿಯಾಗಲಿದೆ. ಎಲ್ಲರಿಗೂ ಪ್ರಶಸ್ತ್ಯ ದಿನವಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಸಂಸಾರದ ತಾಪತ್ರ ಯಗಳು ಸ್ವಲ್ಪ ಹೆಚ್ಚಾಗಿ ಕಾಡುತ್ತದೆ. ಹಣಕಾಸು, ಕುಟುಂಬದ ವ್ಯವಹಾರದ ಬಗ್ಗೆ ನೀವು ಹೆಚ್ಚಿನ ಗಮನ ಕೊಡ ಬೇಕಾಗುತ್ತದೆ. ವ್ಯವಹಾರ ಮಾಡುವವರಿಗೂ ಇಂದು ಅತೀ ಉತ್ತಮ ದಿನವಾಗಲಿದೆ. ಹೆಚ್ಚಿನ ಯಶಸ್ಸನ್ನು ಕೂಡ ಕಾಣಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಮನಸ್ಸಿಗೂ ನೆಮ್ಮದಿ ಇದ್ದು, ಹಿಂದಿನ ಮೂರು ದಿನಗಳಲ್ಲಿ ಇದ್ದ ಸಮಸ್ಯೆ ಪರಿಹಾರಗೊಂಡು ಮನಸ್ಸು ತಿಳಿಯಾಗಲಿದೆ. ನಿಮ್ಮ ಮನಸ್ಸಿನ ಸಮಾಧಾನವನ್ನು ಬೇರೆಯವರ ಜತೆ ಹಂಚಿಕೊಂಡಷ್ಟು ನಿಮಗೆ ಸಮಾಧಾನವಾಗುತ್ತದೆ. ಉತ್ತಮ ದಿನವಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ದಿನ ಅಷ್ಟೊಂದು ಒಳ್ಳೆಯ ದಿನ ಅಲ್ಲ. ಮುಖ್ಯವಾದ ಸಂಬಂಧಗಳಲ್ಲಿ ಒಡಕು ಉಂಟಾಗಬಹುದು. ಅದೇ ರೀತಿ ಮಿತೃತ್ವಗಳಲ್ಲಿ ಕೂಡ ಒಡಕು ಉಂಟಾಗಬಹುದು. ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ. ವ್ಯವಹಾರಗಳಿಗೂ ಕೈ ಹಾಕಲು ಇಂದು ಹೋಗಬೇಡಿ.
ಇದನ್ನು ಓದಿ:Daily Horoscope: ಸೋಮವಾರದ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಈ ದಿನ ಉತ್ತಮವಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೂ ನೆಮ್ಮದಿ ಸಿಗಲಿದೆ. ಧನಾಗಮನ ಕೂಡ ವಾಗಲಿದೆ. ಎಲ್ಲರೂ ನಿಮ್ಮನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ. ಮನೆ ಕಡೆಗೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಎಲ್ಲರನ್ನೂ ಸಮಾಧಾನ ಪಡಿಸಿ ಕೆಲಸ ಕಾರ್ಯಕ್ಕೆ ಗಮನ ಕೊಡಿ. ಯಾವುದೇ ವಿಚಾರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
ಮಕರ ರಾಶಿ: ಮಕರ ರಾಶಿಯವರಿಗೆ ಭಾಗ್ಯದ ದಿನವಾಗಲಿದೆ. ಹಿಂದಿನ ಮೂರು ದಿನಗಳಲ್ಲಿ ಇದ್ದಂತಹ ಕಿರಿಕಿರಿ ದೂರವಾಗುತ್ತದೆ. ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗ ದರ್ಶನ ಕೂಡ ಪ್ರಾಪ್ತಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಿಗೆ ಹಿರಿಯರ ಆಶೀರ್ವಾದ ಮುಖ್ಯವಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಸ್ವಲ್ಪ ಕಷ್ಟದ ದಿನವಾಗಲಿದೆ. ಹಿಂದಿನ ನಾಲ್ಕು ಐದು ದಿನಗಳವರೆಗೆ ಎಲ್ಲವೂ ಚೆನ್ನಾಗಿ ನಡೀತಾ ಬಂದಿದೆ. ಆದರೆ ಇಂದು ಕೆಲವೊಂದು ಕಡೆ ಸ್ವಲ್ಪ ಬದಲಾವಣೆಗಳು ಅವಶ್ಯಕವಾಗಿರುತ್ತದೆ. ಆದರೆ ಮನಸ್ಸಿಗೆ ಕಿರಿಕಿರಿ ತೆಗೆದುಕೊಳ್ಳಬೇಡಿ. ಸಮಾಧಾನ ರೀತಿಯಲ್ಲಿ ಸಮಯ ಕಳೆಯಿರಿ.
ಮೀನ ರಾಶಿ: ಮೀನ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಎಲ್ಲರಿಂದಲೂ ಸಹಕಾರ ಪ್ರಾಪ್ತಿಯಾಗಲಿದ್ದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಇವತ್ತು ಯಾವುದೇ ಕೆಲಸ ಕಾರ್ಯದಲ್ಲಿ ಬೇರೆಯವರ ಸಹಕಾರ ನಿಮಗೆ ಉತ್ತಮವಾಗಿ ಸಿಗಲಿದೆ. ದಿನ ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.