ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಸೋಮವಾರದ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಿತೀಯತಿಥಿ, ಉತ್ತರ ಫಲ್ಗುಣಿ ನಕ್ಷತ್ರದ ಆಗಸ್ಟ್ 25ನೇ ತಾರೀಖಿನ ಈ ದಿನದಂದು ವರಹ ಜಯಂತಿಯ ಈ ದಿನ ಅನೇಕ ರಾಶಿಗೆ ಶುಭ ಫಲ ಇರಲಿದೆ. ವಿಷ್ಣುವಿನ ವರಹ ಅವತಾರ ಇಂದು ಅವತರಿಸಿದ್ದ ದಿನ ವಾದ ಕಾರಣ ಈ ದಿನ ವರಹ ಪೂಜೆ ಮಾಡಿದರೆ ಬಹಳ ಉತ್ತಮ. ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಸೋಮವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಿತೀಯತಿಥಿ, ಉತ್ತರ ಫಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಉತ್ತರ ಫಲ್ಗುಣಿ ನಕ್ಷತ್ರದ ಅಧಿಪತಿ ರವಿಯಾಗಿದ್ದು ಈ ದಿನ ಮೇಷ ರಾಶಿ ಅವರಿಗೆ ಮಧ್ಯಾಹ್ನದ ತನಕವು ಕಿರಿ ಕಿರಿ ಇರಲಿದೆ. ನಿಮ್ಮ ಪ್ರೀತಿ ಪಾತ್ರರಿಂದಲೇ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇದೆ. ಬಳಿಕ ಸಂಜೆ ಹೊತ್ತಿಗೆ ಕೆಲ ಸಮಸ್ಯೆ ಬಗೆ ಹರಿಯಲಿದೆ. ದಾಂಪತ್ಯ, ಪ್ರೇಮ , ಪ್ರೀತಿ ವಿಚಾರದಲ್ಲಿ ಕೆಲವು ವೈಮನಸ್ಸು ಮೂಡಿದರು ಈ ದಿನ ಅದನ್ನು ಶಾತಿಯುತವಾಗಿ ಬಗೆಹರಿಸಿಕೊಳ್ಳಬಹುದು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರು ಬಹಳ ಗೊಂದಲದ, ಸಂಸಾರ ತಾಪತ್ರಯ ಅನು ಭವಿಸುವ ದಿನವಾಗಿದೆ. ಸಂಸಾರ, ಆಸ್ತಿ- ಪಾಸ್ತಿ ವ್ಯವಹಾರದಲ್ಲಿ ಸಾಕಷ್ಟು ಕಿರಿ ಕಿರಿ ಅನುಭವಿ ಸುವಿರಿ. ಕೆಲ ಸಮಸ್ಯೆ ಮೇಲ್ನೋಟಕ್ಕೆ ಪರಿಹಾರ ಆಗಿದಂತೆ ಕಾಣಲಿದೆ ಆದರೆ ಆ ಸಮಸ್ಯೆ ಹಾಗೇ ಇರುವ ಸಾಧ್ಯತೆ ಇದೆ. ಎಲ್ಲ ಕೆಲಸ ಕಾರ್ಯಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಮುನ್ನಡೆಯುವುದು ಉತ್ತಮ. ನಿಮ್ಮ ಕ್ರಿಯಾತ್ಮಕತೆ, ಬುದ್ಧಿ ಚಾತುರ್ಯ ಉತ್ತಮ ವಿಚಾರದ ಕಡೆ ಕೊಂಡ್ಯೊಯ್ಯಬೇಕು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಮಿಶ್ರ ಫಲದ ದಿನ ವಾಗಿದೆ. ಸಂಸಾರ, ವ್ಯಾಪಾರ ವ್ಯವಹಾರದಲ್ಲಿ ವೈ ಮನಸ್ಸು ಕಂಡು ಬರಬಹುದು. ತಾಯಿಯ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸಬೇಕು. ಅನಗತ್ಯ ದುಂದು ವೆಚ್ಚಗಳಿಗೆ ಅಧಿಕ ಖರ್ಚು ಮಾಡಿದರೆ ಅನಗತ್ಯ ಖರ್ಚಿನ ಹೊಣೆ ಪ್ರಮಾಣ ಕಡಿಮೆಯಾಗುತ್ತದೆ. ಇಂದು ವರಹಾ ಜಯಂತಿಯಾದ ಕಾರಣ ವಿಷ್ಣು ವಿನ ನಾಮ ಪಠಣ ಮಾಡಿದರೆ ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕೂಡ ಈ ದಿನ ಸಂಸಾರ, ಆರೋಗ್ಯ ಇತ್ಯಾದಿ ವಿಚಾರದಲ್ಲಿ ಹೆಚ್ಚಿನ ಗಮನವಹಿಸಬೇಕು. ಮಧ್ಯಾಹ್ನದ ನಂತರ ಬಂಧುಗಳ ಆಗಮನ ಆಗಬಹುದು, ಅಂದು ಕೊಂಡ ಅನೇಕ ಕೆಲಸ ಕಾರ್ಯ ಈ ದಿನ ನೆರವೇರಲಿದೆ. ಬಂಧುಗಳ ಆಗಮನದಿಂದ ಮನಸ್ಸು ತಿಳಿಯಾಗಿ ಆತ್ಮ ವಿಶ್ವಾಸ ಹೆಚ್ಚಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಕ್ಲಿಷ್ಟಕರವಾದ ದಿನವಾಗಿದೆ. ನೀವು ಯಾವುದೊ ಉತ್ತಮ ವಿಚಾರವನ್ನು ನಿಮ್ಮ ಮನೆಯವರಿಗೆ ಕುಟುಂಬದವರಿಗೆ ತಿಳಿಸಲು ಹೋದರು ಅದು ನಿಮಗೆ ಕೆಡುಕಾಗುವ ಸಂದರ್ಭವಾಗಬಹುದು. ಕುಟುಂಬ, ಪ್ರೀತಿ ಪ್ರೇಮ, ಸ್ನೇಹಿತರ ನಡುವೆ ವೈಮನಸ್ಸು ಉಂಟಾಗಲಿದೆ. ಕೆಲವು ಅನಿರೀಕ್ಷಿತ ಘಟನೆ ನಿಮಗೆ ಗೊಂದಲ ಗೊಳ್ಳುವ ಪರಿಸ್ಥಿತಿ ಎಡೆಮಾಡುವ ಸಾಧ್ಯತೆ ಕೂಡ ಇದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಬಹಳ ಈ ದಿನ ಮಿಶ್ರ ಫಲವಿದೆ‌. ಅನೇಕ ದಿನದಿಂದ ನೀವು ಅಂದು ಕೊಂಡ ಕೆಲವು ಯೋಜನೆ ಇಂದು ಕೈಗೂಡುವ ನಿರೀಕ್ಷೆ ನಿಮಗೆ ಬರಲಿದೆ. ಆದರೆ ನಿಮ್ಮ ಕೋಪದಿಂದ ಕೆಲವು ಕಾರ್ಯದಲ್ಲಿ ವಿಘ್ನವಾಗುವ ಸಾಧ್ಯತೆ ಕೂಡ ಇದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮುತುವರ್ತಿ ವಹಿಸಬೇಕು. ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುವುದು ಬೇಡ ನಿಮಗೆ ಬೇಕಾದ್ದು ನಿಮಗೆ ಸಿಕ್ಕೆ ಸಿಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ದಿನ ಬಹಳ ಮಿಶ್ರ ಫಲ ಇದೆ. ಅನೇಕ ವಿಚಾರಗಳಲ್ಲಿ ಅನಗತ್ಯ ಪ್ರವೇಶಿಸಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕುವಿರಿ. ಸಂಸಾರ, ಸ್ನೇಹಯುತ ಸಂಬಂಧ ವ್ಯವಹಾರದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ. ಮಿತ್ರದಿಂದ ಧನಾಗಮ, ಯಾವುದೇ ಕಾರ್ಯ ಕ್ಷೇತ್ರದಲ್ಲಿ ಮನಸ್ಸಿಟ್ಟು ಮಾಡಿದರೆ ಒಳ್ಳೆಯ ಫಲ ನಿಮಗೆ ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಕಾರ್ಯಕ್ಷೇತ್ರದಲ್ಲಿ ಸ್ವಲ್ಪಗೊಂದಲ ಉಂಟಾ ಗಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಮುನ್ನಡೆದರು ಬೇಕಾದ ಸಹಕಾರ ನಿಮಗೆ ಕ್ಲಪ್ತ ಸಮಯದಲ್ಲಿ ಸಿಗದೆ ಇರುವ ಸಾಧ್ಯತೆ ಇದೆ. ಮುಖ್ಯವಾದ ಕೆಲಸ ಕಾರ್ಯಕ್ಕೆ ನೀವು ಅಧಿಕ ಒತ್ತು ನೀಡಿದ್ದರು ನಿಮ್ಮನ್ನು ಯಾರು ಕೂಡ ಬೆಂಬಲಿಸದೇ ಇರುವ ಸಾಧ್ಯತೆ ಇದೆ. ಹೀಗಾಗಿ ಕೆಲವು ಮಾನಸಿಕ ಸಮಸ್ಯೆ,ಹತಾಶೆ, ಬೇಸರ ಎಲ್ಲ ಉಂಟಾಗುವ ಸಾಧ್ಯತೆ ಇದೆ. ಈ ದಿನ ವರಹಾ ಜಯಂತಿ ಯಾದ ಕಾರಣ ವಿಷ್ಣುವಿನ ನಾಮ ಪಠಣ ಮಾಡಿ ಪೂಜೆ ಸಲ್ಲಿಸಿದರೆ ಮನೋವೈಕಲ್ಯ ಸಮಸ್ಯೆ ಬಗೆಹರಿಯಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ವ್ಯವಹಾರ , ಕುಟುಂಬ ಸಂಬಂಧಗಳಿಂದ ಅನೇಕ ವಿಚಾರದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ. ಇದ್ದ ವಿಚಾರ ನೇರಾ ನೇರ ಹೇಳಿದಾಗ ಅದು ವೈಮನಸ್ಸು ಉಂಟಾಗಲು ಕೂಡ ಮುಖ್ಯ ಕಾರಣ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನದ ನಂತರ ಮನಸ್ಸು ತಿಳಿಯಾಗಿ ಭಾಗ್ಯೋದಯವಾಗುವ ದಿನವಾಗಲಿದೆ. ಇತರ ರೊಡನೆ ವ್ಯವಹರಿಸುವಾಗ ಸಾಕಷ್ಟು ಜಾಗೃತಿ, ನಯ, ವಿನಯತೆ ಇರುವುದು ಬಹಳ ಮುಖ್ಯ.

ಇದನ್ನು ಓದಿ:Daily Horoscope: ಭಾನುವಾರದ ಈ ದಿನ ಚಂದ್ರ ದರ್ಶನದಿಂದ ಯಾವ ರಾಶಿಗೆ ಉತ್ತಮ ಫಲವಿದೆ ಗೊತ್ತಾ?

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬಹಳ ಗೊಂದಲದಿಂದ ಇರಲಿದೆ. ಕೆಲವು ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಈ ದಿನ ಮೂಡಲಿದೆ. ಮಧ್ಯಾಹ್ನದ ನಂತರ ಮನಸ್ಸಿಗೆ ಕಿರಿಕಿರಿಯಾಗಿ ಪ್ರೀತಿ ಪಾತ್ರರಿಂದಲೇ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಕೂಡ ಇದೆ. ನಿಮ್ಮ ಪ್ರೀತಿ ಪಾತ್ರ ರೊಂದಿಗೆ ಮಾನಸಿಕ ತಳಮಳ ಅನುಭವಿಸು ವಿರಿ. ದಾಂಪತ್ಯ, ಸ್ನೇಹ ಸಂಬಂಧದಲ್ಲಿ ವೈಮನಸ್ಸು ಮೂಡಲಿದೆ. ಮುಖ್ಯವಾದ ಕೆಲವು ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಲಿದೆ. ಕ್ಲಿಷ್ಟಕರವಾದ ದಿನವಾಗಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಕುಟುಂಬ , ಸ್ಮೇಹಿತರಿಂದ ಉತ್ತಮ ಸಹಕಾರ ನಿಮಗೆ ಸಿಗಲಿದೆ. ಬಳಿಕ ಕೆಲವು ವೈಯಕ್ತಿಕ ವಿಚಾರದಿಂದ ವೈಮನಸ್ಸು, ಕೋಪ ಇತ್ಯಾದಿ ಉಂಟಾಗಲಿದೆ. ಸಂಜೆ ವೇಳೆ ಇದ್ದ ಸಮಸ್ಯೆ ಪರಿಹಾರ ವಾಗಿ ಮನಸ್ಸಿಗೆ ನೆಮ್ಮದಿ, ಆತ್ಮವಿಶ್ವಾಸ ವೃದ್ಧಿಯಾಗಿ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕೂಡ ಸಿಗಲಿದೆ. ಇಂದು ವರಹಾ ಜಯಂತಿಗೆ ನೀವು ವಿಷ್ಣವಿನ ದೇಗುಲ ದರ್ಶನ ಮಾಡಿದರೆ ಶುಭ ಫಲ ಪಡೆಯಲಿದ್ದೀರಿ.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಮಧ್ಯಾಹ್ನದ ವರೆಗೆ ಸಾಕಷ್ಟು ಸಮಸ್ಯೆ ಅನುಭವಿಸುವಿರಿ. ಮಧ್ಯಾಹ್ನದ ನಂತರ ನೀವು ಆತ್ಮವಿಶ್ವಾಸ ಹೊಂದಿದ್ದ ಪ್ರೀತಿ ಪಾತ್ರರ ಜೊತೆಗೆ ಉತ್ತಮ ದಿನ ಕಳೆಯಲಿದ್ದೀರಿ. ಮಧ್ಯಾಹ್ನದ ನಂತರ ಎಲ್ಲ ಕಾರ್ಯಗಳಿಗೂ ಯಶಸ್ಸು ಇಂದು ನಿಮಗೆ ಸಿಗುತ್ತದೆ.