ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಅಷ್ಟಮಿ ತಿಥಿ, ಭರಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಭರಣಿ ನಕ್ಷತ್ರ ಇದ್ದು, ಮೇಷ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲರೂ ಕೂಡ ನಿಮ್ಮನ್ನು ಪ್ರೋತ್ಸಾಹಿಸಲಿದ್ದಾರೆ. ನಿಮ್ಮ ಸಲಹೆ ಸೂಚನೆಗಳನ್ನು ಎಲ್ಲರೂ ಪಾಲಿಸಲಿದ್ದಾರೆ. ನಿಮ್ಮ ಮಾರ್ಗದರ್ಶನವನ್ನು ಇತರರು ಕೇಳಲಿದ್ದಾರೆ.
ವೃಷಭ ರಾಶಿ: ವೃಷಭ ರಾಶಿಯವರ ಮನಸ್ಸಿಗೆ ಇಂದು ಕ್ಲೇಶ ಉಂಟಾಗಲಿದೆ. ಆದರೆ ನಾಳೆ ತುಂಬಾ ಚೆನ್ನಾಗಿ ಇರುತ್ತದೆ. ಇಂದು ಮುಖ್ಯವಾದ ವ್ಯವಹಾರದಲ್ಲಿ ಹಾಗೂ ಮಿತ್ರತ್ವಗಳಲ್ಲಿ ನಿಮಗೆ ಬೇಕಾದಂತಹ ಸಲಹೆಗಳು ಪ್ರಾಪ್ತಿಯಾಗುವುದಿಲ್ಲ. ಹಣ ನಷ್ಟ ಹಾಗೂ ಆರೋಗ್ಯದಲ್ಲೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರಿಂದಲೂ ಧನಾಗಮನವಾಗಲಿದ್ದು ಗುಂಪು ಕೆಲಸಗಳಲ್ಲಿ ಯಶಸ್ಸು ಹಾಗೂ ಇಷ್ಟಾರ್ಥ ಸಿದ್ದಿಯಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಗಾಲಿದೆ. ಅದರ ಜತೆ ನಿಮ್ಮ ಮನೆಯ ಜವಾಬ್ದಾರಿಗಳು ಕೂಡ ಹೆಚ್ಚಾಗಲಿದೆ. ಆದರೆ ಎರಡು ಕಡೆ ಗಮನ ವಹಿಸಿ ನಿಮ್ಮ ಕೆಲಸಗಳನ್ನು ಪೂರ್ಣ ಗೊಳಿಸುವುದು ಬಹಳ ಮುಖ್ಯ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿಯು ಬೇಕಾಗುತ್ತದೆ. ದೇವರ, ಹಿರಿಯರ ಆಶೀರ್ವಾದ ನಿಮಗೆ ಅಗತ್ಯವಾಗಿ ಇಂದು ಬೇಕು. ಧ್ಯಾನ, ಶ್ಲೋಕ ಪಠಣ ಮಾಡುವ ಮೂಲಕ ಭಗವಂತನ ಆಶೀರ್ವಾದವನ್ನು ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ:Daily Horoscope: ಅಶ್ವಿನಿ ನಕ್ಷತ್ರದ ಈ ದಿನ ಯಾವ ರಾಶಿಗೆ ಒಳಿತಾಗಲಿದೆ?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೂ ಇಂದು ಸ್ವಲ್ಪ ಕ್ಲಿಷ್ಟದ ದಿನವಾಗಲಿದೆ. ಮುಖ್ಯವಾದ ಕೆಲವು ವಿಚಾರಗಳಲ್ಲಿ ನಿಮಗೆ ಯಾರ ಸಹಕಾರವೂ ಪ್ರಾಪ್ತಿಯಾಗುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಮನಸ್ಸಿಗೆ ನೋವಾಗುವಂತಹ ಕೆಲವು ಮಾತುಗಳನ್ನು ನೀವು ಕೇಳ ಬೇಕಾಗಿಬರಬಹುದು. ಧ್ಯಾನಾದಿಗಳನ್ನು ಮಾಡುವ ಮೂಲಕ ಇಂದಿನ ದಿನಗಳನ್ನು ಕಳೆಯಿರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದ್ದು ಎಲ್ಲರಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ನೆಮ್ಕದಿಯೂ ಸಿಗಲಿದೆ. ಬೇರೆಯವರಿಂದ ಸಹಕಾರ ನಿಮಗೂ ದೊರೆಯಲಿದೆ. ನೀವು ಇತರರಿಗೂ ಸಹಕಾರ ನೀಡಬೇಕಾಗಿ ಬರುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೂ ಇಂದು ಉತ್ತಮ ದಿನ ಆಗಲಿದೆ. ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಅದೇ ರೀತಿ ನೀವು ಮಾಡುವ ಕೆಲಸಗಳಿಗೆ ಜಯ ಉಂಟಾಗಲಿದೆ. ಯಾವುದೇ ಶತ್ರುಗಳ ಭಾದೆ ನಿಮ್ಮನ್ನು ಕಾಡುವುದಿಲ್ಲ. ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನ ಆಗಲಿದೆ. ಕಾರ್ಯ ಚಟುವಟಿಕೆ ಗಳಲ್ಲಿ ಕ್ರಿಯಾತ್ಮಕತೆಯನ್ನು ಬಳಸಿಕೊಂಡರೆ ನಿಮಗೆ ಲಾಭ ಉಂಟಾಗಲಿದೆ. ಪೋಷಕರಿಗೆ ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿಯೂ ಯಶಸ್ಸು ಸಿಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರಗಳ ಬಗ್ಗೆ ಗಮನ ಕೊಡಲು ಬಹಳ ಉತ್ತಮವಾದ ದಿನ ಆಗಲಿದೆ. ಕೋರ್ಟ್ ಕಛೇರಿ ವ್ಯವಹಾರಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ. ಆದರೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಉತ್ತಮ ದಿನ ಆಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಇರಲಿದ್ದು ನಿಮ್ಮ ಆತ್ಮವಿಶ್ವಾಸದಿಂದ ಎಲ್ಲವನ್ನು ಗೆಲ್ಲಲಿದ್ದೀರಿ. ಬಹಳ ಧೈರ್ಯದಿಂದ ಮುನ್ನುಗುವುದರಿಂದ ಮುಖ್ಯ ಕಾರ್ಯಗಳನ್ನು ಇಂದು ನೀವು ಪೂರ್ಣಗೊಳಿಸಬಹುದು. ಬಂಧು ಬಾಂಧವರ ಸಹಕಾರ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಮೀನ ರಾಶಿ: ಮೀನ ರಾಶಿಯವರು ಇಂದು ಸಂಸಾರದ ಯೋಚನೆಗಳನ್ನು ಹೆಚ್ಚಾಗಿ ಮಾಡುತ್ತೀರಿ. ಆರ್ಥಿಕ ಯೋಚನೆಗಳು ಕೂಡ ಇಂದು ಹೆಚ್ಚಾಗಲಿದೆ. ಆದರೆ ಕುಟುಂಬದವರ ಜತೆ ಉತ್ತಮ ಸಮಯ ಕಳೆಯಲಿದ್ದೀರಿ. ಉತ್ತಮ ದಿನ ನಿಮ್ಮದಾಗಲಿದೆ. ದಿನ ನಿತ್ಯ ಶ್ಲೋಕ ಪಠಣ ಇತ್ಯಾದಿ ಮಾಡುವ ಅಭ್ಯಾಸ ಮಾಡಿಕೊಳ್ಳಿ.