Daily Horoscope: ಅಶ್ವಿನಿ ನಕ್ಷತ್ರದ ಈ ದಿನ ಯಾವ ರಾಶಿಗೆ ಒಳಿತಾಗಲಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರದ ಈ ದಿನದ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ...

Daily Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಅಶ್ವಿನಿ ನಕ್ಷತ್ರ ಇದ್ದು, ಶ್ರಾವಣ ಶುಕ್ರವಾರದ ಈ ದಿನ ಲಕ್ಷ್ಮೀ ಪೂಜೆಯನ್ನು ಮಾಡುವುದರಿಂದ ಬಹಳ ಒಳಿತು ಆಗಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಬರುವುದರಿಂದ ಉತ್ತಮ ದಿನವಾಗಲಿದೆ. ಇತರರಿಗೂ ಇಂದು ನೀವು ನೆಮ್ಮದಿ ಹಂಚಲಿದ್ದೀರಿ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಅಷ್ಟೇನೂ ಉತ್ತಮ ದಿನ ಇದಲ್ಲ. ಇಂದು ನಿಮ್ಮ ಮನಸ್ಸಿಗೆ ಹಿಂಸೆಯಾಗಬಹುದು. ಬೇರೆಯವರಿಂದಲೂ ನಿಮಗೆ ಅಷ್ಟೊಂದು ಸಹಕಾರ ಸಿಗುವುದಿಲ್ಲ. ಮುಖ್ಯವಾದ ವ್ಯವಹಾರಗಳಲ್ಲೂ ನಿಮಗೆ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಎರಡು ದಿನಗಳ ಕಾಲ ಯಾವುದೇ ಮುಖ್ಯ ನಿರ್ಧಾರಗಳು ಬೇಡ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರಿಂದಲೂ ಧನ ಆಗಮನವಾಗಲಿದ್ದು, ಗುಂಪು ಕೆಲಸಗಳಲ್ಲಿ ಕೂಡ ಅತೀ ಹೆಚ್ಚಿನ ಲಾಭ ಉಂಟಾಗಲಿದೆ. ಉದ್ಯಮ ವ್ಯವಹಾರ ಮಾಡೋರಿಗೂ ಉತ್ತಮ ದಿನವಾಗಲಿದೆ
ಕಟಕ ರಾಶಿ: ಕಟಕ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಗಮನ ಕೆಲಸದ ಕಡೆಯೇ ಹೆಚ್ಚು ಇರಲಿದೆ. ಇಡೀ ತಿಂಗಳಿನಲ್ಲಿ ಮಾಡುವ ಕೆಲಸಗಳನ್ನು ಇಂದೇ ಮಾಡುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿಯು ಸಿಗಲಿದೆ. ಅದೇ ರೀತಿ ಇಂದು ಹಿರಿಯರ ಆಶೀರ್ವಾದವನ್ನು ಪಡೆಯಲು ಮರೆಯಬೇಡಿ. ಎರಡು ದಿನಗಳಲ್ಲಿ ಇದ್ದಂತಹ ಎಲ್ಲ ತೊಂದರೆಗಳು ನಿವಾರಣೆಯಾಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೂ ಇಂದು ಮನಸ್ಸಿಗೆ ಕ್ಷೇಶ ಉಂಟಾಗಲಿದೆ. ಸಂಸಾರದ ವಿಚಾರದಲ್ಲೂ ಮನಸ್ತಾಪ ಇರಲಿದ್ದು ಮನಸ್ಸಿಗೆ ಹತ್ತಿರವಾದ ಜನಗಳಿಂದಲೇ ನಿಮಗೆ ಬೇಸರವಾಗುವ ಸಾಧ್ಯತೆ ಇದೆ. ಎರಡು ದಿನಗಳ ವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಹೋಗಬೇಡಿ. ಸ್ವಲ್ಪ ದಿನಗಳ ಬಳಿಕ ಎಲ್ಲವೂ ಸರಿಯಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದ್ದು ಕಾರ್ಯ ಕ್ಷೇತ್ರದಲ್ಲಿಯೂ ಮುನ್ನಡೆಯನ್ನು ಸಾಧಿಸಲಿದ್ದೀರಿ. ಬೇರೆಯವರೂ ನಿಮಗೆ ಸಹಕಾರ ನೀಡಲಿದ್ದಾರೆ. ಅತ್ಯುತ್ತಮ ದಿನ ನಿಮ್ಮದಾಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೂ ಇಂದು ಉತ್ತಮ ದಿನ ಆಗಲಿದೆ. ಯಾವುದೇ ರೀತಿಯ ವಿಘ್ನಗಳು ನಿಮಗೆ ಬರುವುದಿಲ್ಲ. ಆತ್ಮವಿಶ್ವಾಸ ಇರಲಿದ್ದು, ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.
ಇದನ್ನು ಓದಿ:Daily Horoscope: ರೇವತಿ ನಕ್ಷತ್ರದ ಈ ದಿನ ಈ ರಾಶಿಯವರಿಗೆ ಬಹಳಷ್ಟು ಯಶಸ್ಸು!
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನ ಆಗಲಿದೆ. ನಿಮ್ಮ ಕೌಶಲ್ಯ ಚೆನ್ನಾಗಿದ್ದರೂ ಧನಾಗಮನ ಅಥವಾ ಯಾವುದೇ ಪ್ರತಿಫಲ ನಿಮಗೆ ಸಿಗುವುದಿಲ್ಲ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವ್ಯವಹಾರ ಮಾಡುವವರಿಗೂ ಇಂದು ಅಷ್ಟು ಶುಭವಾಗುವುದಿಲ್ಲ. ಯಾವುದೇ ಮುಖ್ಯ ನಿರ್ಧಾರ ಇಂದು ಕೈಗೊಳ್ಳಲು ಹೋಗಬೇಡಿ.
ಮಕರ ರಾಶಿ: ಮಕರ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ ಆಗಲಿದೆ. ಆಸ್ತಿ ಪಾಸ್ತಿ, ಕೋರ್ಟ್ ವ್ಯವಹಾರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಸಂದರ್ಭ ನಿಮಗೆ ಬರಬಹುದು. ಆದರೆ ಇದರ ಪ್ರತಿಫಲ ಎರಡು ದಿನಗಳ ನಂತರ ನಿಮಗೆ ಸಿಗಬಹುದು.
ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಉತ್ತಮ ದಿನ. ನಿಮ್ಮಲ್ಲಿ ಆತ್ಮವಿಶ್ವಾಸ ಇಂದು ತುಂಬಾನೇ ಚೆನ್ನಾಗಿ ಇರಲಿದೆ. ಸಾಮಾಜಿಕ ಕೆಲಸ ಕಾರ್ಯದಲ್ಲಿ ಬಹಳಷ್ಟು ಮುಂದೆ ಸಾಗಲಿದ್ದೀರಿ. ಸಾಮಾಜಿಕ ಮಾಧ್ಯಮ ಕೆಲಸಗಳಲ್ಲಿ ಇರುವವರು ಇಂದು ನಿಮ್ಮ ಮಾತಿನಿಂದಲೇ ಎಲ್ಲವನ್ನೂ ಗೆಲ್ಲುತ್ತೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಸಂಸಾರದ ಜವಾಬ್ದಾರಿಗಳು ಹೆಚ್ಚಾಗಬಹುದು. ಅದರ ಜತೆ ಮನೆಯವರು ಹೇಳುವಂತಹ ನಿರ್ಧಾರಗಳನ್ನು ನೀವು ಕೈಗೊಳ್ಳುವ ಸಂದರ್ಭ ಬರಬಹುದು. ಇದರಿಂದ ನಿಮಗೆ ಒಳಿತು ಕೂಡ ಆಗಬಹುದು. ದಿನ ನಿತ್ಯ ಶ್ಲೋಕ ಪಠಣ ಇತ್ಯಾದಿ ಮಾಡುವ ಅಭ್ಯಾಸ ಮಾಡಿಕೊಳ್ಳಿ.