ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಕೃಷ್ಣ ಪಕ್ಷದ, ಆಶ್ಲೇಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಮನೆಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿ ಬರುತ್ತದೆ. ಮನೆಯಲ್ಲಿ ಮತ್ತು ಯೋಚನೆಗಳಲ್ಲಿ ಸ್ವಲ್ಪ ಘಾಸಿ ಉಂಟಾಗಬಹುದು. ಇದರಿಂದ ನಿಮಗೆ ಬಹಳಷ್ಟು ನೋವಾಗಲಿದೆ. ಬಿಸಿನೆಸ್ ವ್ಯವಹಾರ ಮಾಡುವವರಿಗೂ ಇಂದು ಕಷ್ಟವಾಗಬಹುದು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ವ್ಯವಹಾರದಲ್ಲೂ ಗೆಲುವು ಸಿಗಲಿದೆ. ಸೇಲ್ಸ್ ಮಾರ್ಕೆಟ್, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಉತ್ತಮವಾಗಲಿದೆ. ಬಹಳಷ್ಟು ಪ್ರಾಶಸ್ತ ದಿನವಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರು ಸಂಸಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮ ಕೆಲವು ಮಾತುಗಳಿಗೆ ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ ಈ ಬಗ್ಗೆಯೂ ನೀವು ಬೇಸರಕ್ಕೆ ಒಳಗಾಗಬಹುದು.
ಕಟಕ ರಾಶಿ: ಕಟಕ ರಾಶಿಯಲ್ಲಿ ಚಂದ್ರ ಇರುವುದರಿಂದ ಉತ್ತಮವಾದ ದಿನವಾಗಲಿದೆ. ಆದರೆ ನಿಮ್ಮ ಯೋಚನೆಗಳ ಬಗ್ಗೆ ಸ್ವಲ್ಪ ಕಡಿವಾಣ ಹಾಕಬೇಕಾಗುತ್ತದೆ. ಬಹಳಷ್ಟು ಸಮಾಧಾನದಿಂದ ವರ್ತಿಸುವುದು ಇಂದು ಬಹಳ ಒಳ್ಳೆಯದು.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ಸಂಬಂಧಗಳಲ್ಲಿ ಒಡಕು ಉಂಟಾಗಬಹುದು. ಯಾವುದೇ ಬಿಸಿನೆಸ್ ಮುಖ್ಯವಾದ ನಿರ್ಧಾರಗಳು ಇಂದು ಬೇಡ. ಆದ್ದರಿಂದ ಸಮಾಧಾನ ರೀತಿಯಲ್ಲಿ ಇರುವುದು ಉತ್ತಮ.
ಇದನ್ನು ಓದಿ:Daily Horoscope: ಪುಷ್ಯ ನಕ್ಷತ್ರದ ಅಧಿಪತಿ ಶನಿ ಯಾವ ರಾಶಿಗೆ ಒಳಿತು ಮಾಡಲಿದೆ?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನೆಯಲ್ಲಿ ನೆಮ್ಮದಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರಿಂದಲೂ ಧನ ಆಗಮನ, ಇಷ್ಟಾರ್ಥ ಸಿದ್ಧಿ ಕೂಡ ಆಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಇರುವ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮನಸ್ಸಿಗೆ ಯಾವುದೇ ಸಮಾಧಾನ ಇರುವುದಿಲ್ಲ.ಆದರೂ ಕೂಡ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ವೈಯಕ್ತಿಕ ಜೀವನದ ಬಗ್ಗೆಯೂ ಗಮನ ಕೊಡಬೇಕಾಗಿರುವುದು ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಭಾಗ್ಯೋದಯ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಹಿರಿಯರ, ದೇವರ ಆಶೀರ್ವಾದ ಬಹಳಷ್ಟು ಮುಖ್ಯವಾಗುತ್ತದೆ. ಅದೇ ರೀತಿ ಹಿರಿಯರ ಆಶೀರ್ವಾದ ಇರದೆ ನಿಮಗೆ ಭಾಗ್ಯೋದಯ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಇವರ ಆಶೀರ್ವಾದ ಬಹಳ ಮುಖ್ಯವಾಗುತ್ತದೆ. ಬಹಳ ವಿನಯದಿಂದ ನೀವು ಕೆಲಸ ಮಾಡಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಉಂಟಾಗಲಿದೆ. ಪ್ರೀತಿ ಪಾತ್ರರಿಂದ ಬೇಕಾದ ಪ್ರತಿಕ್ರಿಯೆ ನಿಮಗೆ ಸಿಗುವುದಿಲ್ಲ. ಕೆಟ್ಟ ನಿರ್ಧಾರ ಮಾಡುವ ಮನೋ ಭಾವನೆ ನಿಮಗೆ ಬರಲಿದೆ. ಹಾಗಾಗಿ ಸಮಾಧಾನದಿಂದ ಇರಲು ಪ್ರಯತ್ನಿಸಿ. ಧ್ಯಾನ ಇತ್ಯಾದಿ ಮೂಲಕ ಮೂಲಕ ದಿನ ಕಳೆಯಿರಿ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಪ್ರೀತಿ ಪಾತ್ರರಿಂದ ಬಹಳಷ್ಟು ಸಹಕಾರ ಪ್ರಾಪ್ತಿಯಾಗಲಿದೆ. ನಿಮಗೆ ಇವತ್ತು ಎಲ್ಲ ಕೆಲಸದಲ್ಲೂ ಯಶಸ್ಸು ಸಿಗಲಿದೆ.
ಕುಂಭರಾಶಿ: ಕುಂಭ ರಾಶಿವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಶತ್ರುಗಳು ಇದ್ದರೂ ಯಾವುದೇ ರೀತಿಯ ತೊಂದರೆಗಳು ಕಾಡುವುದಿಲ್ಲ.
ಮೀನ ರಾಶಿ: ಮೀನ ರಾಶಿಯವರಿಗೆ ನಿಮ್ಮ ಕ್ರಿಯಾತ್ಮಕತೆ ಹೆಚ್ಚು ಇದ್ದರೂ ಮಾನಸಿಕವಾಗಿ ಬೇಸರ ಒಳಗಾಗುವ ಸಾಧ್ಯತೆಗಳು ಇರಲಿದೆ. ಪೋಷಕರು ಮಕ್ಕಳ ಆರೋಗ್ಯ, ಮಾನಸಿಕ ದೃಢತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ದಿನ ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡಿ ದೇವರ ಆರಾಧನೆ ಮಾಡಿದರೆ ನಿಮಗೆ ಉತ್ತಮ ಫಲ ಸಿಗಲಿದೆ.