ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ವರಮಹಾಲಕ್ಷ್ಮಿ ಹಬ್ಬದ ಈ ದಿನ ಯಾವ ರಾಶಿಯವರು ಸಮೃದ್ಧಿ ಹೊಂದುತ್ತಾರೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಚರ್ತುದಶಿ ತಿಥಿ, ಉತ್ತರಾಷಾಡ ನಕ್ಷತ್ರದ ಈ ದಿನ (ಆಗಸ್ಟ್ 8) ಪ್ರತಿ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಚರ್ತುದಶಿ ತಿಥಿ ಉತ್ತರಾಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯದ ಬಗ್ಗೆ (Daily Horoscope) ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಹೀಗೆ ವಿವರಿಸಿದ್ದಾರೆ.

ಇಂದು ವರಮಹಾಲಕ್ಷ್ಮಿ ಹಬ್ಬವಾಗಿದ್ದು, ಇಂದಿನ ಪೂಜೆಯನ್ನು ಪ್ರತಿಯೊಬ್ಬರು ಮಾಡಿದರೆ ಲಕ್ಷ್ಮಿ ಖಂಡಿತವಾಗಿಯೂ ಒಲಿಯುತ್ತಾಳೆ. ಒಂದು ಪೂಜೆಯಿಂದ ಇಡೀ ವರ್ಷದ ಫಲವನ್ನು ನೀವು ಇಂದು ಪಡೆಯಬಹುದು.

ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ‌ ‌ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಶ ಉಂಟಾಗುವ ಸಾಧ್ಯತೆ ಇದೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಸಂಪೂರ್ಣವಾಗಿ ಎಲ್ಲವೂ ಪರಿಹಾರವಾಗಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.

ವೃಷಭ ರಾಶಿ: ವೃಷಭ ರಾಶಿಯವರಿಗೂ ಇಂದು ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಶ ಉಂಟಾಗುವ ಸಾಧ್ಯತೆ ಇದೆ. ಆದರೆ ಮಧ್ಯಾಹ್ನ ಬಳಿಕ ಭಾಗ್ಯೋದಯ ಪ್ರಾಪ್ತಿಯಾಗಲಿದೆ‌. ಹಿರಿಯರ ಮತ್ತು ಭಗವಂತನ ಅನುಗ್ರಹ ನಿಮಗೆ ಪ್ರಾಪ್ತಿಯಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ. ಆದರೆ ಇಂದು ಹೆಚ್ಚು ಮಾತನಾಡದಂತೆ ನೋಡಿಕೊಳ್ಳಿ. ನಿಮ್ಮ ಮಾತಿನಿಂದಲೇ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.‌ ಹಾಗಾಗಿ ಈ ಬಗ್ಗೆ ಜಾಗೃತೆ ವಹಿಸುವುದು ಕೂಡ ಮುಖ್ಯ.

ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಶುಭ ದಿನವಾಗಲಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮತ್ತು ಮನೆಯಲ್ಲೂ ಯಶಸ್ಸನ್ನು ಕಾಣಲಿದ್ದಿರಿ. ಶುಭ ದಿನ ನಿಮ್ಮದಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಬಹಳ ಕಷ್ಟದ ದಿನ ಆಗಲಿದೆ. ಆದರೆ ಮಧ್ಯಾಹ್ನ ಬಳಿಕ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಾಮಾಜಿಕ ವ್ಯವಹಾರಗಳಲ್ಲಿ ನಿಮ್ಮ ಆತ್ಮಾವಿಶ್ವಾಸ ಹೆಚ್ಚಾಗಲಿದೆ. ಡಯೆಟ್, ಜಿಮ್ ಇತ್ಯಾದಿ ಉದ್ಯೋಗ ಮಾಡುವವರಿಗೆ ಉತ್ತಮ ದಿನವಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಮನಸ್ಸಿನಲ್ಲಿ ಕಿರಿ ಕಿರಿ, ತಾಯಿಯ ಬಗ್ಗೆ ಯೋಚನೆ ಇರುತ್ತದೆ. ಮಧ್ಯಾಹ್ನ ಬಳಿಕ ಕ್ರಿಯಾತ್ಮಕ ಚಟುವಟಿಕೆಯಲ್ಲಿ ಹೆಚ್ಚಾಗಿ ಪಾಲ್ಗೊಂಡು ಯಶಸ್ಸು ಕಾಣಲಿದ್ದೀರಿ. ಉತ್ತಮ ದಿನ ನಿಮ್ಮದಾಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಜಯ ಪ್ರಾಪ್ತಿಯಾಗಲಿದೆ. ಉತ್ತಮ ಆತ್ಮವಿಶ್ವಾಸದಿಂದ ಇರುತ್ತೀರಿ. ಮಧ್ಯಾಹ್ನ ಬಳಿಕ ಅನೇಕ ಯೋಚನೆಗಳು ಬಂದು ಮನಸ್ಸಿನಲ್ಲಿ ಕ್ಷೇಶ ಉಂಟಾಗಬಹುದು.

ಇದನ್ನು ಓದಿ:Daily Horoscope: ಪೂರ್ವಾಷಾಡ ನಕ್ಷತ್ರದಿಂದ‌ ಇಂದು ಯಾವ ರಾಶಿಗೆ ಉತ್ತಮ ಫಲವಿದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಅನೇಕ ತಾಪತ್ರಯಗಳು ಎದುರಾಗಬಹುದು. ಮಧ್ಯಾಹ್ನ ಬಳಿಕ ಮನಸ್ಸು ತಿಳಿಯಾಗಲಿದ್ದು ಬಂಧು ಮಿತ್ರರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಟ್ರಿಪ್, ಡಿನ್ನರ್ ಪಾರ್ಟಿ ಇತ್ಯಾದಿಗಳಿಗೆ ತೆರಳುವ ಅವಕಾಶ ಸಿಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮಧ್ಯಾಹ್ನವರೆಗೂ ಯಾವುದೇ ಕೆಲಸಕ್ಕೂ ಮಾರ್ಗ ದರ್ಶನ ಸಿಗಲಿದೆ. ಆದರೆ ಮನೆಕೆಲಸಕ್ಕೆ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.‌ ಆತ್ಮವಿಶ್ವಾಸ ಇಂದು ಹೆಚ್ಚಾಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿನಲ್ಲಿ ಕ್ಷೇಶ, ಬೇಸರ ಇರಲಿದೆ. ಆರೋಗ್ಯ ಸಮಸ್ಯೆಯೂ ಕಾಡಬಹುದು‌. ಮಧ್ಯಾಹ್ನ ಬಳಿಕ ಎಲ್ಲ ಸಮಸ್ಯೆ ಪರಿಹಾರವಾಗಲಿದ್ದು ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗದರ್ಶನ ಒದಗಿ ಬರಲಿದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ಉತ್ತಮ ದಿನವಾಗಲಿದ್ದು, ಮಿತ್ರರಿಂದಲೂ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಕಿರಿ ಕಿರಿ ಏಕಾಂಗಿತನ ಕಾಡಬಹುದು. ಹಾಗಾಗಿ ಎರಡು ದಿನಗಳವರೆಗೆ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಲು ಹೋಗಬೇಡಿ‌.

ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಕೂಡ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಬಹುರು. ಮಧ್ಯಾಹ್ನ ಬಳಿಕ ಉತ್ತಮ ಸಮಾವಕಾಶ ಸಿಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಧನಾಗಮನ ಕೂಡ ಆಗುವ ಸಾಧ್ಯತೆ ಇರುತ್ತದೆ.‌ ಹೆಚ್ಚಿನ ಯಶಸ್ಸು ಕಾಣುವ ದಿನ ಆಗಲಿದೆ. ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.