ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಅಶ್ವಿನಿ ನಕ್ಷತ್ರದ ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಆಶ್ವಿನಿ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ. ಹೀಗಾಗಿ ಎಲ್ಲ ರಾಶಿಗೂ ಇದರ ಪ್ರಭಾವ ಬೀರಲಿದೆ. ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕ್ಷೇಷ ಹೆಚ್ಚಾಗಿಯೇ ಇರಲಿದ್ದು ಮನಸ್ಸಿಗೆ ನಿರ್ಲಿಪ್ತತತೆ ಕಾಡಲಿದೆ. ಯಾವುದೇ ಕೆಲಸಗಳಲ್ಲಿ ಅಷ್ಟೊಂದು ಆಸಕ್ತಿ ಇರುವುದಿಲ್ಲ. ನಿಮ್ಮ ಪಾಡಿಗೆ ನೀವು ಸಮಯ ಕಳೆಯುತ್ತೀರಿ. ಅದೇ ರೀತಿ ಯಾರು ಏನೇ ಹೇಳಿದರೂ ಯಾವುದಕ್ಕೆ ಅಂಜದೆ ನಿಮ್ಮೊಳಗೆ ನೀವು ಸಂತೋಷವನ್ನು ಕಾಣುತ್ತೀರಿ.
ವೃಷಭ ರಾಶಿ: ವೃಷಭ ರಾಶಿಯಲ್ಲಿ ಇರುವವರಿಗೆ ಇಂದು ಕಷ್ಟದ ದಿನ ಎನಿಸಿಕೊಳ್ಳಲಿದೆ. ನೀವು ಎಷ್ಟು ಪ್ರಯತ್ನ ಪಟ್ಟರೂ ಇತರರು ನಿಮ್ಮ ಮಾತುಗಳನ್ನು ಗ್ರಹಿಸುವುದಿಲ್ಲ. ನಿಮ್ಮ ಒಳ್ಳೆಯತನಕ್ಕೆ ಯಾವುದೇ ಬೆಲೆ ಇಂದು ಸಿಗುವುದಿಲ್ಲ. ಹಾಗಾಗಿ ಹೆಚ್ಚು ಮಾತನಾಡದೇ ಇರುವುದು ಉತ್ತಮ. ಎರಡು ದಿನಗಳ ಬಳಿಕ ಎಲ್ಲವೂ ಸರಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನ ಆಗಲಿದೆ. ಗೆದ್ದೆ ಎನ್ನುವ ಮನೋಭಾವನೆ ನಿಮ್ಮಲ್ಲಿ ಇರುತ್ತದೆ. ಎಲ್ಲದರಲ್ಲೂ ಜಯ ಕಾಣುವೆ, ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸ ನಿಮ್ಮಲ್ಲಿ ಇರಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಆತ್ಮವಿಶ್ವಾಸ ಹೆಚ್ಚಾಗಿಯೇ ಇರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಆದರೆ ಹೆಚ್ಚು ಆತ್ಮವಿಶ್ವಾಸ ಇಟ್ಟುಕೊಳ್ಳಲು ಹೋಗಬೇಡಿ. ಒಬ್ಬರೇ ಎಲ್ಲವನ್ನು ನಿಭಾಯಿಸಲು ಕೂಡ ಸಾಧ್ಯ ಆಗುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಭಾಗ್ಯದ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ನಿಮಗೆ ನೋವು ಮಾಡಿದವರ ಬಗ್ಗೆ ಬೇಸರ ಅನ್ನೊದು ಇದ್ದೇ ಇರುತ್ತದೆ. ಹಾಗಾಗಿ ಯಾರೊಂದಿಗೂ ಕಟುವಾದ ಮಾತುಗಳನ್ನು ಆಡಲು ಹೋಗಬೇಡಿ. ನಾಳೆಯ ದಿನ ಎಲ್ಲವೂ ಒಳ್ಳೆಯದಾಗಲಿದೆ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನ ಆಗಲಿದೆ. ಮನಸ್ಸಿಗೆ ಅಷ್ಟೊಂದು ಒಳ್ಳೆಯದು ಆಗುವುದಿಲ್ಲ. ಬೇರೆಯವರ ಮಾತುಗಳನ್ನು ಇಂದು ಹೆಚ್ಚು ಗ್ರಹಿಸಲು ಹೋಗಬೇಡಿ. ಇದರಿಂದ ಹೆಚ್ಚು ನೋವು ಉಂಟಾಗುವ ಸಾಧ್ಯತೆ ಇದೆ. ಧ್ಯಾನಾದಿಗಳನ್ನು ಮಾಡುವ ಮೂಲಕ ದಿನವನ್ನು ಕಳೆಯಿರಿ.
ಇದನ್ನು ಓದಿ:Daily Horoscope: ರೇವತಿ ನಕ್ಷತ್ರದ ಈ ದಿನ ಈ ರಾಶಿಯವರಿಗೆ ಒಳಿತಾಗಲಿದೆ?
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಬೇರೆಯವರಿಂದ ಸಹಕಾರ ಪ್ರಾಪ್ತಿಯಾಗಲಿದೆ. ಆದರೆ ಹೆಚ್ಚು ಆತ್ಮವಿಶ್ವಾಸ ಒಳ್ಳೆಯದಲ್ಲ. ಯೋಚನೆಯಿಂದ ಕೆಲಸಗಳನ್ನು ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅಷ್ಟು ಒಳ್ಳೆಯ ದಿನ ಅಲ್ಲ. ಆದರೂ ಕೂಡ ಸಾಮಾಜಿಕ ವ್ಯವಹಾರದಲ್ಲಿ ಜಯ ಕಾಣುತ್ತೀರಿ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.ಯಾವುದೇ ರೀತಿಯ ಕಟುವಾದ ಮಾತುಗಳು ಇಂದು ಬೇಡ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಕಷ್ಟದ ದಿನವಾಗಲಿದೆ. ಪ್ರೇಮ, ಪ್ರೀತಿ, ದಾಂಪತ್ಯ ವಿಚಾರಗಳಲ್ಲಿ ಮನಸ್ಸಿಗೆ ಕ್ಷೇಷ ಇರಲಿದೆ. ವ್ಯವಹಾರ, ತೆರಿಗೆ ಕ್ಷೇತ್ರದಲ್ಲಿ ಇರುವವರು ಜಾಗೃತೆ ವಹಿಸಬೇಕು.
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಸ್ವಲ್ಪ ಕಷ್ಟದ ದಿನವಾಗಲಿದೆ. ತಾಯಿಯ ಆರೋಗ್ಯ, ಮುಖ್ಯವಾದ ಆಸ್ತಿ ಪಾಸ್ತಿ ವಿಚಾರದಲ್ಲಿ ಬೇಸರ ಇರಬಹುದು. ಕುಟುಂಬದಲ್ಲಿ ನಾನಾ ರೀತಿಯ ಸಮಸ್ಯೆ ಇರಲಿದ್ದು ಅದರ ಬಗ್ಗೆ ಹೆಚ್ಚಿನ ಗಮನ ನೀಡುತ್ತೀರಿ.
ಕುಂಭ ರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಎರಡು ಮೂರು ದಿನಗಳ ಹಿಂದೆ ಇದ್ದ ನೋವು ಕೂಡ ಮಾಯವಾಗಲಿದೆ. ನಿಮ್ಮ ಆತ್ಮವಿಶ್ವಾಸ ಇಂದು ಹೆಚ್ಚಾಗಿರುತ್ತದೆ. ಸೋಶಿಯಲ್ ಮೀಡಿಯಾ, ಮೀಡಿಯಾ ಇತ್ಯಾದಿ ರಂಗದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ.
ಮೀನ ರಾಶಿ: ಮೀನರಾಶಿಯವರು ಇಂದು ಸಂಸಾರದ ಕಡೆಗೆ ಹೆಚ್ಚು ಗಮನ ನೀಡುತ್ತಿರಿ. ಎಲ್ಲರೊಂದಿಗೂ ಉತ್ತಮವಾದ ದಿನ ಕಳೆಯುತ್ತೀರಿ. ಎಲ್ಲ ರಾಶಿಯವರು ನಿತ್ಯ ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು.