ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಒಲಿಯಲಿದೆ ಭಾರಿ ಅದೃಷ್ಟ- ಆದರೆ ಈ ಅನಾಹುತಗಳ ಅರಿವಿರಲಿ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ , ಗ್ರೀಷ್ಮ ಋತು, ಅಷಾಡ ಮಾಸ ಕೃಷ್ಣ ಪಕ್ಷೆಯ ಈ ದಿನ ಜುಲೈ 21ನೇ ತಾರೀಖಿನ ಸೋಮವಾರದಂದು, ಏಕಾದಶಿ ತಿಥಿ, ರೋಹಿಣಿ ನಕ್ಷತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷೆಯ ಈ ದಿನ ಏಕಾದಶಿ ತಿಥಿ, ರೋಹಿಣಿ ನಕ್ಷತ್ರದಲ್ದಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ಇಂದು ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಆದ್ರ ನಕ್ಷತ್ರ ಇದ್ದು ಇದರ ಅಧಿಪತಿ ರಾಹು ಆಗಿದ್ದಾನೆ. ಹಾಗಾಗಿ ಇಂದು ಯಾವುದೇ ವ್ಯವಹಾರಗಳಲ್ಲಿ ಏನೋ ಒಂದು ಸಂದೇಹ ಅಡೆ- ತಡೆ ಉಂಟಾಗುವ ಸಾದ್ಯತೆ ಬರಬಹುದು. ಆದರೆ ಈ ಬಗ್ಗೆ ಜಾಗೃತರಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು, ಪಾಲಿಟೆಕ್ನಿಕ್ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮ ವಾದ ದಿನವಾಗಿದೆ.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಸಂಸಾರದ ತೊಂದರೆ ಹಾಗೂ ಹಣಕಾಸಿನ ವೆಚ್ಚದ ತೊಂದರೆ ನಿಮ್ಮನ್ನು ಕಾಡಬಹುದು. ಹಾಗಾಗಿ ಈ ಬಗ್ಗೆ ಜಾಗೃತರಾಗಿರಿ‌. ಯಾವುದೇ ಕೆಲಸ ಮಾಡುವ ಮುನ್ನ ಯೋಚಿಸಿ ಕ್ರಮಕೈಗೊಳ್ಳಿ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ನಿಮ್ಮ ರಾಶಿಯಲ್ಲೇ ಚಂದ್ರ ಇರುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಪ್ರಾಪ್ತಿಯಾಗಲಿದೆ. ಹಿಂದಿನ ಎರಡು ಮೂರು ದಿನಗಳಿಂದ ಇದ್ದ ಕ್ಷೇಷ ಇಂದು ಮಾಯವಾಗಿ ನೆಮ್ಮದಿಯ ವಾತಾವರಣ ಸಿಗಲಿದೆ.

ಕಟಕ ರಾಶಿ: ಕಟಕರಾಶಿ ಅವರಿಗೆ ಇಂದು ಮಿತೃತ್ವರಿಂದ ತೊಂದರೆಯಾಗಬಹುದು‌.. ಮುಖ್ಯವಾದ ವಿಚಾರಗಳಲ್ಲಿ ಯಾರು ನಿಮಗೆ ಸಹಕಾರ ನೀಡದೆ ಇರಬಹುದು‌.ಎರಡು ದಿನಗಳ ಕಾಲ ಈ ರೀತಿಯ ಮನಸ್ಥಿತಿ ಇರಬಹುದು‌‌‌..ಆದರೆ ಈ ಬಗ್ಗೆ ಯಾವುದೇ ಚಿಂತೆ ಮಾಡದೇ ಆರೋಗ್ಯದ ಬಗ್ಗೆ ಗಮನ ವಹಿಸುವುದು ಸೂಕ್ತ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ಫಲ. ಹೆಚ್ಚಿನ ಇಷ್ಟಾರ್ಥ ಸಿದ್ದಿ.ಧನ ಆಗಮಾನ ಕೂಡ ಆಗಲಿದ್ದು ಸ್ನೇಹಿತರಿಂದ ಸಂತೋಷಕರ ವಿಚಾರ ತಂದುಕೊಡಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಾಣಲಿದ್ದು ಉತ್ತಮ ದಿನವಾಗಲಿದೆ.

ಕನ್ಯಾ ರಾಶಿ: ಈ ದಿನ ಕನ್ಯಾ ರಾಶಿ ಅವರು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲಿದ್ದೀರಿ. ನೀವು ನಿರೀಕ್ಷೆ ಮಾಡದೇ ಇರುವಂತಹ ಪ್ರಶಂಸೆ ಇಂದು ಪ್ರಾಪ್ತಿಯಾಗಲಿದೆ. ನಿಮ್ಮ ಸ್ಥಾನ ಮಾನ ಕೂಡ ಇಂದು ಹೆಚ್ಚಾಗಲಿದ್ದು ಗೌರವ ವನ್ನು ಪಡೆದು ಕೊಳ್ಳುತ್ತೀರ. ಆದೇ ರೀತಿ ಮನೆ ಕಡೆಯೂ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ‌ಭಾಗ್ಯೋದಯದ ದಿನ ವಾಗಿದೆ. ಆದರೂ ಕೂಡ ಒಂದು ರೀತಿಯ ಕಳವಳ ಮನಸ್ಸಿನಲ್ಲಿ ಇದ್ದೆ ಇರುತ್ತದೆ‌. ಹಾಗಾಗಿ ನೀವು ಭಗವಂತನ ಧಾನ್ಯ ಮಾಡು ವುದನ್ನು ಮರೆಯಬಾರದು.. ಹಾಗೆಯೇ ಹಿರಿಯರ ಆಶಿರ್ವಾದ ಪಡೆದು ಕೊಳ್ಳುವುದರಿಂದ ಒಳಿತು ಆಗಲಿದೆ.

ಇದನ್ನು ಓದಿ:Daily Horoscope: ದಿನ ಭವಿಷ್ಯ- ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು!

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನಸ್ಸಿಗೆ ಸ್ವಲ್ಪ ಕ್ಷೇಷ ಉಂಟಾಗುವ ಸಾಧ್ಯತೆ ಇದೆ. ಮುಖ್ಯ ವಾದ ವಿಚಾರಗಳ ಬಗ್ಗೆ ಯಾವುದೇ ನಿರ್ಧಾರ ಬೇಡ.ನಿಮ್ಮ ಪ್ರೀತಿ ಪಾತ್ರರಿಂದ ಹಾಗೂ ದಾಂಪತ್ಯ ಜೀವನದಲ್ಲಿ ಇಂದು ಯಾವುದೇ ಸಹಕಾರ ಪ್ರಾಪ್ತಿಯಾಗುವುದಿಲ್ಲ‌. ಹಾಗಾಗಿ ಯಾವುದೇ ರೀತಿ ಯಲ್ಲಿ ದೃತಿ ಗೆಡದೆ ಧೈರ್ಯವಾಗಿರಿ‌

ಧನಸ್ಸು: ಈ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ‌. ಅತೀ ಹೆಚ್ಚಿನ ನೆಮ್ಮದಿ ಮನಸ್ಸಿಗೆ ಸಿಗಲಿದೆ..ದಾಂಪತ್ಯ ಜೀವನ ನಡೆಸುವ ಜೋಡಿಗಳಿಗೆ, ಪ್ರೇಮಿಗಳಿಗೆ ಉತ್ತಮ ದಿನ ವಾಗಿದ್ದು ಬಹ ಳಷ್ಟು ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತ್ಯುತ್ತಮ ವಾದ ದಿನವಾಗಿದೆ.ಆದರೂ ಶತ್ರು ಭಾದೆ ಕಾಡಲಿದ್ದು ನಿಮ್ಮನ್ನು ಹಿಮ್ಮೆಟ್ಟಿಸಲು ಪ್ರಯತ್ನ ಪಡುತ್ತಾರೆ. ಆದರೂ ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಹಾಗೆಯೇ ಶುಭಕರವಾದ ದಿನ ನಿಮ್ಮದು ಆಗಲಿದೆ.

ಕುಂಭ ರಾಶಿ: ಕುಂಭರಾಶಿ ಅವರಿಗೆ ಇಂದು ಮಕ್ಕಳ ಜವಾಬ್ದಾರಿ ಹೆಚ್ಚಾಗಲಿದೆ. ಮಕ್ಕಳಿಂದ ಕಿರಿ ಕಿರಿ ಎದುರಾಗುವ ಸಾಧ್ಯತೆ ಇದೆ. ಹಾಗೆಯೇ ಕೆಲಸ ಹಾಗೂ ಕಾರ್ಯ ಚಟುವಟಿಕೆಯಲ್ಲಿ ಸಮತೋಲ ನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ ದಿನವಾಗಲಿದೆ.

ಮೀನ ರಾಶಿ: ಮೀನ ರಾಶಿ ಅವರು ಇಂದು ತಾಯಿಯ ಆರೋಗ್ಯ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸ ಬೇಕಾಗುತ್ತದೆ. ಬಿಸಿನೆಸ್ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಜವಾಬ್ದಾರಿ ಬರಬಹುದು. ದಿನ ನಿತ್ಯ ಭಗವದ್ಗೀತಾ ಶ್ಲೋಕ ಪಠಣ ಮಾಡುವ ಅಭ್ಯಾಸ ಮಾಡಿಕೊಳ್ಳಿ.