ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಸಪ್ತಮಿ ತಿಥಿ, ರೋಹಿಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೇಷ ರಾಶಿ ಅವರಿಗೆ ಉತ್ತಮ ದಿನವಾಗಿದೆ. ಪ್ರೇಮ, ಪ್ರೀತಿ,ದಾಂಪತ್ಯದ ವಿಚಾರದಲ್ಲಿ ವೈಮನಸ್ಸು ದೂರಾಗಿ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಮಕ್ಕಳಿಂದ ಮನೆಯಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಅಂದುಕೊಂಡ ಕೆಲಸ ಕಾರ್ಯಕ್ಕೆ ಯಾವುದೆ ಅಡೆ ತಡೆ ಬಾರದೆ ಎಲ್ಲವೂ ಸರಾಗವಾಗಿ ಪರಿಹಾರವಾಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ಆಸ್ತಿ ಪಾಸ್ತಿ ಎಲ್ಲ ವಿಚಾರದ ವ್ಯಾಜ್ಯಗಳು ಪರಿಹಾರವಾಗಲಿದೆ. ಆದಷ್ಟು ತಾಳ್ಮೆ ವಹಿಸಿದರೆ ನೀವು ಅಂದು ಕೊಂಡ ಸ್ಥಾನ ಮಾನ ನಿಮಗೆ ದೊರೆಯಲಿದೆ. ವ್ಯಾಪಾರ, ವ್ಯವಹಾರ,ಕೋರ್ಟ್, ಕಚೇರಿ ಇತರ ಕೆಲಸ ಕಾರ್ಯಕ್ಕೂ ಈ ದಿನ ಬಹಳ ಚೆನ್ನಾಗಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಈ ದಿನ ಬಹಳ ಚೆನ್ನಾಗಿ ಇರಲಿದೆ. ತಾಯಿಯ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸಬೇಕು. ಸೋಶಿಯಲ್ ಮಿಡಿಯಾ, ಟಿವಿ , ರೆಡಿಯೋ , ಜರ್ನಲಿಸಂ ಇತ್ಯಾದಿಯಲ್ಲಿ ಕೆಲಸ ಮಾಡುವವರಿಗೆ ಈ ದಿನ ಬಹಳ ಅನುಕೂಲಕರ ವಾತಾವರಣ ಇರಲಿದೆ. ಸ್ನೇಹಿತರ ಅನಿರೀಕ್ಷಿತ ಆಗಮನ ಮನಸ್ಸಿಗೆ ಖುಷಿ ನೀಡಲಿದ್ದು ಈ ದಿನ ಬಹಳ ಉತ್ತಮವಾಗಿ ಇರಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಈ ದಿನ ಅತ್ಯುತ್ತಮವಾದ ದಿನವಾಗಿದೆ. . ಸಂಸಾರ, ಪ್ರೀತಿ ,ಪ್ರೇಮ ಇತ್ಯಾದಿ ವಿಚಾರದಲ್ಲಿ ಸಾಕಷ್ಟು ನೆಮ್ಮದಿ ಸಿಗಲಿದೆ. ಆರೋಗ್ಯ ಇತ್ಯಾದಿ ವಿಚಾರದಲ್ಲಿ ಹೆಚ್ಚಿನ ಗಮನವಹಿಸಬೇಕು. ತಾಳ್ಮೆ ವಹಿಸಿ ಮುನ್ನಡೆದರೆ ನಿಮ್ಮ ಬುದ್ಧಿವಂತಿಕೆಯಿಂದ ಉತ್ತಮ ಫಲ ಪಡೆಯುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಬಹಳ ಉತ್ತಮ ದಿನವಾಗಿದೆ. ಸಿಂಹ ರಾಶಿಯಲ್ಲೇ ಶುಕ್ರ ಪ್ರವೇಶಿಸುವುದರಿಂದ ಶತ್ರುಗಳ ವಿರುದ್ಧ ವಿಜಯ ಪ್ರಾಪ್ತವಾಗಲಿದೆ. ಹೊಸ ಮಿತ್ರರಿಂದ ಸಂತಸದ ದಿನ ಕಳೆಯಲಿದ್ದೀರಿ. ಈ ದಿನ ಬಹಳ ಸಂತೋಷ ನೆಮ್ಮದಿ ನಿಮಗೆ ಪ್ರಾಪ್ತಿ ಯಾಗಲಿದೆ. ಆಸ್ತಿ ಪಾಸ್ತಿ ವ್ಯವಹಾರ, ವಾಹನ ಇತ್ಯಾದಿ ಖರೀದಿ ಹಾಗೂ ಮಾರಾಟದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಆಗಬಹುದಾದ ಅನಾಹುತ ತಪ್ಪಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಮಿಶ್ರ ಫಲವಿದೆ. ಶುಕ್ರನು ಸಿಂಹ ರಾಶಿ ಪ್ರವೇಶ ಮಾಡಿದ್ದು ನಿಮ್ಮ ರಾಶಿ ಅವರಿಗೆ ಅಷ್ಟು ಶುಭ ಫಲ ಇರಲಾರದು. ಸ್ನೇಹಿತರಿಂದ ಮನಸ್ಸಿಗೆ ನೋವು ಉಂಟಾಗಲಿದೆ. ಮನೆ ಹಾಗೂ ಕುಟುಂಬಸ್ಥರಿಂದ ಅನೇಕ ತೊಂದರೆ ಉಂಟಾಗಬಹುದು. ಹೀಗಾಗಿ ಈ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಈ ದಿನ ನಿಮ್ಮ ಕೆಲಸ ಕಾರ್ಯಕ್ಕೆ ತೊಡಕಾಲಿದೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮುತುವರ್ತಿ ವಹಿಸಿದರೆ ನಷ್ಟ ತಪ್ಪಿಸಬಹುದು.
ತುಲಾ ರಾಶಿ: ತುಲಾದಿನ ಕಾರ್ಯಕ್ಷೇತ್ರದಲ್ಲಿ ಬಹಳ ಯಶಸ್ಸು ಸಿಗುವ ಮೂಲಕ ಬಹಳ ಉತ್ತಮವಾದ ದಿನ ಇದಾಗಲಿದೆ. ಶುಕ್ರನು ಸಿಂಹ ರಾಶಿ ಪ್ರವೇಶಿಸುವುದು ತುಲಾ ರಾಶಿ ಅವರಿಗೆ ಸಾಕಷ್ಟು ವಿಚಾರದಲ್ಲಿ ಯಶಸ್ಸು , ಕೀರ್ತಿ ಲಭ್ಯವಾಗಲಿದೆ. ಮಿತ್ರರಿಂದ ಶುಭವಾಗಲಿದೆ. ಇಷ್ಟಾರ್ಥ ಸಿದ್ಧಿ ಮನಸ್ಸಿಗೆ ನೆಮ್ಮದಿ ಹಾಗೂ ಧನಾಗಮವಾಗಲಿದೆ. ಸಂಸಾರ, ಸ್ನೇಹಯುತ ಸಂಬಂಧ ವ್ಯವಹಾರದಲ್ಲಿ ಈ ದಿನ ಬಹಳ ಚೆನ್ನಾಗಿ ಇರಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ದಿನ ಬಹಳ ಅಶುಭವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯ ಈ ದಿನ ಮಾಡುವುದು ಬೇಡ. ವ್ಯಾಪಾರ, ವ್ಯವಹಾರ , ಕುಟುಂಬ ಸಂಬಂಧಗಳಿಂದ ಅನೇಕ ವಿಚಾರದಲ್ಲಿ ಒತ್ತಡ ಇತರ ಸಮಸ್ಯೆ ಇರಲಿದೆ. ಹೆಂಗಸರ ಜೊತೆಗೆ ವ್ಯವಹರಿಸುವಾಗ ಸಾಕಷ್ಟು ಜಾಗೃತಿ ವಹಿಸಬೇಕು ಇಲ್ಲವಾದರೆ ಸಾರ್ವಜನಿಕವಾಗಿ ಮಾನನಷ್ಟವಾಗಲಿದ್ದು ಮುಜುಗರದ ಸ್ಥಿತಿಗೆ ತಲುಪುವಿರಿ.
ಇದನ್ನು ಓದಿ:Vastu Tips: ಮನೆಯ ಈ ಭಾಗದಲ್ಲಿರಲಿ ಗೀಸರ್, ಮೈಕ್ರೋವೇವ್
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಭಾಗ್ಯೋದಯದ ದಿನವಾಗಿದೆ. ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರ ಜೊತೆ ಇಂದು ಬಹಳ ಉತ್ತಮ ಸಮಯವನ್ನು ನೀವು ಕಳೆಯಲಿದ್ದೀರಿ. ಪ್ರೀತಿ ಪಾತ್ರ ರೊಂದಿಗೆ ವ್ಯವಹರಿಸಿದ್ದ ಕಾರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗುರು ಹಿರಿಯರ ಆಶೀರ್ವಾದದಿಂದ ಅಂದು ಕೊಂಡ ಕೆಲಸ ಕಾರ್ಯಗಳು ಬಹಳ ಚೆನ್ನಾಗಿ ಸಾಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಸಿಂಹ ರಾಶಿಗೆ ಶುಕ್ರನ ಪ್ರವೇಶಿಸಿದ್ದು ಅನೇಕ ತಿಂಗಳಿಂದ ಹಾಗೆ ಉಳಿದಿದ್ದ ಕೆಲಸ ಕಾರ್ಯ ಎಲ್ಲವೂ ಈಗ ಸರಾಗವಾಗಿ ಆಗಲಿದೆ. ಹಳೆಯ ವೈಮನಸ್ಸು ಎಲ್ಲವೂ ದೂರಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯ, ಸ್ನೇಹ ಸಂಬಂಧಗಳು ಇಂದು ಬಹಳ ಚೆನ್ನಾಗಿ ಇರಲಿದೆ. ನಿಮ್ಮ ಪ್ರೀತಿ ಪಾತ್ರ ರೊಂದಿಗೆ ವ್ಯವಹರಿಸಿದ್ದ ಕಾರಣ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಶುಕ್ರನು ಸಪ್ತಮಕ್ಕೆ ಬರಲಿದ್ದು ವಿವಾಹದ ವಿಚಾರ ದಲ್ಲಿ ತೊಂದರೆಗಳು ಉಂಟಾಗಲಿದೆ. ವೈವಾಹಿಕ ಜೀವನಕ್ಕೆ ತೊಂದರೆ ಉಂಟಾಗಬಹುದು. ಹೀಗಾಗಿ ವೈವಾಹಿಕ ಜೀವನದ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕು. ಅನಗತ್ಯ ವೈಮನಸ್ಸು ಗಳು ಉಂಟಾಗಿ ಕುಟುಂಬ , ಸ್ಮೇಹಿತರಿಂದ ಅನಗತ್ಯ ಮಾನಸಿಕ ಹಿಂಸೆ ಆಗಬಹುದು.
ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಮಿಶ್ರ ಫಲ ಇರಲಿದೆ. ಗುರು ಹಿರಿಯರ ಜೊತೆಗೆ ಹಾಗೂ ಹೆಂಗಸರ ಜೊತೆ ವ್ಯವಹರಿಸುವಾಗ ಹೆಚ್ಚಿನ ನಿಗಾ ವಹಿಸಬೇಕು. ವ್ಯಾಪಾರ ವ್ಯವಹಾರ ಇತರ ಮಾತುಕತೆಯಲ್ಲಿ ತುಂಬಾ ಜಾಗ ರೂಕತೆಯಿಂದ, ವೀವೆಕಯುತವಾಗಿ ವ್ಯವಹರಿಸಬೇಕು. ಹಳೆ ಗೊಂದಲ,ಕ್ಲೇಶಗಳು ಪರಿಹಾರವಾಗಲಿದೆ. ನಿಮ್ಮ ಸ್ನೇಹಿತರಿಂದಲೇ ನಿಮಗೆ ಅವಮಾನವಾಗುವ ಸಾಧ್ಯತೆ ಇದ್ದು ಎಲ್ಲ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು.