ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯ ತಿಥಿ,ಪೂರ್ವ ಪಾಲ್ಗುಣಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಈ ರಾಶಿಯವರಿಗೆ ಗ್ರಹಣದ ಪ್ರಭಾವ ಬೀರಲಿದ್ದು ಕೆಲವು ಮಿತೃತ್ವಗಳು ಸಂಪೂರ್ಣವಾಗಿ ನಶಿಸಿ ಹೋಗಬಹುದು. ಅದೇ ರೀತಿ ಶತ್ರು ಭಾದೆಗಳು ಹೆಚ್ಚಾಗಬಹುದು. ಕೆಲವರಿಗೆ ನೀವು ಸರಿಯಾದ ಕೆಲಸ ಮಾಡಿದರೂ ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು. ಆರೋಗ್ಯದಲ್ಲೂ ತೊಂದರೆ ಯಾಗಬಹುದು. ಕೋರ್ಟ್ ಕಛೇರಿ ವ್ಯವಹಾರ ಬಗ್ಗೆ ಜಾಗೃತಿ ವಹಿಸಿಕೊಳ್ಳಬೇಕು.
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಪಂಚಮ ಸ್ಥಾನದಲ್ಲಿ ಗ್ರಹಣ ಆಗುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇಂದು ಗರ್ಭಿಣಿ ಸ್ತ್ರಿಯರು ಬಹ ಳಷ್ಟು ಹುಷಾರಾಗಿ ಇರಬೇಕು.ಹಣಕಾಸಿನ ವ್ಯವಹಾರದಲ್ಲಿ ಇಂದು ಮುಖ್ಯವಾದ ನಿರ್ಧಾರ ಮಾಡಬೇಡಿ. ನಿಮಗೆ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಮನೆ, ಸಂಸಾರ, ಆಸ್ತಿ ಪಾಸ್ತಿ ವಿಚಾರದಲ್ಲಿ ಸ್ವಲ್ಪ ಕ್ಷಿಷ್ಟಕರವಾದ ನಿರ್ಧಾರ ವಾಗುತ್ತದೆ. ಇದ್ದ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗ ಬಹುದು. ಆಸ್ತಿ ಪಾಸ್ತಿ ವಿಚಾರದ ಬಗ್ಗೆ ನೀವು ಗಮನ ವಹಿಸುವುದು ಅವಶ್ಯಕ
ಕಟಕ ರಾಶಿ: ಕಟಕ ರಾಶಿ ಅವರಿಗೆ ಅತ್ಯುತ್ತಮವಾದ ಗೋಚರಆಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವ ರಿಗೆ ಉತ್ತಮ ಸಮಯ ಆಗಲಿದೆ. ಹೆಚ್ಚಿನ ಲಾಭ ಒದಗಿ ಬರಲಿದೆ. ಮುಖ್ಯವಾದ ವಿಚಾರಗಳನ್ನು ಚೆನ್ನಾಗಿ ನಿಭಾಯಿಸಿ ಆತ್ಮವಿಶ್ವಾಸದಿಂದ ಇರುತ್ತೀರಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಈ ದಿನ ಕಷ್ಟ ವಾಗಬಹುದು. ನಿಮ್ಮ ಸಂಸಾರ, ಹಣ ಕಾಸಿನ ವಿಚಾರದಲ್ಲಿ ತೊಂದರೆ ಆಗಬಹುದು. ಅದೇ ರೀತಿ ಅತೀ ಹೆಚ್ಚಿನ ಖರ್ಚು ಇರಬಹುದು. ಇನ್ನು ಬರಬೇಕಾದ ಹಣಕ್ಕೆ ಕೊರತೆ ಉಂಟಾಗಬಹುದು. ಹಾಗಾಗಿ ಸಂಸಾರದ ಸುಭದ್ರತೆಯ ಬಗ್ಗೆ ಹೆಚ್ಚಿನ ಯೋಚನೆಯನ್ನು ನೀವು ಮಾಡಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ನಿಮ್ಮ ರಾಶಿಯಲ್ಲಿ ಗ್ರಹಣ ಆಗುವುದರಿಂದ ನಿಮ್ಮ ಆರೋಗ್ಯ, ವ್ಯಾಪಾರ ವಹಿವಾಟಿನ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅನೇಕ ವಿಚಾರದಲ್ಲಿ ಬೇರೆ ಯವರಿಂದ ನಿಮಗೆ ತೊಂದರೆ ಆಗಬಹುದು. ಹಾಗಾಗಿ ಎಲ್ಲರೊಂದಿಗೂ ಜಾಗರೂಕರಾಗಿರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಈ ಗ್ರಹಣದಿಂದ ಹೊಸ ಕೆಲಸದ ಆರಂಭ ಮಾಡ ಬಹುದು. ಮುಂದಿನ ದಿನದ ಭವಿಷ್ಯದ ಬಗ್ಗೆ ಮಾರ್ಗದರ್ಶನ ಸಿಗಬಹುದು. ಆದರೆ ಹಣಕಾಸಿನ ವ್ಯವಹಾರ ಬಗ್ಗೆ ಜಾಗೃತೆ ವಹಿಸಬೇಕು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಅತ್ಯುತ್ತಮವಾದ ದಿನ ವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗತ್ತದೆ. ನಿಮಗೆ ಅತೀ ಹೆಚ್ಚಿನ ಸುಖ ಪ್ರಾಪ್ತಿ ಯಾದಾಗ ಬೇರೆಯವರು ಸಹಿಸಲಾರದೇ ಇರಬಹುದು. ಹಾಗಾಗಿ ಯಾವುದೇ ಧನ ಲಾಭ ಆದಾಗ ಗೌಪ್ಯತೆಯಿಂದ ಇಟ್ಟುಕೊಳ್ಳಲು ಪ್ರಯತ್ನ ಮಾಡಿ. ಹಾಗಾಗಿ ಈ ಬಗ್ಗೆ ಜಾಗೃತಿ ವಹಿಸಿ.
ಇದನ್ನು ಓದಿ:Vastu Tips: ಮಲಗುವಾಗ ತಲೆ ಯಾವ ದಿಕ್ಕಿಗೆ ಇಟ್ಟರೆ ಶುಭ ಗೊತ್ತೇ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗ್ರಹಣ ಸಂಭವಿಸುವುದರಿಂದ ಮುಖ್ಯ ಕೆಲಸ ಅಥವಾ ಪ್ರಾಜೆಕ್ಟ್ ಕೊನೆಗೊಳ್ಳಬಹುದು. ಇನ್ನೊಂದು ದೊಡ್ಡ ಹುದ್ದೆಯ ಆರಂಭ ನಿಮಗೆ ಆಗಲಿದೆ. ಇದ್ದಂತಹ ಮುಖ್ಯ ಅಡೆತಡೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಎಲ್ಲ ಕೆಲಸ ಕಾರ್ಯಗಳಲ್ಲಿ ನಿಮಗೆ ಒಳ್ಳೆಯದೇ ಆಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಭಾಗ್ಯ ಸ್ಥಾನದಲ್ಲಿ ಗ್ರಹಣ ಆಗುವುದರಿಂದ ಕೆಲಸ ಕಷ್ಟ ಆಗಬಹುದು. ತಂದೆ ಅಥವಾ ತಂದೆಯ ಸ್ಥಾನದಲ್ಲಿ ಇರುವವರು ನಿಮ್ಮನ್ನು ಬಿಟ್ಟು ಹೋಗ ಬಹುದು. ನಿಮ್ಮ ಗುರುವಿನಿಂದಲೇ ನಿಮಗೆ ತೊಂದರೆ ಆಗಬಹುದು. ಯಾವುದೇ ವಿಚಾರನ್ನು ನೀವು ಕೂಲಂಕುಷವಾಗಿ ವಾಗಿ ನೋಡಿ ನಿರ್ಧಾರ ಮಾಡಬೇಕಾಗುತ್ತದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಪಾರ್ಟ್ನರ್ ಶೀಪ್ ವ್ಯವಹಾರ ಅಥವಾ ಕುಟುಂಬದಲ್ಲಿ ತೊಂದರೆ ಆಗಬಹುದು. ಮುಖ್ಯವಾದ ವಿಚಾರದಲ್ಲಿ ಒಡಕು, ಆರೋಗ್ಯದಲ್ಲಿ ಹೆಚ್ಚಿನ ಗಮನ ವಹಿಸಬೇಕು.
ಮೀನ ರಾಶಿ: ಮೀನ ರಾಶಿ ಅವರಿಗೆ ಸಪ್ತಮ ಸ್ಥಾನದಲ್ಲಿ ಗ್ರಹಣ ಆಗಿರುವುದರಿಂದ ಇದ್ದಂತಹ ಒಂದು ತೊಂದರೆ ಬಗೆಹರಿದರೆ ಇನ್ನೊಂದು ರೀತಿಯ ಸಮಸ್ಯೆ ಬರಬಹುದು. ಸ್ನೇಹಿತರಿಂದ, ಆತ್ಮೀಯರಿಂದ ಕಿರಿ ಕಿರಿ ಆಗಬಹುದು.