ಆದರೆ, ಕಾಮಾಂಧರಿಗೆ ಇಂಥ ನೀತಿಪಾಠವು ಹೇಗೆ ತಾನೇ ನಾಟೀತು?! ಮನೆಮಗಳ ಮೇಲೆ ಹಾದಿ ಬೀದಿಯ ಪುಂಡರು-ಪೋಕರಿಗಳು ಕಣ್ಣುಹಾಕಿ ಕಿರಿಕಿರಿ ನೀಡಿದರೆ, ಲೈಂಗಿಕ ದೌರ್ಜನ್ಯಕ್ಕೆ ಮುಂದಾ ದರೆ, ಅವರನ್ನು ಬಡಿದೋಡಿಸಿ ಸ್ವಂತ ಮಗಳ ಪಾಲಿಗೆ ಗುರಾಣಿಯಾಗಬೇಕಾದ ಅಪ್ಪನೇ ಅವಳನ್ನು ಹುರಿದು ಮುಕ್ಕುವ ಹದ್ದಾಗಿ ಪರಿಣಮಿಸಿದರೆ, ಆಕೆ ಯಾರನ್ನು ಆಪ್ತರಕ್ಷಕ ಎಂದಾಳು?! ತನ್ನ ಜನ್ಮವನ್ನೇ ಛಿದ್ರಗೊಳಿಸುವ ಅಪ್ಪನನ್ನು ಮಗಳು ಹೇಗೆ ತಾನೇ ‘ಜನ್ಮದಾತ’ ಎಂದಾಳು, ‘ಅಪ್ಪಾ’ ಎಂದು ಬಾಯಿತುಂಬಾ ಕರೆದಾಳು?! ಛೇ, ಕುರುಳಿನ ಕುಡಿಯ ಮೇಲೆಯೇ ಕೇಡುಬಗೆಯುವ ಇಂಥ ದುರುಳರಿಗೆ ಧಿಕ್ಕಾರವಿರಲಿ...
ಪೋಕ್ಸೋ ಕಾಯಿದೆಯಡಿ ದಾಖಲಾಗಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅಪರಾಧಿ ತಂದೆಗೆ 5 ವರ್ಷಗಳ ಸಾದಾ ಜೈಲುಶಿಕ್ಷೆಯನ್ನು ವಿಧಿಸಿದೆ. ‘ಕಾಮಾತುರಾಣಾಂ ನ ಭಯಂ, ನ ಲಜ್ಜಾ’ ಎಂಬ ಗ್ರಹಿಕೆಗೆ ಪುಷ್ಟಿ ನೀಡುವಂತೆ ನಡೆದುಕೊಂಡಿರುವ ಈ ಆಸಾಮಿ, ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂಬ ಶ್ಲೋಕವನ್ನು ಪ್ರಾಯಶಃ ಕೇಳಿಸಿ ಕೊಂಡಿಲ್ಲ ಎನಿಸುತ್ತದೆ.
ಇದನ್ನೂ ಓದಿ: Vishwavani Editorial: ಮೋದಿ ಮೋಡಿ ಸ್ಮರಣಾರ್ಹ
‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂಬುದು ಈ ಶ್ಲೋಕದ ಸ್ಥೂಲ ಅರ್ಥ. ಮಹಿಳೆಯರಿಗೆ ನೀಡಬೇಕಾದ ಗೌರವ ಮತ್ತು ಪ್ರಾಮುಖ್ಯದ ಕುರಿತು ಒತ್ತಿ ಹೇಳುವ ಈ ಶ್ಲೋಕವು, ಮಹಿಳೆಯರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಪ್ರಯತ್ನಗಳು ಫಲಪ್ರದವಾಗುವುದಿಲ್ಲ ಎಂದೂ ತಿಳಿ ಹೇಳುತ್ತದೆ.
ಆದರೆ, ಕಾಮಾಂಧರಿಗೆ ಇಂಥ ನೀತಿಪಾಠವು ಹೇಗೆ ತಾನೇ ನಾಟೀತು?! ಮನೆಮಗಳ ಮೇಲೆ ಹಾದಿ ಬೀದಿಯ ಪುಂಡರು-ಪೋಕರಿಗಳು ಕಣ್ಣುಹಾಕಿ ಕಿರಿಕಿರಿ ನೀಡಿದರೆ, ಲೈಂಗಿಕ ದೌರ್ಜನ್ಯಕ್ಕೆ ಮುಂದಾ ದರೆ, ಅವರನ್ನು ಬಡಿದೋಡಿಸಿ ಸ್ವಂತ ಮಗಳ ಪಾಲಿಗೆ ಗುರಾಣಿಯಾಗಬೇಕಾದ ಅಪ್ಪನೇ ಅವಳನ್ನು ಹುರಿದು ಮುಕ್ಕುವ ಹದ್ದಾಗಿ ಪರಿಣಮಿಸಿದರೆ, ಆಕೆ ಯಾರನ್ನು ಆಪ್ತರಕ್ಷಕ ಎಂದಾಳು?! ತನ್ನ ಜನ್ಮ ವನ್ನೇ ಛಿದ್ರಗೊಳಿಸುವ ಅಪ್ಪನನ್ನು ಮಗಳು ಹೇಗೆ ತಾನೇ ‘ಜನ್ಮದಾತ’ ಎಂದಾಳು, ‘ಅಪ್ಪಾ’ ಎಂದು ಬಾಯಿತುಂಬಾ ಕರೆದಾಳು?! ಛೇ, ಕುರುಳಿನ ಕುಡಿಯ ಮೇಲೆಯೇ ಕೇಡುಬಗೆಯುವ ಇಂಥ ದುರುಳರಿಗೆ ಧಿಕ್ಕಾರವಿರಲಿ...