ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AB de Villiers: 40ರ ಹರೆಯದಲ್ಲೂ ಎಬಿ ಡಿವಿಲಿಯರ್ಸ್ ಸ್ಟನ್ನಿಂಗ್ ಫೀಲ್ಡಿಂಗ್‌; ಇಲ್ಲಿದೆ ವಿಡಿಯೊ

AB de Villiers stunning fielding: ಭಾರತ ಪರ ಕನ್ನಡಿಗ ಸ್ಟುವರ್ಟ್‌ ಬಿನ್ನಿ ಅಜೇಯ 37 ರನ್‌ ಬಾರಿಸಿದ್ದು ತಂಡದ ಪರ ದಾಖಲಾದ ಅತ್ಯಧಿಕ ಮೊತ್ತ. ದಕ್ಷಿಣ ಆಫ್ರಿಕಾ ಪರ ವಿಲಿಯರ್ಸ್‌ ಅಜೇಯ 63 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ ಮತ್ತು 3 ಬೌಂಡರಿ ಸಿಡಿಯಿತು. ಜೆಜೆ ಸ್ಮಟ್ಸ್ 17 ಎಸೆತಗಳಿಂದ 30 ರನ್‌ ಚಚ್ಚಿರು.

ಲಂಡನ್‌: ಮಂಗಳವಾರ ರಾತ್ರಿ ನಡೆದಿದ್ದ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (WCL 2025) ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಡಿಎಲ್‌ಎಸ್‌ ನಿಯಮದಂತೆ 88 ರನ್‌ ಅಂತರದಿಂದ ಗೆದ್ದು ಬೀಗಿತು. ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್(AB de Villiers) ಅವರು ಬೌಂಡರಿ ಲೈನ್‌ನಲ್ಲಿ ನಡೆಸಿದ ಸ್ಟನ್ನಿಂಗ್ ಫೀಲ್ಡಿಂಗ್‌ ಪಂದ್ಯದ ಪ್ರಮುಖ ಆಕರ್ಷಣೆಯಾಗಿತು. ಅವರ ಈ ಫೀಲ್ಡಿಂಗ್‌ ಕಂಡು ನೆರೆದಿದ್ದ ಪ್ರೇಕ್ಷಕರು ಮಾತ್ರವಲ್ಲದೆ ಕ್ರಿಕೆಟ್‌ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಅವರ ಈ ಫೀಲ್ಡಿಂಗ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾರತದ ಬ್ಯಾಟಿಂಗ್‌ ಇನಿಂಗ್ಸ್‌ನ ವೇಳೆ ಯೂಸುಫ್‌ ಪಠಾಣ್‌ ಬಾರಿಸಿದ ಚೆಂಡನ್ನು ಬೌಂಡರಿ ಲೈನ್‌ ಬಳಿ ಜಾರುತ್ತಾ ಸಾಗಿ ಕ್ಯಾಚ್‌ ಪಡೆದ ವಿಲಿಯರ್ಸ್‌ ಇನ್ನೇನು ಬೌಂಡರಿ ಗೆರೆಗೆ ತಾಗುತ್ತೇನೆ ಎಂಬ ಹೊತ್ತಿನಲ್ಲಿ ಚೆಂಡನ್ನು ಮೈದಾನದ ಒಳಗಡೆ ಎಸೆದು ಸಹ ಆಟಗಾರ ಸರೆಲ್ ಎರ್ವೀ ಕ್ಯಾಚ್‌ ಹಿಡಿಯುಂತೆ ಮಾಡಿರು. 40ರ ಹರೆಯದಲ್ಲೂ 20ರ ಯುವಕನಂತೆ ಫೀಲ್ಡಿಂಗ್‌ ನಡೆಸಿದ ವಿಲಿಯರ್ಸ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದಾರೆ.



ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ ಡಿವಿಲಿಯರ್ಸ್ ಅವರ ಅಜೇಯ ಅರ್ಧಶತಕ ಮತ್ತು ಕೆಳ ಕ್ರಮಾಂಕದಲ್ಲಿ ಜೆಜೆ ಸ್ಮಟ್ಸ್ ಬಿರುಸಿನ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ ಬರೋಬ್ಬರಿ 208 ರನ್‌ ಕಲೆಹಾಕಿತು. ಭಾರತದ ಬ್ಯಾಟಿಂಗ್‌ ವೇಳೆ ಮಳೆ ಮಳೆ ಅಡ್ಡಿಪಡಿಸಿತು. ಭಾರತ 18.2 ಓವರ್‌ನಲ್ಲಿ 9 ವಿಕೆಟ್‌ಗೆ 111 ರನ್‌ ಗಳಿಸಿದ್ದ ವೇಳೆ ಜೋರಾಗಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ಕೊನೆಗೆ ಡಕ್‌ವರ್ತ್‌-ಲೂಯಿಸ್‌ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ವಿಜಯೀ ಎಂದು ನಿರ್ಧರಿಸಲಾಯಿತು.

ಭಾರತ ಪರ ಕನ್ನಡಿಗ ಸ್ಟುವರ್ಟ್‌ ಬಿನ್ನಿ ಅಜೇಯ 37 ರನ್‌ ಬಾರಿಸಿದ್ದು ತಂಡದ ಪರ ದಾಖಲಾದ ಅತ್ಯಧಿಕ ಮೊತ್ತ. ದಕ್ಷಿಣ ಆಫ್ರಿಕಾ ಪರ ವಿಲಿಯರ್ಸ್‌ ಅಜೇಯ 63 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ ಮತ್ತು 3 ಬೌಂಡರಿ ಸಿಡಿಯಿತು. ಜೆಜೆ ಸ್ಮಟ್ಸ್ 17 ಎಸೆತಗಳಿಂದ 30 ರನ್‌ ಚಚ್ಚಿರು.