ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Sharma: ದಿಗ್ಗಜ ಜಯಸೂರ್ಯ ಏಷ್ಯಾಕಪ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮ

25 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್‌, ಅಂತಾರಾಷ್ಟ್ರೀಯ ಟಿ20ಯಲ್ಲಿ 5ನೇ ಬಾರಿಗೆ 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಸಿಡಿಸಿದ ಹಿರಿಮೆಗೆ ಪಾತ್ರರಾದರು. ಕೇವಲ 37 ಎಸೆತದಲ್ಲಿ 75 ರನ್‌ ಚಚ್ಚಿದರು. ಅವರ ಈ ಬಿರುಸಿನ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ ದಾಖಲಾಯಿತು.

ದುಬೈ: ಈ ಬಾರಿಯ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್‌ ಮೂಲಕ ಗಮನಸೆಳೆಯುತ್ತಿರುವ ಟೀಮ್‌ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮ(Abhishek Sharma) ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಬುಧವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತ ಸಿಡಿಸುವ ಮೂಲಕ ಯುವರಾಜ್‌ ಸಿಂಗ್‌ ಮತ್ತು ಲಂಕಾದ ದಿಗ್ಗಜ ಸನತ್‌ ಜಯಸೂರ್ಯ ಅವರ ದಾಖಲೆಯನ್ನು ಮುರಿದಿದ್ದಾರೆ.

25 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್‌, ಅಂತಾರಾಷ್ಟ್ರೀಯ ಟಿ20ಯಲ್ಲಿ 5ನೇ ಬಾರಿಗೆ 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಸಿಡಿಸಿದ ಹಿರಿಮೆಗೆ ಪಾತ್ರರಾದರು. ಕೇವಲ 37 ಎಸೆತದಲ್ಲಿ 75 ರನ್‌ ಚಚ್ಚಿದರು. ಅವರ ಈ ಬಿರುಸಿನ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ ದಾಖಲಾಯಿತು.

ಅಭಿಷೇಕ್‌ ಶರ್ಮಾ ಈ ಏಷ್ಯಾಕಪ್‌ನಲ್ಲಿ ಆಡಿರುವ ಐದು ಇನ್ನಿಂಗ್ಸ್‌ಗಳಲ್ಲಿ ಒಟ್ಟು 17 ಸಿಕ್ಸರ್‌ ಸಿಡಿಸಿದ್ದಾರೆ. ಈ ಮೂಲಕ ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್‌ ಸಿಡಿಸಿದ ಮೊಲ ಬ್ಯಾಟರ್‌ ಎನಿಸಿಕೊಂಡರು. ಇದುವರೆಗೆ ಈ ದಾಖಲೆ ಸನತ್‌ ಜಯಸೂರ್ಯ ಹೆಸರಿನಲ್ಲಿತ್ತು. ಜಯಸೂರ್ಯ 2008ರಲ್ಲಿ 14 ಸಿಕ್ಸರ್‌ ಬಾರಿಸಿದ್ದರು. 13 ಸಿಕ್ಸರ್‌ ಬಾರಿಸಿರುವ ರೋಹಿತ್‌ ಶರ್ಮ ಮೂರನೇ ಸ್ಥಾನಕ್ಕಿಳಿದರು. ಯುಎಇನ ನಿಧಾನಗತಿ ಪಿಚ್‌ಗಳಲ್ಲಿ ಅಭಿಷೇಕ್‌ ಲೀಲಾಜಾಲವಾಗಿ ಬ್ಯಾಟಿಂಗ್‌ ನಡೆಸುತ್ತಿರುವುದು ದೊಡ್ಡ ಸಾಧನೆಯೇ ಸರಿ.

ಇದನ್ನೂ ಓದಿ Asia Cup 2025: 2007ರ ಘಟನೆ ನೆನೆದ ಪಾಕಿಸ್ತಾನವನ್ನು ಟೀಕಿಸಿದ ಇರ್ಫಾನ್‌ ಪಠಾಣ್!

ಏಷ್ಯಾಕಪ್ ಆವೃತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

ಅಭಿಷೇಕ್‌ ಶರ್ಮ-17 ಸಿಕ್ಸರ್‌

ಸನತ್‌ ಜಯಸೂರ್ಯ-14 ಸಿಕ್ಸರ್‌

ರೋಹಿತ್‌ ಶರ್ಮ-13 ಸಿಕ್ಸರ್‌

ಶಾಹೀದ್‌ ಅಫ್ರೀದಿ- 12 ಸಿಕ್ಸರ್‌

ರಹಮಾನುಲ್ಲಾ ಗುರ್ಬಾಜ್-12 ಸಿಕ್ಸರ್‌