ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anurag Thakur: ಬಿಎಫ್‌ಐ ಅಧ್ಯಕ್ಷ ಸ್ಥಾನಕ್ಕೆ ಅನುರಾಗ್ ಠಾಕೂರ್ ಮತ್ತೆ ನಾಮನಿರ್ದೇಶನ

ಹಿಂದಿನ ಪದಾಧಿಕಾರಗಳ ಅಧಿಕಾರವಧಿ ಫೆ.2ರಂದೇ ಅಂತ್ಯವಾಗಿತ್ತು. ಬಳಿಕ ಮಾ.28ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಹಲವರು ಅಪಸ್ವರ ಎತ್ತಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಮುಂದೂಡಿಕೆಯಾಗಿತ್ತು. ಬಳಿಕ ವಿಶ್ವ ಬಾಕ್ಸಿಂಗ್ ಸಮಿತಿ ಮಧ್ಯಂತರ ಸಮಿತಿ ರಚಿಸಿ, ಆ.31ರೊಳಗೆ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು.

ನವದೆಹಲಿ: ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಮತ್ತೊಮ್ಮೆ ಭಾರತೀಯ ಬಾಕ್ಸಿಂಗ್ ಫೆಡರೇಶನ್ (BFI) ಅಧ್ಯಕ್ಷರಾಗುವ ರೇಸ್‌ನಲ್ಲಿದ್ದಾರೆ. ಮಧ್ಯಂತರ ಸಮಿತಿಯು ಇತ್ತೀಚೆಗೆ ಮಾಡಿದ ಸಾಂವಿಧಾನಿಕ ಬದಲಾವಣೆಗಳ ವಿರುದ್ಧ ಅವರ ಬಣವು ಹೊಸ ಕಾನೂನು ಸವಾಲನ್ನು ಸಲ್ಲಿಸಿದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.

ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ (HPBA) ಆಗಸ್ಟ್ 21 ರಂದು ನಡೆಯಲಿರುವ ಬಿಎಫ್‌ಐ ಚುನಾವಣೆಗೆ ಠಾಕೂರ್ ಮತ್ತು ಅದರ ಅಧ್ಯಕ್ಷ ರಾಜೇಶ್ ಭಂಡಾರಿ ಇಬ್ಬರನ್ನೂ ತನ್ನ ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಿದೆ. ಮೂಲತಃ ಮಾರ್ಚ್ 28 ರಂದು ನಿಗದಿಯಾಗಿದ್ದ ಚುನಾವಣೆಗೆ ಠಾಕೂರ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಬಿಎಫ್‌ಐ ಅಧ್ಯಕ್ಷ, ಅಜಯ್ ಸಿಂಗ್ ಹೊರಡಿಸಿದ 60 ಸದಸ್ಯರ ಎಲೆಕ್ಟೊರಲ್‌ ಕಾಲೇಜು ಪಟ್ಟಿದಿಂದ ಅನುರಾಗ್ ಅವರ ಹೆಸರನ್ನು ಕೈಬಿಡಲಾಗಿತ್ತು.

ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಿಎಫ್ಐನ ತಾತ್ಕಾಲಿಕ ಸಮಿತಿ ಮುಖ್ಯಸ್ಥ ಹುದ್ದೆಗೆ ಅಜಯ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ. ವಿಶ್ವ ಬಾಕ್ಸಿಂಗ್ ಅಧ್ಯಕ್ಷ ಬೋರಿಸ್‌ ವಾನ್‌ ಡೆರ್‌ ವೊರ್ಸ್ಟ್‌ ಚುನಾವಣೆ ಮೇಲ್ವಿಚಾರಣೆ ನಡೆಸಲಿದ್ದಾರೆ. ಬಿಎಫ್‌ಐ ಅಧ್ಯಕ್ಷರಾಗಿ ಅಜಯ್‌ ಸಿಂಗ್‌ ಈಗಾಗಲೇ ತಲಾ 4 ವರ್ಷಗಳ ಎರಡು ಅವಧಿಯನ್ನು ಪೂರ್ಣಗೊಳಿಸಿದ್ದು, 3ನೇ ಹಾಗೂ ಕೊನೆಯ ಅವಧಿಗೆ ಸಿದ್ಧರಾಗಿದ್ದಾರೆ.

ಇದನ್ನೂ ಓದಿ ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ಹೊಸ ಕಾನೂನು: ಅನುರಾಗ್ ಠಾಕೂರ್

ಹಿಂದಿನ ಪದಾಧಿಕಾರಗಳ ಅಧಿಕಾರವಧಿ ಫೆ.2ರಂದೇ ಅಂತ್ಯವಾಗಿತ್ತು. ಬಳಿಕ ಮಾ.28ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಹಲವರು ಅಪಸ್ವರ ಎತ್ತಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಮುಂದೂಡಿಕೆಯಾಗಿತ್ತು. ಬಳಿಕ ವಿಶ್ವ ಬಾಕ್ಸಿಂಗ್ ಸಮಿತಿ ಮಧ್ಯಂತರ ಸಮಿತಿ ರಚಿಸಿ, ಆ.31ರೊಳಗೆ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು.