ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ(Indian cricket team) ನೂತನ ಜೆರ್ಸಿ ಪ್ರಾಯೋಜಕರಾಗಿ ಅಪೊಲೊ ಟೈಯರ್ಸ್(Apollo Tyres) ಆಯ್ಕೆಯಾಗಿದೆ. ಈ ಒಪ್ಪಂದವು 2027 ರವರೆಗೆ ಇರಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ಹಂತ ಕಾರಣ, ಡ್ರೀಮ್ 11 ಜತೆಗಿನ ಒಪ್ಪಂದವನ್ನು ಬಿಸಿಸಿಐ ಕೊನೆಗೊಳಿಸಿತ್ತು. ಹೀಗಾಗಿ ಬಿಸಿಸಿಐ ನೂತನ ಜೆರ್ಸಿ ಪ್ರಾಯೋಜಕತ್ವಕ್ಕೆ ಅರ್ಜಿ ಆಹ್ವಾನಿಸಿತ್ತು. ಇದೀಗ ಅಪೊಲೊ ಟೈಯರ್ಸ್ ಜತೆಗೆ ಒಪ್ಪಂದ ಅಧಕೃತವಾಗಿದೆ.
ಒಪ್ಪಂದದ ಪ್ರಕಾರ ಅಪೊಲೊ ಟೈಯರ್ಸ್ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 4.5 ಕೋಟಿ ರೂ.ಗಳನ್ನು ಪಾವತಿಸಲಿದೆ. ಈ ಹಿಂದೆ ಡ್ರೀಮ್ 11 ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯ ಹಾಗೂ ಐಸಿಸಿ, ಎಸಿಸಿ ಟೂರ್ನಿಗಳ ಪ್ರತಿ ಪಂದ್ಯಕ್ಕೆ ಕ್ರಮವಾಗಿ ₹3.17 ಕೋಟಿ ಹಾಗೂ ₹1.12 ಕೋಟಿ ಪಾವತಿಸುತ್ತಿತ್ತು.
ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಹಿಳಾ ತಂಡಕ್ಕೂ ಪ್ರಾಯೋಜಕರಿಲ್ಲ. ಸೆಪ್ಟೆಂಬರ್ 30 ರಿಂದ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮುಂಬರುವ ಮಹಿಳಾ ವಿಶ್ವಕಪ್‌ಗಾಗಿ ಮಹಿಳಾ ತಂಡವು ತಮ್ಮ ಜೆರ್ಸಿಯಲ್ಲಿ ಹೊಸ ಪ್ರಾಯೋಜಕರನ್ನು ಹೊಂದಿರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ Asia Cup 2025: ಭಾರತ ಸೂಪರ್-4ಗೆ ಎಂಟ್ರಿ; ಪಾಕ್ ಲೆಕ್ಕಾಚಾರ ಹೇಗಿದೆ?