ನವದೆಹಲಿ: ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳಲಿರುವ ತಮ್ಮ 'ಎ' ತಂಡಗಳನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ಎ ತಂಡವು ಎರಡು ಅನಧಿಕೃತ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಭಾರತ ಎ ತಂಡವನ್ನು ಎದುರಿಸಲಿದೆ. ನಾಲ್ಕು ದಿನಗಳ ತಂಡಕ್ಕೆ ಸ್ಯಾಮ್ ಕಾನ್ಸ್ಟಾಸ್ ಸೇರ್ಪಡೆಯಾಗಿದಾರೆ. ಟೆಸ್ಟ್ ಪಂದ್ಯಗಳು ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಏಕದಿನ ಪಂದ್ಯಗಳು ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿವೆ.
19 ವರ್ಷದ ಸ್ಯಾಮ್ ಕಾನ್ಸ್ಟಾಸ್ 'ಎ' ತಂಡದಲ್ಲಿರುವ ಏಕೈಕ ಟೆಸ್ಟ್ ತಂಡದ ಆಟಗಾರನಾಗಿದ್ದು, 2025 ರ ಕೊನೆಯ ಹಂತದಲ್ಲಿ ಆಶಸ್‌ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಈ ಸರಣಿ ಅವರಿಗೆ ಬಹುಮುಖ್ಯ ಎನಿಸಿದೆ. ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ನಾಥನ್ ಮೆಕ್‌ಸ್ವೀನಿ ನಾಲ್ಕು ದಿನಗಳ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ತನ್ವೀರ್ ಸಂಘ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಎ ಸರಣಿಯ ಮೂವರು ತಾರೆಗಳಾದ ಜೇಕ್ ವೆದರಾಲ್ಡ್, ಜೇಸನ್ ಸಂಘ ಮತ್ತು ಮ್ಯಾಥ್ಯೂ ರೆನ್‌ಶಾ ಕೂಡ ಅವಕಾಶ ಪಡೆದಿದ್ದಾರೆ.
"ಉಪಖಂಡದ ಈ ಪ್ರವಾಸ ಯುವ ಆಟಗಾರರಿಗೆ ವಿಶಿಷ್ಟ ಸವಾಲುಗಳನ್ನು ಮತ್ತು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ತೋರಿದರೆ ಭವಿಷ್ಯದ ತಂಡದ ಪ್ರವಾಸಗಳಿಗೆ ಆಯ್ಕೆಯಾಗಬಹುದು" ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಎ ನಾಲ್ಕು ದಿನಗಳ ತಂಡ
ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಜ್ಯಾಕ್ ಎಡ್ವರ್ಡ್ಸ್, ಆರನ್ ಹಾರ್ಡಿ, ಕ್ಯಾಂಪ್‌ಬೆಲ್ ಕೆಲ್ಲಾವೇ, ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್‌ಸ್ವೀನಿ, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಫರ್ಗಸ್ ಓ'ನೀಲ್, ಆಲಿವರ್ ಪೀಕ್, ಜೋಶ್ ಫಿಲಿಪ್, ಕೋರಿ ರೋಚಿಸಿಯೋಲಿ, ಲಿಯಾಮ್ ಸ್ಕಾಟ್.
ಆಸ್ಟ್ರೇಲಿಯಾ ಎ ಏಕದಿನ ತಂಡ
ಕೂಪರ್ ಕಾನೊಲಿ, ಹ್ಯಾರಿ ಡಿಕ್ಸನ್, ಜ್ಯಾಕ್ ಎಡ್ವರ್ಡ್ಸ್, ಸ್ಯಾಮ್ ಎಲಿಯಟ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಮೆಕೆಂಜಿ ಹಾರ್ವೆ, ಟಾಡ್ ಮರ್ಫಿ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಲಾಚಿ ಶಾ, ಟಾಮ್ ಸ್ಟ್ರಾಕರ್, ವಿಲ್ ಸದರ್ಲ್ಯಾಂಡ್, ಕ್ಯಾಲಮ್ ವಿಡ್ಲರ್