ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs SA: ಆಸೀಸ್‌ ವಿರುದ್ಧ 276 ರನ್ ಹೀನಾಯ ಸೋಲು ಕಂಡ ದಕ್ಷಿಣ ಆಫ್ರಿಕಾ

ಹೆಡ್ 103 ಎಸೆತಗಳಲ್ಲಿ 142 ರನ್ ಗಳಿಸಿದರೆ, ಮಿಚೆಲ್‌ ಮಾರ್ಷ್ 100 ರನ್, ಕ್ಯಾಮರಾನ್‌ ಕೇವಲ 55 ಎಸೆತಗಳಲ್ಲಿ ಅಜೇಯ 118 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಅಲೆಕ್ಸ್‌ ಕ್ಯಾರಿ 37 ಎಸೆತಗಳಿಂದ ಅಜೇಯ 50 ರನ್‌ ಬಾರಿಸಿದರು. ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 49 ರನ್‌ ಬಾರಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರರ್‌.

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(AUS vs SA) ತಂಡ 276 ರನ್‌ಗಳ ಹೀನಾಯ ಸೋಲು ಕಂಡಿದೆ. ಇದು ಹರಿಣ ಪಡೆಗೆ ಏಕದಿನ ಇತಿಹಾಸದಲ್ಲಿ ಎದುರಾದ ಅತಿ ದೊಡ್ಡ ಸೋಲು. 2023 ರಲ್ಲಿ ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಭಾರತದ ವಿರುದ್ಧ 243 ​​ರನ್‌ಗಳಿಂದ ದಕ್ಷಿಣ ಆಫ್ರಿಕಾ ಸೋತಿದ್ದು, ಈ ಹಿಂದಿನ ಅತಿ ದೊಡ್ಡ ಸೋಲಾಗಿತ್ತು. ಅಂತಿಮ ಪಂದ್ಯ ಸೋತರೂ ಕೂಡ ಸರಣಿಯನ್ನು ದಕ್ಷಿಣ ಆಫ್ರಿಕಾ 1-2 ಅಂತರದಿಂದ ಜಯಿಸಿತು.

ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆಸೀಸ್‌, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್ ಬಾರಿಸಿದ ತ್ರಿವಳಿ ಶತಕದ ನೆರವಿನಿಂದ ಕೇವಲ ಎರಡು ವಿಕೆಟ್‌ನಷ್ಟಕ್ಕೆ 431 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೂಪರ್ ಕೊನೊಲಿ ಸ್ಪಿನ್‌ ಬಲೆಗೆ ಬಿದ್ದು 24.5 ಓವರ್‌ಗಳಲ್ಲಿ 155ರನ್‌ಗೆ ಸರ್ವಪತನ ಕಂಡಿತು.

ಹೆಡ್ 103 ಎಸೆತಗಳಲ್ಲಿ 142 ರನ್ ಗಳಿಸಿದರೆ, ಮಿಚೆಲ್‌ ಮಾರ್ಷ್ 100 ರನ್, ಕ್ಯಾಮರಾನ್‌ ಕೇವಲ 55 ಎಸೆತಗಳಲ್ಲಿ ಅಜೇಯ 118 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ ಅಲೆಕ್ಸ್‌ ಕ್ಯಾರಿ 37 ಎಸೆತಗಳಿಂದ ಅಜೇಯ 50 ರನ್‌ ಬಾರಿಸಿದರು. ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 49 ರನ್‌ ಬಾರಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರರ್‌.

ಇದನ್ನೂ ಓದಿ ರಾಘ್ವಿ ಬಿಸ್ಟ್ ಅವಳಿ ಅರ್ಧಶತಕ ವ್ಯರ್ಥ: ಆಸೀಸ್‌ ಮಹಿಳಾ ಎ ತಂಡದ ವಿರುದ್ಧ ಭಾರತಕ್ಕೆ ಸೋಲು

ದಕ್ಷಿಣ ಆಫ್ರಿಕಾದ ಅತಿ ದೊಡ್ಡ ಸೋಲಿನ ಅಂತರ (ರನ್‌ಗಳಿಂದ)

276 ಆಸೀಸ್‌ ವಿರುದ್ಧ, 2025ರಲ್ಲಿ

243 ಭಾರತ ವಿರುದ್ಧ, 2023ರಲ್ಲಿ

182 ಪಾಕಿಸ್ತಾನ ವಿರುದ್ಧ, 2002 ರಲ್ಲಿ

180 ಶ್ರೀಲಂಕಾ ವಿರುದ್ಧ, 2013ರಲ್ಲಿ