ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ(BCCI Chief Selector) ಅಜಿತ್ ಅಗರ್ಕರ್(Ajit Agarkar) ಅವರ ಅಧಿಕಾರಾವಧಿಯನ್ನು ಬಿಸಿಸಿಐ(Ajit Agarkar) ಜೂನ್ 2026 ರವರೆಗೆ ವಿಸ್ತರಿಸಿದೆ ಎಂದು ವರದಿಯಾಗಿದೆ. ಅವರ ನಾಯಕತ್ವದಲ್ಲಿ ಭಾರತ ತಂಡದ ಬಲವಾದ ಪ್ರದರ್ಶನಗಳು ಮುಂಬರುವ ಕ್ರಿಕೆಟ್ ಸವಾಲುಗಳ ನಡುವೆ ಸ್ಥಿರತೆಯನ್ನು ಸೂಚಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. 2023ರ 4ರಂದು ಅಗರ್ಕರ್ 2 ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ಬಿಸಿಸಿಐ(BCCI) ಮೂಲಗಳ ಪ್ರಕಾರ, 2026ರ ತವರಿನ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಆಯ್ಕೆ ಮಾಡುವವರೆಗೆ ಅಗರ್ಕರ್ ಹುದ್ದೆಯಲ್ಲಿ ಮುಂದುವರಿಯಲಿದಾರೆ ಎನ್ನಲಾಗಿದೆ.
ಎರಡು ಐಸಿಸಿ ಟ್ರೋಫಿ ವಿಜೇತ (ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ) ತಂಡವನ್ನು ಮತ್ತು ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ಟೆಸ್ಟ್, ಟಿ20), ಆರ್. ಅಶ್ವಿನ್ (ಅಂತಾರಾಷ್ಟ್ರೀಯ ಕ್ರಿಕೆಟ್) ನಿವೃತ್ತಿಯಂಥ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಸರಣಿಯ ತಂಡ ಆಯ್ಕೆಯಲ್ಲಿ ಅಗರ್ಕರ್ ಸೈ ಎನಿಸಿಕೊಂಡಿದ್ದರು. ಈ ಎಲ್ಲ ಕಾರಣದಿಂದ ಅವರನ್ನು ಮತ್ತೆ ಎರಡು ವರ್ಷಗಳ ಅವಧಿಗೆ ಈ ಸ್ಥಾನದಲ್ಲಿ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ.
ಬಿಸಿಸಿಐ ಅವರ ಒಪ್ಪಂದವನ್ನು ಜೂನ್ 2026 ರವರೆಗೆ ವಿಸ್ತರಿಸಿತ್ತು. ಮತ್ತು ಅವರು ಕೆಲವು ತಿಂಗಳ ಹಿಂದೆಯೇ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರು
ಪ್ರಸ್ತುತ ಆಯ್ಕೆ ಸಮಿತಿಯಲ್ಲಿ ಎಸ್.ಎಸ್. ದಾಸ್, ಸುಬ್ರೋತೊ ಬ್ಯಾನರ್ಜಿ, ಅಜಯ್ ರಾತ್ರ ಮತ್ತು ಎಸ್. ಶರತ್ ಅವರೊಂದಿಗೆ ಅಗರ್ಕರ್ ಕೂಡ ಇದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಮಿತಿಯಲ್ಲಿನ ಬದಲಾವಣೆಗಳನ್ನು ಪರಿಗಣಿಸಬಹುದು ಎಂದು ವರದಿ ಸೂಚಿಸುತ್ತದೆ. ಶರತ್ ಅವರನ್ನು ಬದಲಾಯಿಸುವ ಸಾಧ್ಯತೆಯಿದೆ. ಆದರೆ ದಾಸ್ ಮತ್ತು ಬ್ಯಾನರ್ಜಿ ಅವರ ಸ್ಥಾನಗಳು ಪರಿಶೀಲನೆಯಲ್ಲಿವೆ. ಸಭೆಯ ನಂತರ, ಆಯ್ಕೆ ಸಮಿತಿಗೆ ಹೊಸ ನೇಮಕಾತಿಗಳಿಗಾಗಿ ಮಂಡಳಿಯು ಅರ್ಜಿಗಳನ್ನು ತೆರೆಯುವ ನಿರೀಕ್ಷೆಯಿದೆ.