ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದಿನಿಂದ ಫಿಫಾ ಕ್ಲಬ್​ ವಿಶ್ವಕಪ್ ಪಂದ್ಯಾವಳಿ; 32 ತಂಡಗಳು ಭಾಗಿ

Club World Cup 2025: ಮುಂದಿನ ವರ್ಷದ ಫಿಫಾ ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯು ಎಲ್ಲ ಆಟಗಾರರಿಗೆ ಅಭ್ಯಾಸ ನಡೆಸಲು ಉತ್ತಮ ವೇದಿಯಾಗಿದೆ. ಇಂಟರ್​ ಮಿಯಾಮಿ, ಪ್ಯಾರಿಸ್​ ಸೈಂಟ್​ ಜಮೈರ್ನ್​, ರಿಯಲ್​ ಮ್ಯಾಡ್ರಿಸ್​, ಬೇಯರ್ನ್​ ಮ್ಯೂನಿಚ್​, ಇಂಟರ್​ ಮಿಲಾನ್​, ಮ್ಯಾಂಚೆಸ್ಟರ್​ ಸಿಟಿ, ಚೆಲ್ಸಿಯಾ, ಜುವೆಂಟಸ್​ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಷ್ಠಿತ ಕ್ಲಬ್​ಗಳಾಗಿವೆ.

ಮಿಯಾಮಿ: ಫುಟ್​ಬಾಲ್​ ಕ್ಲಬ್​ಗಳ ಫಿಫಾ ಕ್ಲಬ್​ ವಿಶ್ವಕಪ್(Club World Cup 2025)​ ಹೊಸ ಸ್ವರೂಪದೊಂದಿಗೆ 21ನೇ ಆವೃತ್ತಿಗೆ ಸಜ್ಜಾಗಿದೆ. ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ನಲ್ಲಿರುವ ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಇಂದಿನಿಂದ(ಜೂನ್ 14) ಆರಂಗೊಳ್ಳುವ ಈ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಈಜಿಪ್ಟ್‌ನ ಅಲ್ ಅಹ್ಲಿ ಮತ್ತು ಲಿಯೋನೆಲ್‌ ಮೆಸ್ಸಿ(Lionel Messi) ನಾಯಕತ್ವದ ಇಂಟರ್ ಮಿಯಾಮಿ(Inter Miami) ತಂಡಗಳು ಸೆಣಸಾಟ ನಡೆಸಲಿದೆ. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ 32 ತಂಡಗಳು ಆಡಲಿದ್ದು, ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ಎಂಟು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಹಿಂದೆ ಗರಿಷ್ಠ 7 ತಂಡಗಳಷ್ಟೇ ಆಡುತ್ತಿದ್ದವು.

ಅಮೆರಿಕದ 12 ತಾಣಗಳಲ್ಲಿ ಒಟ್ಟು 63 ಪಂದ್ಯಗಳು ನಡೆಯಲಿವೆ. ಈಜಿಪ್ಟ್‌ನ ಅಲ್ ಅಹ್ಲಿ ಮತ್ತು ಅಮೆರಿಕದ ಇಂಟರ್ ಮಿಯಾಮಿ ಪಂದ್ಯ ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 5.30ಕ್ಕೆ ಪ್ರಸಾರಗೊಳ್ಳಲಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿವೆ. ಜೂನ್​ 28ರಿಂದ ಜುಲೈ 1ರವರೆಗೆ ಪ್ರಿ ಕ್ವಾರ್ಟರ್​ಫೈನಲ್ಸ್​, ಜುಲೈ 4ಮತ್ತು 5ರಂದು ಕ್ವಾರ್ಟರ್​ಫೈನಲ್ಸ್​, ಜುಲೈ 8-9ರಂದು ಸೆಮಿಫೈನಲ್ಸ್​ ಮತ್ತು ಜುಲೈ 13ರಂದು ಫೈನಲ್​ ನಡೆಯಲಿದೆ.

ಮುಂದಿನ ವರ್ಷದ ಫಿಫಾ ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯು ಎಲ್ಲ ಆಟಗಾರರಿಗೆ ಅಭ್ಯಾಸ ನಡೆಸಲು ಉತ್ತಮ ವೇದಿಯಾಗಿದೆ. ಇಂಟರ್​ ಮಿಯಾಮಿ, ಪ್ಯಾರಿಸ್​ ಸೈಂಟ್​ ಜಮೈರ್ನ್​, ರಿಯಲ್​ ಮ್ಯಾಡ್ರಿಸ್​, ಬೇಯರ್ನ್​ ಮ್ಯೂನಿಚ್​, ಇಂಟರ್​ ಮಿಲಾನ್​, ಮ್ಯಾಂಚೆಸ್ಟರ್​ ಸಿಟಿ, ಚೆಲ್ಸಿಯಾ, ಜುವೆಂಟಸ್​ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಷ್ಠಿತ ಕ್ಲಬ್​ಗಳಾಗಿವೆ.

ಇದನ್ನೂ ಓದಿ FIFA World Cup 2026: ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ಬ್ರೆಜಿಲ್, ಆಸ್ಟ್ರೇಲಿಯಾ

ಭಾರೀ ಬಹುಮಾನ ಮೊತ್ತ

ಟೂರ್ನಿಯ ಒಟ್ಟು ಬಹುಮಾನ ಮೊತ್ತ 8,607 ಕೋಟಿ ರೂ. ಆಗಿದ್ದು, ವಿಜೇತ ತಂಡ 344 ಕೋಟಿ ರೂ. ಬಹುಮಾನ ಮೊತ್ತ ಸಹಿತ ಒಟ್ಟು 1,076 ಕೋಟಿ ರೂ. ಗಳಿಸಲಿದೆ. ಟೂರ್ನಿಯ ಪ್ರತಿ ಜಯಕ್ಕೆ 17.21 ಕೋಟಿ ರೂ. ಮತ್ತು ಪ್ರತಿ ಡ್ರಾಕ್ಕೆ 8.60 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್​ಅಪ್​ಗೆ 258 ಕೋಟಿ ರೂ. ಸಿಗಲಿದೆ.