ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಲಕ್ಷಾಂತರ ಭಾವನೆಗಳು, ಪದಗಳಿಲ್ಲ'; ಮಾಜಿ ಪತ್ನಿಗೆ ಟಕ್ಕರ್ ಕೊಟ್ಟ ಚಹಲ್‌

ಧನಶ್ರಿ ಅವರ ಈ ಹೇಳಿಕೆ ಬಳಿಕ ಚಹಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಬ್ಬಂಟಿಯಾಗಿರುವ ಫೋಟೊಗಳನ್ನು ಹಂಚಿಕೊಂಡು 'ಲಕ್ಷಾಂತರ ಭಾವನೆಗಳು ಆದರೆ ಶೂನ್ಯ ಪದಗಳು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಧನಶ್ರಿಗೆ ಟಕ್ಕರ್‌ ಕೊಟ್ಟಿದ್ದಾರೆ.

ಮುಂಬಯಿ: ಮಾಜಿ ಪತ್ನಿ ಧನಶ್ರೀ ವರ್ಮಾ(Dhanashree Verma) ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ ಕೆಲವೇ ಗಂಟೆಗಳ ನಂತರ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್(Yuzvendra Chahal) ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಮಾಜಿ ಪತ್ನಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಚಾಹಲ್‌ ಅವರೊಂದಿಗಿನ ವಿಚ್ಛೇದನ ಕುರಿತು ಧನಶ್ರಿ ವರ್ಮಾ ಅವರು ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಮಾತನಾಡಿದ್ದರು. ಈ ವೇಳೆ ಅವರು ವಿಚ್ಛೇಧನದ ಅಂತಿಮ ವಿಚಾರಣೆ ವೇಳೆ ಚಹಲ್‌ ಅವರು ಧರಿಸಿರುವ ಟಿ–ಶರ್ಟ್‌ನಲ್ಲಿದ್ದ ಬರಹದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ವಿಚಾರಣೆ ಸಂದರ್ಭ ಚಹಲ್ ಅವರು ‘Be Your Own Sugar Daddy’ ಎಂಬ ಬರಹ ಹೊಂದಿರುವ ಟಿ–ಶರ್ಟ್‌ ಧರಿಸಿದ್ದರು. ಇದು ಭಾರೀ ಭಾರಿ ಸುದ್ದಿಯಾಗಿತ್ತು. ಇದೇ ವಿಚಾರವಾಗಿ ಮಾತನಾಡಿದ್ದ ಧನಶ್ರಿ ವರ್ಮಾ, ಜನರು ನನ್ನನ್ನು ದೂಷಿಸಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ನನ್ನ ಮೇಲೆ ಸಿಟ್ಟು ಇದಿದ್ದರೆ ವಾಟ್ಸಪ್‌ನಲ್ಲಿಯೇ ಈ ಮಾತನ್ನು ಹೇಳಬಹುದಿತ್ತು. ಟಿ–ಶರ್ಟ್‌ ಯಾಕೆ ಧರಿಸಬೇಕಿತ್ತು ಎಂದು ಲೇವಡಿ ಮಾಡಿದ್ದರು.

ಇದನ್ನೂ ಓದಿ Yuzvendra Chahal: ಧನಶ್ರೀ ವರ್ಮಾ ವಿಚ್ಛೇದನ, ವಂಚನೆ ಆರೋಪದ ಬಗ್ಗೆ ಮೌನ ಮುರಿದ ಚಾಹಲ್

ಧನಶ್ರಿ ಅವರ ಈ ಹೇಳಿಕೆ ಬಳಿಕ ಚಹಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಬ್ಬಂಟಿಯಾಗಿರುವ ಫೋಟೊಗಳನ್ನು ಹಂಚಿಕೊಂಡು 'ಲಕ್ಷಾಂತರ ಭಾವನೆಗಳು ಆದರೆ ಶೂನ್ಯ ಪದಗಳು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಧನಶ್ರಿಗೆ ಟಕ್ಕರ್‌ ಕೊಟ್ಟಿದ್ದಾರೆ. ಈ ಹಿಂದೆ ವಿಚ್ಚೇಧನದ ಬಗ್ಗೆ ಚಾಹಲ್‌ ಅವರು ಕೂಡ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದರು. ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರವನ್ನೂ ಅವರು ಬಹಿರಂಗಪಡಿಸಿದ್ದರು.