ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

China Open 2025: ಕ್ವಾರ್ಟರ್‌ ಫೈನಲ್‌ನಲ್ಲಿ ಸೋತ ಉನ್ನತಿ ಹೂಡಾ

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೆಯಾಂಕದ ಅಕಾನೆ ಯಮಾಗುಚಿ, ಹೂಡಾ ಅವರನ್ನು 33 ನಿಮಿಷಗಳಲ್ಲಿ 21-16, 21-12 ಗೇಮ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಅನುಭವಿ ಆಟಗಾರ್ತಿಯ ವೇಗ, ನಿಖರ ಹೊಡೆತಗಳ ಮುಂದೆ ಹದಿಹರೆಯದ ಹೂಡಾ ಮಣಿಯಬೇಕಾಯಿತು.

ಚಾಂಗ್‌ಝೌ(ಚೀನಾ): ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು ಅವರಿಗೆ ಆಘಾತ ನೀಡಿದ್ದ 17 ವರ್ಷ ವಯಸ್ಸಿನ ಉನ್ನತಿ ಹೂಡಾ ಅವರು ಎಂಟರ ಘಟ್ಟದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಾಗುಚಿ(Akane Yamaguchi) ವಿರುದ್ಧ ಸೋತು ಅಭಿಯಾನ ಮುಗಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೆಯಾಂಕದ ಅಕಾನೆ ಯಮಾಗುಚಿ, ಹೂಡಾ ಅವರನ್ನು 33 ನಿಮಿಷಗಳಲ್ಲಿ 21-16, 21-12 ಗೇಮ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಅನುಭವಿ ಆಟಗಾರ್ತಿಯ ವೇಗ, ನಿಖರ ಹೊಡೆತಗಳ ಮುಂದೆ ಹದಿಹರೆಯದ ಹೂಡಾ ಮಣಿಯಬೇಕಾಯಿತು. ಹೂಡಾ ಸೋಲಿನೊಂದಿಗೆ ಮಹಿಳಾ ವಿಭಾಗದಲ್ಲಿ ಭಾರತೀಯ ಸವಾಲು ಅಂತ್ಯ ಕಂಡಿತು.

"ಸ್ಕೋರ್‌ಗಳು ಸಮನಾಗಿದ್ದಾಗ ನಾನು ಅನೇಕ ಅನಗತ್ಯ ತಪ್ಪುಗಳನ್ನು ಮಾಡುತ್ತಿದ್ದೆ. ಯಮಗುಚಿ ತನ್ನ ಡ್ರಾಪ್ ಶಾಟ್‌ಗಳಲ್ಲಿ ತುಂಬಾ ಉತ್ತಮಳಾಗಿದ್ದರು. ಮತ್ತು ಆಟವನ್ನು ನಿಯಂತ್ರಿಸಿದರು" ಎಂದು ಸೋಲಿನ ನಂತರ ಹೂಡಾ ಹೇಳಿದರು.

"ನನ್ನ ಮೊದಲ ಸೂಪರ್ 1000 ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಕ್ಕೆ ನನಗೆ ಸಂತೋಷವಾಗಿದೆ ಆದರೆ ಈ ಪಂದ್ಯಾವಳಿಯಿಂದ ಕಲಿಯಲು ಬಹಳಷ್ಟಿದೆ" ಎಂದು ಹೂಡಾ ಹೇಳಿದರು. ದಿನದ ಅಂತ್ಯದಲ್ಲಿ, ದೇಶದ ಅಗ್ರ ಶ್ರೇಯಾಂಕಿತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಜೋಡಿ ಓಂಗ್ ಯೆವ್ ಸಿನ್ ಮತ್ತು ಟಿಯೊ ಈ ಯಿ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ IND vs ENG: IND vs ENG: ಕನ್ನಡಿಗ ಕರುಣ್‌ ನಾಯರ್‌ರ ಟೆಸ್ಟ್‌ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್‌ ಪ್ರತಿಕ್ರಿಯೆ!