ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

China Open: ಎಚ್‌.ಎಸ್‌.ಪ್ರಣಯ್‌ ಮುನ್ನಡೆ, ಲಕ್ಷ್ಯ ಸೇನ್ ನಿರ್ಗಮನ

ಮೊದಲ ಗೇಮ್‌ನಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ ಸೇನ್‌ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆ ಬಳಿಕದ ಎರಡು ಗೇಮ್‌ಗಳಲ್ಲಿ ತೀವ್ರ ಪೈಪೋಟಿ ನೀಡಿದ ಫೆಂಗ್ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು.

ಚಾಂಗ್‌ಝೌ: ಮಂಗಳವಾರ(ಜು.22) ಇಲ್ಲಿ ಆರಂಭಗೊಂಡ ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌(China Open) ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌(HS Prannoy) ರೋಚಕ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರೆ, ಲಕ್ಷ್ಯ ಸೇನ್‌(Lakshya Sen) ಸೋಲಿನ ಆಘಾತದೊಂದಿಗೆ ಅಭಿಯಾನ ಮುಗಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಕೂಡ ಸೋಲು ಕಂಡರು.

ಏಷ್ಯನ್‌ ಗೇಮ್ಸ್‌ ಕಂಚು ವಿಜೇತ ಪ್ರಣಯ್‌ ಅವರು ಜಪಾನ್‌ನ ಕೋಕಿ ವಟನಾಬೆ ಅವರ ವಿರುದ್ಧ ಮೂರು ಗೇಮ್‌ಗಳ ಹೋರಾಟ ನಡೆಸಿ ಕೊನೆಗೂ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ತಮ್ಮ ಋತುವಿನ ಅತ್ಯಂತ ಅದ್ಭುತ ಪ್ರದರ್ಶನವೊಂದನ್ನು ನೀಡಿದರು. ಅಂತಿಮ ಗೇಮ್‌ನಲ್ಲಿ 15-20 ಅಂತರದಿಂದ ಹಿನ್ನಡೆ ಅನುಭವಿಸಿದ ಪ್ರಣಯ್, ಫಿನಿಕ್ಸ್‌ನಂತೆ ಎದ್ದು ನಿಂತು ಐದು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡು ವಿಶ್ವದ 18ನೇ ಶ್ರೇಯಾಂಕಿತ ಆಟಗಾರನ ವಿರುದ್ಧ 8-21, 21-16, 23-21 ಅಂತರದಲ್ಲಿ ಜಯ ಸಾಧಿಸಿದರು. ಉಭಯ ಆಟಗಾರರ ಈ ಕಾದಾಟ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.

ನಿರಾಸೆ ಕಂಡ ಸೇನ್‌

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಆಡಿದ ಎಲ್ಲ ಟೂರ್ನಿಯಲ್ಲಿಯೂ ನಿರಾಸೆ ಕಾಣುತ್ತಿದ್ದ ಲಕ್ಷ್ಯ ಸೇನ್‌ ಮತ್ತೊಂದು ಸೋಲು ಕಂಡಿದ್ದಾರೆ. ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಸೇನ್‌ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಆತಿಥೇಯ ನಾಡಿನ ಐದನೇ ಶ್ರೇಯಾಂಕದ ಲಿ ಶಿ ಫೆಂಗ್ ವಿರುದ್ಧ ಆರಂಭಿಕ ಮುನ್ನಡೆಯ ಹೊರತಾಗಿಯೂ 21-14, 22-24, 11-21 ಅಂತರದಿಂದ ಸೋಲು ಕಂಡರು.

ಮೊದಲ ಗೇಮ್‌ನಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ ಸೇನ್‌ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆ ಬಳಿಕದ ಎರಡು ಗೇಮ್‌ಗಳಲ್ಲಿ ತೀವ್ರ ಪೈಪೋಟಿ ನೀಡಿದ ಫೆಂಗ್ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು.

ಇದನ್ನೂ ಓದಿ IND vs ENG: 4ನೇ ಪಂದ್ಯದ ಪಿಚ್‌ ರಿಪೋರ್ಟ್‌; ಹವಾಮಾನ ವರದಿ ಹೀಗಿದೆ

ಮಹಿಳಾ ಸಿಂಗಲ್ಸ್‌ನಲ್ಲಿ ಉದಯೋನ್ಮುಖ ಆಟಗಾರ್ತಿ ಅನುಪಮಾ ಉಪಾಧ್ಯಾಯ ಅವರು ಚೈನೀಸ್ ತೈಪೆಯ ಲಿನ್ ಹ್ಸಿಯಾಂಗ್ ತಿ ವಿರುದ್ಧ 23-21, 11-21, 10-21 ಅಂತರದಲ್ಲಿ ಸೋತು ಹೊರನಡೆದರು. ಮಿಶ್ರ ಡಬಲ್ಸ್‌ನಲ್ಲಿ ಸೂರ್ಯ ಮತ್ತು ಪ್ರಮುತೇಶ್ ಹಾಗೂ ರೋಹನ್ ಕಪೂರ್ ಮತ್ತು ರುತ್ವಿಕಾ ಗಡ್ಡೆ ಜೋಡಿಗಳು ಆರಂಭಿಕ ಸುತ್ತಿನಲ್ಲೇ ಸೋತು ಹೊರಬಿದ್ದ ಕಾರಣ ಭಾರತೀಯ ತಂಡ ಮತ್ತಷ್ಟು ನಿರಾಶೆಯನ್ನು ಅನುಭವಿಸಿತು.