ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ರೋಹಿತ್‌; ನಂಬರ್ ಪ್ಲೇಟ್ ರಹಸ್ಯವೇನು?

Rohit's New Luxury Car: '264' ನೋಂದಣಿ ಸಂಖ್ಯೆಯನ್ನು ಹೊಂದಿರುವ ರೋಹಿತ್ ಅವರ ಲ್ಯಾಂಬೋರ್ಗಿನಿ ಕಾರು, ಬಹಳ ಹಿಂದಿನಿಂದಲೂ ಅವರಿಗೆ ಭಾವನಾತ್ಮಕ ಮೌಲ್ಯವನ್ನು ಹೊಂದಿತ್ತು. ಇದು ಅವರು ಏಕದಿನ ಪಂದ್ಯಗಳಲ್ಲಿ ಬಾರಿಸಿದ 264 ರನ್‌ಗಳ ವಿಶ್ವ ದಾಖಲೆಯ ನೆನಪಿಗಾಗಿ ಈ ನಂಬರನ್ನು ತಮ್ಮ ಕಾರಿಗೆ ನೋಂದಣಿ ಮಾಡಿಸಿಕೊಂಡಿದ್ದರು.

ಮುಂಬಯಿ: ಭಾರತದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ(Rohit's New Luxury Car) ಅವರು ಕೆಂಪು ಬಣ್ಣದ ಹೊಸ ಲ್ಯಾಂಬೋರ್ಗಿನಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಹಿಂದೆ ಅವರ ಬಳಿ ಇದ್ದ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರನ್ನು(Rohit Sharma blue Lamborghini) ಐಪಿಎಲ್‌ ಡ್ರೀಮ್‌ 11(Dream11 Winner) ಫ್ಯಾಂಟಸಿ ಕ್ರಿಕೆಟ್ ಸ್ಪರ್ಧೆಯ ವಿಜೇತರಿಗೆ ನೀಡಿದ್ದರು. ಇದೀಗ ಮತ್ತೊಂದು ಕಾರು ಖರೀದಿಸಿದ್ದಾರೆ.

ರೋಹಿತ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ 3015 ಆಗಿದ್ದು, ಅಭಿಮಾನಿಗಳು ಡಿಕೋಡ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. '3015' ಸಂಖ್ಯೆಯು ಹಿಟ್‌ಮ್ಯಾನ್‌ನ ಇಬ್ಬರು ಮಕ್ಕಳ ಜನ್ಮದಿನಗಳನ್ನು ಸೂಚಿಸುತ್ತದೆ. ಇನ್ನೊಂದು ವಿಶೇಷ ಎಂದರೆ 30 ಪ್ಲಸ್‌ 15 ಸೇರಿದರೆ ಒಟ್ಟು ಮೊತ್ತವು 45 ಆಗುತ್ತದೆ. 45 ರೋಹಿತ್‌ ಅವರ ಜೆರ್ಸಿ ನಂಬರ್‌ ಆಗಿದೆ. ಒಟ್ಟಾರೆ ಈ ಕಾರ್‌ ಅವರ ಪಾಲಿಗೆ ಭಾವನಾತ್ಮಕವಾಗಿದೆ ಎನ್ನಲಡ್ಡಿಯಿಲ್ಲ.

'264' ನೋಂದಣಿ ಸಂಖ್ಯೆಯನ್ನು ಹೊಂದಿರುವ ರೋಹಿತ್ ಅವರ ಲ್ಯಾಂಬೋರ್ಗಿನಿ ಕಾರು, ಬಹಳ ಹಿಂದಿನಿಂದಲೂ ಅವರಿಗೆ ಭಾವನಾತ್ಮಕ ಮೌಲ್ಯವನ್ನು ಹೊಂದಿತ್ತು. ಇದು ಅವರು ಏಕದಿನ ಪಂದ್ಯಗಳಲ್ಲಿ ಬಾರಿಸಿದ 264 ರನ್‌ಗಳ ವಿಶ್ವ ದಾಖಲೆಯ ನೆನಪಿಗಾಗಿ ಈ ನಂಬರನ್ನು ತಮ್ಮ ಕಾರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಹಲವು ಬಾರಿ ರೋಹಿತ್‌ ಈ ಕಾರಿನಲ್ಲಿ ಮುಂಬೈನ ಹಲವು ಬೀದಿಗಳಲ್ಲಿ ಸುತ್ತಾಡಿದ ವಿಡಿಯೊಗಳು ಕೂಡ ವೈರಲ್‌ ಆಗಿತ್ತು. ಇದೇ ಕಾರಿನಲ್ಲಿ ಅತಿ ವೇಗದ ಚಾಲನೆ ಮಾಡಿ ಮೂರು ಬಾರಿ ದಂಡ ಕೂಡ ಕಟ್ಟಿಸಿಕೊಂಡಿದ್ದರು

ಆದರೆ 2025ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ ರೋಹಿತ್, Dream11 ಜಾಹೀರಾತು ಅಭಿಯಾನದಲ್ಲಿ ಸ್ಪರ್ಧೆಯ ವಿಜೇತರಿಗೆ ತನ್ನ ನೆಚ್ಚಿನ ಕಾರನ್ನು ನೀಡುವುದಾಗಿ ಭಾವನಾತ್ಮವಾಗಿ ಭರವಸೆ ನೀಡಿದ್ದರು. ಈ ಜಾಹೀರಾತು ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ Rohit-Virat ODI Future: ಕೊಹ್ಲಿ, ರೋಹಿತ್‌ ಏಕದಿನ ಭವಿಷ್ಯದ ಬಗ್ಗೆ ಆತುರದ ನಿರ್ಧಾರವಿಲ್ಲ; ಬಿಸಿಸಿಐ

ಸ್ಪರ್ಧೆಯ ವಿಜೇತರು ರೋಹಿತ್ ಅವರ ನಿಖರವಾದ ಕಾರನ್ನು ಪಡೆಯುತ್ತಾರೋ ಅಥವಾ ಇನ್ನೊಂದು ಲ್ಯಾಂಬೋರ್ಗಿನಿ ಉರುಸ್ ಅನ್ನು ಪಡೆಯುತ್ತಾರೋ ಎಂಬ ಕುತೂಹಲ ಮೂಡಿತ್ತು. ಆದರೆ ರೋಹಿತ್‌ ತಮ್ಮ ಕಾರನ್ನೇ ನೀಡಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ಪ್ರಸ್ತುತ 4 ಕೋಟಿ ರೂ.ಗಿಂತಲೂ ಅಧಿಕವಾಗಿದೆ.