ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (AUS vs ENG) ನಡುವಣ ಬಹುನಿರೀಕ್ಷಿತ ಆಷಸ್ ಟೆಸ್ಟ್ (Ashes) ಸರಣಿ ನವೆಂಬರ್ 21 ರಂದು ಆರಂಭವಾಗಲಿದೆ. ಒಟ್ಟು 5 ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅಲಭ್ಯರಾಗಿದ್ದಾರೆ ಆದರೆ, ಇದೀಗ ಅವರು ಟೆಸ್ಟ್ ಸರಣಿಯಿಂದಲೇ ಹೊರ ಬೀಳಲಿದ್ದಾರೆಂದು ವರದಿಯಾಗಿದೆ. ಕಳೆದ ವಾರ ನಡೆದಿದ್ದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ಅವರ ಬೆನ್ನು ಸ್ಟ್ರೆಸ್ ಇಂಜುರಿಗೆ ಒಳಗಾಗಿರುವುದು ಕಂಡು ಬಂದಿದೆ. ಹಾಗಾಗಿ ಸಂಪೂರ್ಣವಾಗಿ ಗುಣಮುಖರಾಗಲು ಅವರಿಗೆ ಇನ್ನಷ್ಟು ದಿನಗಳು ಅಗತ್ಯವಿದೆ. ಇದರಿಂದಾಗಿ ಆಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸುವ ಸಾಧ್ಯತೆ ಇದೆ.
ಬೆನ್ನು ನೋವಿಗೆ ತುತ್ತಾಗಿರುವ ಕಮಿನ್ಸ್ ಅವರು ಅಲ್ಪ ಚೇತರಿಕೆ ಕಂಡಿದ್ದಾರೆ. ಆದರೆ ಸಂಪೂರ್ಣವಾಗಿ ನೋವು ನಿವಾರಣೆಯಾಗಿಲ್ಲ. ಅತ್ಯಂತ ಬಿಡುವಿಲ್ಲದ ಆಷಸ್ ವೇಳಾಪಟ್ಟಿಯಲ್ಲಿ ತಂಡದ ಪರ ಯಶಸ್ವಿ ಕಾರ್ಯ ನಿರ್ವಹಣೆ ಮಾಡಲು ಅಸಾಧ್ಯ ಎನ್ನಲಾಗಿದೆ. ಈ ಕಾರಣದಿಂದಾಗಿ ಕಮಿನ್ಸ್ ಅವರಿಗೆ ಮತ್ತಷ್ಟು ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ. ಈ ಕುರಿತು ಈವರೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಮಂಡಳಿಯ ಈ ನಡೆ ಆಸೀಸ್ ವೇಗಿ ಅಲಭ್ಯತೆ ಬಹುತೇಕ ಸ್ಪಷ್ಟ ಎನ್ನುವುದನ್ನು ಸೂಚಿಸುತ್ತಿದೆ. ವೇಗಿ ಸರಣಿಯ ಕೊನೆ ಪಂದ್ಯಗಳಿಗೆ ಮರಳಬಹುದು ಆದರೆ ಈ ಬಗ್ಗೆ ಯಾವುದೇ ಸುಳಿವಿಲ್ಲ.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
ಕಮಿನ್ಸ್ ಅಲಭ್ಯತೆ ಆಸೀಸ್ ಪಡೆಗೆ ದೊಡ್ಡ ಅಘಾತವನ್ನು ನೀಡಿದ್ದು, ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಈ ಕಾರಣದಿಂದಾಗಿ ಸ್ಕಾಟ್ ಬೋಲೆಂಡ್, ಜಾಶ್ ಹೇಝಲ್‌ವುಡ್ ಮತ್ತು ಮಿಚೆಲ್ ಮಾರ್ಷ್ ಜೊತೆ ಮೂರನೇ ಸೀಮರ್ ಆಗಿ ಕಣಕ್ಕಿಳಿಯಲಿದ್ದಾರೆ.
"ಅದು ವಿನಾಶಕಾರಿಯಾಗಬಹುದು" ಎಂದು ಕಮ್ಮಿನ್ಸ್ ಹಿಂದಿನ ಸಂದರ್ಶನವೊಂದರಲ್ಲಿ ಆಷಸ್ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ಆತಂಕದ ಮಾತುಗಳನ್ನಾದಿದ್ದರು. "ಅದಕ್ಕಾಗಿ ಸರಿಯಾಗಿರಲು ಮತ್ತು ಕೆಲವು ನಿರ್ಧಾರಗಳನ್ನು ಸ್ವಲ್ಪ ಹತ್ತಿರದಿಂದ ತೆಗೆದುಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ, ಆದರೆ ನಾವು ಪುನಶ್ಚೇತನ ಕಾರ್ಯವನ್ನು ಸರಿಯಾಗಿ ಮಾಡುತ್ತೇನೆ ಹಾಗೂ ಮರಳಲುತ್ತೇನೆಂಬ ಬಗ್ಗೆ ವಿಶ್ವಾಸವಿದೆ," ಎಂದು ಅವರು ಹೇಳಿದ್ದಾರೆ.
IND vs AUS: ರೋಹಿತ್ ಶರ್ಮಾರನ್ನು ಭಾರತ ಒಡಿಐ ನಾಯಕತ್ವದಿಂದ ತೆಗೆದಿದ್ದೇಕೆ? ಕಾರಣ ಇಲ್ಲಿದೆ!
"ಇಷ್ಟು ದೂರ ತಿಳಿದುಕೊಳ್ಳುವುದು ಕಷ್ಟ, ಆದರೆ ಪರ್ತ್‌ಗೆ ಸಿದ್ಧರಾಗಲು ನಾವು ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದು ದೊಡ್ಡ ಆಶಸ್ ಸರಣಿ - ಇದು ಹೆಚ್ಚು ದೊಡ್ಡದಾಗುವುದಿಲ್ಲ - ಆದ್ದರಿಂದ ನೀವು ಆಕ್ರಮಣಕಾರಿಯಾಗಿರಲು ಮತ್ತು ಸಾಧ್ಯವಾದಷ್ಟು ಟೆಸ್ಟ್‌ಗಳನ್ನು ಆಡಲು ಪ್ರಯತ್ನಿಸಲು ಕೆಲವು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ," ಎಂದು ಅವರು ತಿಳಿಸಿದ್ದಾರೆ.