'Non-Committal': ಅಗರ್ಕರ್‌ಗೆ ಕೌಂಟರ್ ಕೊಟ್ರಾ ರೋಹಿತ್ ಶರ್ಮಾ?
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಇದೀಗ ಕಿರುತೆರೆಯಲ್ಲಿ ಹೊಸ ಪಾತ್ರಕ್ಕೆ ಕಾಲಿಟ್ಟಿದ್ದಾರೆ. ಗೇಮ್ ಶೋ ‘ಫ್ಯಾಮಿಲಿ ಫುಲ್ ಹೌಸ್’ ಮೂಲಕ ಅವರು ಟಿವಿ ನಿರೂಪಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಶೋ ಸೆಟ್‌ನಲ್ಲಿ ರೋಹಿತ್ ಶರ್ಮಾ ‘Non-Committal?’ ಎಂದು ಬರೆಯಲಾಗಿದ್ದ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.