ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs BAN: ಬಾಂಗ್ಲಾದೇಶ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

IND vs BAN Super-4 Match: ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಸೂಪರ್‌-4ರ ಪಂದ್ಯ

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಸೂಪರ್‌-4ರ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (IND vs BAN) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ಮೊದಲು ಬ್ಯಾಟ್‌ ಮಾಡಲಿದೆ. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಭಾರತ ತಂಡ ಮೊದಲು ಬ್ಯಾಟ್‌ ಮಾಡುತ್ತಿದ್ದು, ದೊಡ್ಡ ಮೊತ್ತವನ್ನು ಕಲೆ ಹಾಕುವ ಯೋಜನೆಯನ್ನು ಹೊಂದಿದೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ವಿರುದ್ಧ ಕಳೆದ ಪಂದ್ಯವನ್ನುಆಡಿದ್ದ ಅದೇ ಪ್ಲೇಯಿಂಗ್‌ XI ಅನ್ನು ಬಾಂಗ್ಲಾ ಪಂದ್ಯಕ್ಕೆ ಉಳಿಸಿಕೊಳ್ಳಲಾಗಿದೆ. ಇನ್ನು ಎದುರಾಳಿ ಬಾಂಗ್ಲಾದೇಶ ತಂಡ ತನ್ನ ಸೂಪರ್‌4ರ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಪಡೆದಿದ್ದರೂ ಭಾರತ ವಿರುದ್ಧದ ಪಂದ್ಯಕ್ಕೆ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿದೆ.

Asia Cup: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಸುನೀಲ್‌ ಗವಾಸ್ಕರ್‌ ಆಗ್ರಹ!

ಇನ್ನು ಭಾರತ ತಂಡ ತನ್ನ ಸೂಪರ್‌-4ರ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ಆ ಮೂಲಕ ತನ್ನ ಗೆಲುವಿನ ಪಯಣವನ್ನು ಮುಂದುವರಿಸಿತ್ತು. ಇದೀಗ ಬಾಂಗ್ಲಾ ಎದುರು ಗೆದ್ದರೆ ಟೀಮ್‌ ಇಂಡಿಯಾ ಫೈನಲ್‌ಗೆ ಬಹುತೇಕ ಅರ್ಹತೆ ಪಡೆಯಲಿದೆ. ಆದರೆ, ಬಾಂಗ್ಲಾದೇಶ ಕೂಡ ಈ ಪಂದ್ಯವನ್ನು ಗೆದ್ದರೆ ಬಹುತೇಕ ಪ್ರಶಸ್ತಿಗೆ ಸುತ್ತಿಗೆ ಲಗ್ಗೆ ಇಡಲಿದೆ. ಆದರೆ, ಬಲಿಷ್ಠ ಭಾರತದ ವಿರುದ್ದ ಬಾಂಗ್ಲಾಗೆ ಕಷ್ಟ.



ಶ್ರೀಲಂಕಾ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಸೀಂಹಳೀಯರು ಟೂರ್ನಿಯ ಫೈನಲ್‌ ರೇಸ್‌ನಿಂದ ಬಹುತೇಕ ಹೊರ ಬಿದ್ದಿದೆ. ಇದೀಗ ಮೂರು ತಂಡಗಳು ಪೈಕಿ ಎರಡು ತಂಡಗಳು ಫೈನಲ್‌ಗೆ ಪ್ರವೇಶ ಮಾಡಲಿವೆ. ಇದರಲ್ಲಿ ಭಾರತ ಫೈನಲ್‌ಗೆ ಹೋಗುವುದು ಬಹುತೇಕ ಖಚಿತ. ಇನ್ನುಳಿದ ಒಂದು ಸ್ಥಾನಕ್ಕೆ ಬಾಂಗ್ಲಾ ಹಾಗೂ ಪಾಕ್‌ ನಡುವೆ ಪೈಪೋಟಿ ಇದೆ.

Asia Cup 2025: 2007ರ ಘಟನೆ ನೆನೆದ ಪಾಕಿಸ್ತಾನವನ್ನು ಟೀಕಿಸಿದ ಇರ್ಫಾನ್‌ ಪಠಾಣ್!

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್‌), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ

ಬಾಂಗ್ಲಾದೇಶ: ಸೈಫ್ ಹಸನ್, ತಂಝಿದ್ ಹಸನ್ ತಮೀಮ್, ಪರ್ವೇಜ್ ಹೊಸೇನ್ ಎಮನ್, ತೌಹಿದ್ ಹೃದಾಯ್, ಶಮೀಮ್ ಹೊಸೇನ್, ಜೇಕರ್ ಅಲಿ(ವಿ.ಕೀ), ಮೊಹಮ್ಮದ್ ಸೈಫುದ್ದೀನ್, ರಿಶಾದ್ ಹೊಸೇನ್, ತಂಝಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮುಸ್ತಾಫಿಝುರ್ ರೆಹಮಾನ್