ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೀರೇಂದ್ರ ಸೆಹ್ವಾಗ್‌ ಪತ್ನಿ ಜೊತೆ ಮಿಥುನ್‌ ಮನ್ಹಾಸ್‌ ಡೇಟಿಂಗ್‌? ಬಿಸಿಸಿಐ ಅಧ್ಯಕ್ಷನಿಗೆ ಸಂಕಷ್ಟ!

ಇತ್ತೀಚೆಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಮಿಥುನ್‌ ಮನ್ಹಾಸ್‌ ಬಗ್ಗೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಶಾಕಿಂಗ್‌ ಸಂಗತಿಯೊಂದು ವೈರಲ್‌ ಆಗಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಅವರ ಪತ್ನಿ ಆರತಿ ಅಹ್ಲಾವತ್‌ ಅವರೊಂದಿಗೆ ಬಿಸಿಸಿಐ ಅಧ್ಯಕ್ಷ ಡೇಟ್‌ ಮಾಡುತ್ತಿದ್ದಾರೆಂಬ ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಿವೆ.

ವೀರೇಂದ್ರ ಸೆಹ್ವಾಗ್‌ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಡೇಟಿಂಗ್‌?

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಎಂದೇ ಬಿಂಬಿಸಿಕೊಂಡಿರುವ ಭಾರತೀಯ ಕ್ರಿಕೆಟ್‌ ಮಂಡಳಿ ನಿಯಂತ್ರಣ ಮಂಡಳಿಗೆ (BCCI) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೆ ಮಿಥುನ್‌ ಮನ್ಹಾಸ್‌ (Mithun Manhas) ಅವರ ಬಗ್ಗೆ ಶಾಂಕಿಂಗ್‌ ಸಂಗತಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ (Virender Sehwahg) ಅವರ ಪತ್ನಿ ಆರತಿ ಅಹ್ಲಾವತ್‌ ಅವರೊಂದಿಗೆ ಮಿಥುನ್‌ ಮನ್ಹಾಸ್‌ ಅವರು ಡೇಟ್‌ ಮಾಡುತ್ತಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಿವೆ.

2004ರಲ್ಲಿ ವೀರೇಂದ್ರ ಸೆಹ್ವಾಗ್‌ ಹಾಗೂ ಆರತಿ ಅಹ್ಲಾವರ್‌ ಅವರು ವಿವಾಹವಾಗಿದ್ದರು. ಈ ದಂಪತಿಗೆ ಆರ್ಯವೀರ್‌ ಹಾಗೂ ವೇದಾಂತ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ತಂದೆ ಸೆಹ್ವಾಗ್‌ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಪುತ್ರ ಆರ್ಯವೀರ್‌ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. 2024ರ ನವೆಂಬರ್‌ ತಿಂಗಳಲ್ಲಿ ಮೇಘಾಲಯ ವಿರುದ್ದದ ಕೂಚ್‌ ಬೆಹಾರ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಆರ್ಯವೀರ್‌ ತ್ರಿಶತಕ ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಅಂದ ಹಾಗೆ 20 ವರ್ಷಗಳ ಕಾಲ ಜೊತೆಯಲ್ಲಿ ಇದ್ದ ಸೆಹ್ವಾಗ್‌ ಹಾಗೂ ಆರತಿ ಇತ್ತೀಚೆಗೆ ಬೇರೆ-ಬೇರೆಯಾಗಿದ್ದರು. ಏಕೆ ಈ ಜೋಡಿ ಪ್ರತ್ಯೇಕವಾಗಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ.

ICC Test rankings: ಅಗ್ರ 10ರ ಸನಿಹ ಬಂದ ಮೊಹಮ್ಮದ್‌ ಸಿರಾಜ್‌, ಯಶಸ್ವಿ ಜೈಸ್ವಾಲ್‌ಗೆ ಹಿನ್ನಡೆ!

ವೀರೇಂದ್ರ ಸೆಹ್ವಾಗ್‌ ಹಾಗೂ ಆರತಿ ಅಹ್ಲಾವತ್‌ 2023ರ ಏಪ್ರಿಲ್‌ 28 ರಂದು ಕೊನೆಯ ಬಾರಿ ಫೋಟೋವೊಂದರಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವೀರೇಂದ್ರ ಸೆಹ್ವಾಗ್‌ ಅವರು 2024ರ ದೀಪಾವಳಿಯ ವೇಳೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದರು. ಇವರು ಹಂಚಿಕೊಂಡಿದ್ದ ಫೋಟೋದಲ್ಲಿ ಇಬ್ಬರು ಮಕ್ಕಳು ಮತ್ತು ತನ್ನ ತಾಯಿ ಇದ್ದರು. ಆದರೆ, ಅವರ ಪತ್ನಿ ಇಲ್ಲದೆ ಇರುವುದು ಎಲ್ಲರಿಗೂ ಅನುಮಾನವನ್ನು ಉಂಟು ಮಾಡಿತ್ತು.



ಮಿಥುನ್‌ ಮನ್ಹಾಸ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಇಬ್ಬರೂ ದೆಹಲಿ ಮೂಲದ ಆಟಗಾರರು. ಈ ಇಬ್ಬರೂ ಕ್ರಿಕೆಟ್‌ ವೃತ್ತಿ ಜೀವನದ ಬಳಿಕವೂ ಇವರ ನಡುವಿನ ಭಾಂದವ್ಯ ಮುಂದುವರಿದಿದೆ. ಅದರಂತೆ ಸೆಹ್ವಾಗ್‌ ಅವರು ಕ್ರಿಕೆಟ್‌ ಶಾಲೆ ಆರಂಭಿಸಿದ್ದರು. ಈ ಶಾಲೆಯಲ್ಲಿ ಮಿಥುನ್‌ ಮನ್ಹಾಸ್‌ ಅವರು ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಮನ್ಹಾಸ್‌ ಮತ್ತು ಆರತಿ ಪರಿಚಯವಾಗಿತ್ತು ಎಂದು ವರದಿಗಳು ಹೇಳುತ್ತಿವೆ. ಮಿಥುನ್‌ ಅವರು ಆರತಿ ಅವರೊಂದಿಗೆ ಗುಪ್ತವಾಗಿ ಡೇಟ್‌ ಮಾಡುತ್ತಿದ್ದರಿಂದಲೇ ಸೆಹ್ವಾಗ್‌ ಅವರ ದಾಂಪತ್ಯ ಜೀವನ ಮುರಿಯಲು ಕಾರಣ ಎಂತಲೂ ಹೇಳಲಾಗುತ್ತಿದೆ. ಅಂದಹಾಗೆ ದಿನೇಶ್‌ ಕಾರ್ತಿಕ್‌ ಹಾಗೂ ಮುರಳಿ ವಿಜಯ್‌ ಅವರ ಸ್ಟೋರಿಯನ್ನೇ ಇದೀಗ ಸೆಹ್ವಾಗ್‌ ಅವರ ಸಂಗತಿ ಹೋಲಿಕೆಯಾಗುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.