ಆಸ್ಟ್ರೇಲಿಯಾ: ದಕ್ಷಿಣ ಆಫ್ರಿಕಾ (South Africa) ತಂಡದ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (Dewald Brevis) ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಟಿ20ಐ ಸರಣಿಯ (AUS vs SA) ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದರು. ಕೇವಲ 26 ಎಸೆತಗಳಲ್ಲಿ 53 ರನ್ ಸಿಡಿಸಿದ ಡೆವಾಲ್ಡ್ ಬ್ರೆವಿಸ್ ತಮ್ಮ ಇನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು ಒಂದು ಬೌಂಡರಿಗಳನ್ನು ಸಿಡಿಸಿದರು. ಬೇಬಿ ಎಬಿಡಿ ಅದ್ಭುತ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ, ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿ ಆಸೀಸ್ ತಂಡಕ್ಕೆ ಸವಾಲಿನ ಗುರಿ ನೀಡಿತ್ತು. ಆ ಮೂಲಕ ಡೆವಾಲ್ಡ್ ಬ್ರೆವಿಸ್ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯವರ (Virat Kohli) ದೀರ್ಘಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ತನ್ನ 7ನೇ ಓವರ್ ವೇಳೆಗೆ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಏಡೆನ್ ಮಾರ್ಕ್ರಮ್, ರಿಯಾನ್ ರಿಕೆಲ್ಟನ್ ಮತ್ತು ಲುವಾನ್-ಡ್ರೆ ಪ್ರೆಟೋರಿಯಸ್ ಅವರನ್ನು ಕಳೆದುಕೊಂಡು ಕೇವಲ 49 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಬ್ರೆವಿಸ್, ಆಲ್‌ರೌಂಡರ್ ಟ್ರಿಸ್ಟನ್ ಸ್ಟಬ್ಸ್ ಜೊತೆಗೂಡಿ 29 ಎಸೆತಗಳಲ್ಲಿ 61 ರನ್‌ಗಳ ಅದ್ಭುತ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ತಂಡ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿ ಸವಾಲಿನ ಮೊತ್ತ ದಾಖಲಿಸುವಲ್ಲಿ ನೆರವು ನೀಡಿದ್ದರು.
AUS vs SA: ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ, ಟಿ20ಐ ಸರಣಿ ಗೆದ್ದ ಆಸ್ಟ್ರೇಲಿಯಾ!
ಸರಣಿಯ ಅಂತಿಮ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿದ ಡೆವಾಲ್ಡ್ ಬ್ರೆವಿಸ್ ಇನಿಂಗ್ಸ್‌ನಲ್ಲಿ 6 ಸಿಕ್ಸರ್ ಒಳಗೊಂಡಿದ್ದವು. ಆ ಮೂಲಕ ಬೇಬಿ ಎಬಿಡಿ ಈ ಸರಣಿಯಲ್ಲಿ ಒಟ್ಟು 14 ಸಿಕ್ಸರ್ ಬಾರಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಕಾಂಗರೂ ನಾಡಿನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೆವಿಸ್ ಪಾತ್ರರಾದರು. ಈ ಹಿಂದೆ ವಿರಾಟ್ ಕೊಹ್ಲಿಯವರು 12 ಸಿಕ್ಸರ್ ಬಾರಿಸಿದ್ದರು. ಇದರ ಜೊತೆಗೆ ಬ್ರೆವಿಸ್ ಮೂರು ಪಂದ್ಯಗಳಲ್ಲಿ ಒಟ್ಟು 180 ರನ್‌ಗಳನ್ನು ಕಲೆಹಾಕಿದ್ದು, ಆಸ್ಟ್ರೇಲಿಯಾ ವಿರುದ್ದ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಬ್ರೆವಿಸ್ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
Glenn Maxwell seals a cracking finish in Cairns as Australia clinch the T20I series against South Africa 🔥#AUSvSA 📝: https://t.co/FxKwm8AlLb pic.twitter.com/LmnxY6RBtr
— ICC (@ICC) August 16, 2025
ಆಸೀಸ್ ನೆಲದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
- ಡೆವಾಲ್ಡ್ ಬ್ರೆವಿಸ್ ಈವರೆಗೆ ಆಸೀಸ್ ನೆಲದಲ್ಲಿ ಆಡಿರುವ 3 ಇನಿಂಗ್ಸ್‌ಗಳಲ್ಲಿ 14 ಸಿಕ್ಸರ್ ಸಿಡಿಸಿದ್ದಾರೆ.
- ವಿರಾಟ್ ಕೊಹ್ಲಿ ಈವರೆಗೆ ಆಸೀಸ್ ನೆಲದಲ್ಲಿ ಆಡಿರುವ 10 ಇನಿಂಗ್ಸ್‌ಗಳಲ್ಲಿ 12 ಸಿಕ್ಸರ್ ಬಾರಿಸಿದ್ದಾರೆ.
- ಶಿಖರ್ ಧವನ್ ಆಸೀಸ್ ನೆಲದಲ್ಲಿ ಆಡಿರುವ 8 ಇನಿಂಗ್ಸ್‌ಗಳಲ್ಲಿ 9 ಸಿಕ್ಸರ್ ಬಾರಿಸಿದ್ದಾರೆ.
- ಆಂಡ್ರೆ ರಸೆಲ್ ಆಸೀಸ್ ನೆಲದಲ್ಲಿ ಆಡಿರುವ 4 ಇನಿಂಗ್ಸ್‌ಗಳಲ್ಲಿ 9 ಸಿಕ್ಸರ್ ಬಾರಿಸಿದ್ದಾರೆ.
- ರವಿ ಬೋಪರ ಆಸೀಸ್ ನೆಲದಲ್ಲಿ ಆಡಿರುವ 3 ಇನಿಂಗ್ಸ್‌ಗಳಲ್ಲಿ 7 ಸಿಕ್ಸರ್ ಬಾರಿಸಿದ್ದಾರೆ.
An explosive 50 follows a sensational century! 🇿🇦
— Proteas Men (@ProteasMenCSA) August 16, 2025
Dewald Brevis continues to showcase his power, skill, and composure at the crease. 💪
Another truly phenomenal innings! 💥🏏#WozaNawe pic.twitter.com/hRqYn53uVE
ಸರಣಿ ಗೆದ್ದುಕೊಂಡ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಪ್ರಸಕ್ತ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಈ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ್ದ ಆಸೀಸ್ ಗೆಲುವಿನ ದಡ ಸೇರಿದೆ. ತಂಡಕ್ಕೆ 63 ರನ್‌ಗಳ ಕೊಡುಗೆ ಕೊಟ್ಟು ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.