ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಒಡಿಐ ನಾಯಕತ್ವದಿಂದ ರೋಹಿತ್‌ ಶರ್ಮಾರನ್ನು ತೆಗೆಯಲು ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!

ಭಾರತ ಒಡಿಐ ತಂಡದ ನಾಯಕರನ್ನಾಗಿ ಶುಭಮನ್ ಗಿಲ್ ಅವರನ್ನು ನೇಮಿಸಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ 2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುನೀಲ್ ಗವಾಸ್ಕರ್ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರ ವಯಸ್ಸು ಮತ್ತು ಪಂದ್ಯಗಳ ಅಭ್ಯಾಸದ ಕೊರತೆಯಿಂದಾಗಿ ಯುವ ನಾಯಕನನ್ನು ಬೆಳೆಸುವುದು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾರನ್ನು ನಾಯಕತ್ವದಿಂದ ತೆಗೆಯಲು ಕಾರಣ ತಿಳಿಸಿದ ಗವಾಸ್ಕರ್‌.

ನವದೆಹಲಿ: ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ರೋಹಿತ್ ಶರ್ಮಾ (Rohit sharma) ಅವರನ್ನು ಏಕದಿನ ನಾಯಕತ್ವದಿಂದ ತೆಗೆದು ಶುಭಮನ್ ಗಿಲ್ (Shubman Gill) ಅವರಿಗೆ ವಹಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ. ಈ ನಿರ್ಧಾರವು ಕೇವಲ ನಾಯಕತ್ವದ ಬದಲಾವಣೆಯಲ್ಲ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್‌ ODI World Cup 2027) ಟೂರ್ನಿಯಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಭವಿಷ್ಯಕ್ಕಾಗಿ ಯುವ ನಾಯಕನನ್ನು ಸಿದ್ಧಪಡಿಸುವುದು ನಿರ್ಣಾಯಕ ಎಂದು ಹೇಳುವ ಮೂಲಕ ಬ್ಯಾಟಿಂಗ್‌ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಅಜಿತ್‌ ಅಗರ್ಕರ್ ಮತ್ತು ಬಿಸಿಸಿಐನ ಈ ಕ್ರಮಕ್ಕೆ ಪ್ರಮುಖ ಕಾರಣಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಯಸ್ಸು ಹೆಚ್ಚಾಗುತ್ತಿದೆ ಮತ್ತು ಮುಖ್ಯವಾಗಿ ಅವರ ಪಂದ್ಯದ ಅಭ್ಯಾಸದ ಕೊರತೆ. ಇಬ್ಬರೂ ಅನುಭವಿಗಳು ಟೆಸ್ಟ್ ಮತ್ತು ಟಿ20ಐಗಳಿಂದ ನಿವೃತ್ತರಾಗಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಅಂತಾರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಏಕದಿನ ಪಂದ್ಯಗಳ ಸಂಖ್ಯೆ ಗಣನೀಯವಾಗಿ ಕುಗ್ಗಿರುವುದರಿಂದ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌ವರೆಗೆ ಆಡುವ ಸಾಧ್ಯತೆಗಳು ಕಡಿಮೆ ಎಂದು ಗವಾಸ್ಕರ್ ಅಂದಾಜಿಸಿದ್ದಾರೆ. ದ್ವಿಪಕ್ಷೀಯ ಸರಣಿಗಳು ಹೆಚ್ಚಾಗಿ ಟೆಸ್ಟ್ ಮತ್ತು ಟಿ20 ಐಗಳನ್ನು ಒಳಗೊಂಡಿರುತ್ತವೆ.

"ರೋಹಿತ್ ಶರ್ಮಾ ವರ್ಷಕ್ಕೆ ಕೇವಲ 5-7 ಏಕದಿನ ಪಂದ್ಯಗಳನ್ನು ಆಡಿದರೆ, ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗೆ ನಿಮಗೆ ಅಗತ್ಯವಿರುವ ರೀತಿಯ ಅಭ್ಯಾಸವನ್ನು ಅವರು ಪಡೆಯುವುದಿಲ್ಲ. ತಂಡದಲ್ಲಿ ಅವರ ಸ್ಥಾನ ಖಚಿತವಿಲ್ಲ. ಈ ಕಾರಣದಿಂದಲೇ ಶುಭಮನ್ ಗಿಲ್‌ಗೆ ನಾಯಕತ್ವ ನೀಡಿ ತರಬೇತಿ ನೀಡಲು ನಿರ್ಧರಿಸಲಾಗಿದೆ," ಎಂದು ಸುನೀಲ್‌ ಗವಾಸ್ಕರ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs AUS: ಭಾರತ ಒಡಿಐ ತಂಡದಿಂದ ಜಸ್‌ಪ್ರೀತ್‌ ಔಟ್‌? ಇದಕ್ಕೆ ಕಾರಣ ಇಲ್ಲಿದೆ!

ಬಿಸಿಸಿಐ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ, ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ದೇಶಿ ಕ್ರಿಕೆಟ್ (ವಿಜಯ್ ಹಝಾರೆ ಟ್ರೋಫಿ) ಆಡಲು ಹಿಂದೇಟು ಹಾಕುತ್ತಿದ್ದಾರೆ. ಏಕದಿನ ಮಾದರಿಯಲ್ಲಿ ಉಳಿಯಲು ಬಯಸಿದರೆ, ಅವರು ಹೆಚ್ಚು ಅಭ್ಯಾಸ ಮಾಡಬೇಕಾಗುತ್ತದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

"ಆಟಗಾರರಿಗಿಂತ ಯಾವಾಗಲೂ ತಂಡ ಮೊದಲು ಬರುತ್ತದೆ," ಎಂದು ಸ್ಪಷ್ಟಪಡಿಸಿದ ಗವಾಸ್ಕರ್, ತಂಡವು ಎರಡು ವರ್ಷಗಳ ಹಿಂದೆ ಯೋಚಿಸಬೇಕಾಗಿರುವುದರಿಂದ ರೋಹಿತ್ ಶರ್ಮಾ ಈ ನಿರ್ಧಾರವನ್ನು ಒಪ್ಪುತ್ತಾರೆ. ಒಬ್ಬ ಆಟಗಾರನು ಬದ್ಧತೆಯಿಲ್ಲದಿದ್ದರೆ ಮತ್ತು ಮುಂದಿನ ಎರಡು ವರ್ಷಗಳವರೆಗೆ ತಾನು ಸಿದ್ಧನಾಗಿರುತ್ತೇನೆ ಎಂದು ಹೇಳಲು ಸಾಧ್ಯವಾಗದಿದ್ದರೆ, ಅವರು ಕೆಟ್ಟ ಸುದ್ದಿಗೆ ಸಿದ್ಧನಾಗಿರಬೇಕು," ಎಂದು ಅವರು ಹೇಳಿದ್ದಾರೆ.